ETV Bharat / sukhibhava

ಹಠಾತ್​ ಸಂಭವಿಸುವ ಹೃದಯಸ್ತಂಭನ.. ಸಾವಿನ ಮನೆ ಬಾಗಿಲು ತಲುಪಿ ಬಂದವರ ಅನುಭವದ ಅಧ್ಯಯನ ಬಹಿರಂಗ

ಹೃದಯ ಸ್ತಂಭನದ ನಂತರ ಕಾರ್ಡಿಯೋಪಲ್ಮನರಿ ರೆಸಸಿಟೇಶನ್(ಸಿಪಿಆರ್) ಮಾಡಿದಾಗ ಬದುಕುಳಿದಿರುವ ಐದು ಜನರಲ್ಲಿ ಒಬ್ಬರು ತಾವು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಮತ್ತು ಸಾವಿನ ಅಂಚಿನಲ್ಲಿ ಅವರ ಅನುಭವಗಳನ್ನು ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಗ್ರಾಸ್‌ಮನ್ ಸ್ಕೂಲ್ ಆಫ್ ಮೆಡಿಸಿನ್ ಮತ್ತು ಇತರೆ ಸಂಶೋಧಕರ ನೇತೃತ್ವದಲ್ಲಿ ನಡೆದ ಮೊದಲ ಅಧ್ಯಯನದ ಮಾಹಿತಿ ಬಹಿರಂಗ.

ಹೃದಯ ಸ್ತಂಭನ
cardiac arrest
author img

By

Published : Nov 7, 2022, 5:15 PM IST

ನ್ಯೂಯಾರ್ಕ್: ಇತ್ತೀಚಿನ ದಿನಗಳಲ್ಲಿ ದೊಡ್ಡವರು, ಸಣ್ಣವರು ಎಂಬ ಭೇದವಿಲ್ಲದೆ ಅನೇಕ ಮಂದಿಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಸಣ್ಣ ವಯಸ್ಸಿನಲ್ಲಿಯೇ ಹೃದಯಸ್ತಂಭನದಿಂದ ಪ್ರಾಣ ಕಳೆದುಕೊಂಡ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಹೀಗೆ ಚಿಕ್ಕ ವಸ್ಸಿನಲ್ಲಿಯೇ ತಮ್ಮ ಪ್ರಾಣ ಕಳೆದುಕೊಂಡವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಂಟಿಕಾನ್ ನಿವಾಸಿ ಮೋಕ್ಷಿತ್​ ಎಂಬ 2ನೇ ತರಗತಿಯ ವಿದ್ಯಾರ್ಥಿ ಮೂರು ದಿನಗಳ ಹಿಂದೆ ತಂದೆ ಎದುರೇ ಸಾವನ್ನಪ್ಪಿದ್ದ. ಚಿಕ್ಕಮಗಳೂರು ಜಿಲ್ಲೆಯಲ್ಲಿ 9 ನೇ ತರಗತಿಯ ವಿದ್ಯಾರ್ಥಿನಿ ಕಳೆದ ವಾರ ಹೃದಯಸ್ತಂಭನದಿಂದ ಅಸುನೀಗಿದ್ದಳು.

ಕಳೆದ ವರ್ಷ ಕರ್ನಾಟಕ ರತ್ನ, ಸ್ಯಾಂಡಲ್​ವುಡ್​ ಪವರ್​ಸ್ಟಾರ್​ ಪುನೀತ್ ರಾಜಕುಮಾರ್ ದಿಢೀರ್​ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತದ ಚಿತ್ರರಂಗ ಸೇರಿದಂತೆ ಕೋಟ್ಯಂತರ ಅಭಿಮಾನಿಗಳಿಗೆ ತೀವ್ರ ನೋವನ್ನುಂಟು ಮಾಡಿತ್ತು. ಹೀಗೆ ಚಿಕ್ಕ ವಯಸ್ಸಿನಲ್ಲಿ ಹಠಾತ್​ ಸಂಭವಿಸುವ ಈ ಹೃದಯಸ್ತಂಭ(Cardiac arrest) ಎಲ್ಲ ವಯಸ್ಸಿನವರಿಗೆ ಹೆಮ್ಮಾರಿಯಂತೆ ಕಾಡುತ್ತಿದೆ.

ಈ ಹೃದಯ ಸ್ತಂಭನದ ಕುರಿತಾದ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಗ್ರಾಸ್‌ಮನ್ ಸ್ಕೂಲ್ ಆಫ್ ಮೆಡಿಸಿನ್ ಮತ್ತು ಇತರೆ ಸಂಶೋಧಕರ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ಹೃದಯ ಸ್ತಂಭನದ ನಂತರ ಕಾರ್ಡಿಯೋಪಲ್ಮನರಿ ರೆಸಸಿಟೇಶನ್(ಸಿಪಿಆರ್) ಮಾಡಿದಾಗ ಬದುಕುಳಿದಿರುವ ಐದು ಜನರಲ್ಲಿ ಒಬ್ಬರು ತಾವು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಮತ್ತು ಸಾವಿನ ಅಂಚಿನಲ್ಲಿ ತಾವು ಸಂಭವಿಸಿದ ಅನುಭವಗಳನ್ನು ತಮ್ಮ ಮೊದಲ ಅಧ್ಯಯನದಲ್ಲಿ ಬಹಿರಂಗಪಡಿಸಿದ್ದಾರೆ.

ಈ ಅಧ್ಯಯನವು ಮೇ 2017 ಮತ್ತು ಮಾರ್ಚ್ 2020 ರ ನಡುವೆ ಅಮೆರಿಕ ಮತ್ತು ಇಂಗ್ಲೆಂಡ್​ನ 567 ಪುರುಷರು ಮತ್ತು ಮಹಿಳೆಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅವರ ಹೃದಯ ಬಡಿತ ನಿಂತ ಸಂದರ್ಭದಲ್ಲಿ ಸಿಪಿಆರ್ ಪಡೆದವರ ಮೇಲೆ ನಡೆಸಲಾಗಿದೆ.

ಚೇತರಿಸಿಕೊಂಡವರಲ್ಲಿ ವಿಶಿಷ್ಟವಾದ ಅನುಭವ: ಇದರಲ್ಲಿ ತಕ್ಷಣದ ಚಿಕಿತ್ಸೆಯನ್ನು ಪಡೆದ 10 ಪ್ರತಿಶತ ದಷ್ಟು ಜನರು ಬೇಗ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಹಿಂತಿರುಗಿದ್ದಾರೆ. ಹೀಗೆ ಬದುಕುಳಿದವರು ದೇಹದಿಂದ ಬೇರ್ಪಡುವಿಕೆಯ ಗ್ರಹಿಕೆ, ಯಾವುದೇ ನೋವು ಅಥವಾ ಯಾತನೆ ಇಲ್ಲದೆ ಘಟನೆಗಳನ್ನು ಗಮನಿಸುವುದು, ಜೀವನದ ಅರ್ಥಪೂರ್ಣ ಮೌಲ್ಯಮಾಪನ, ಸೇರಿದಂತೆ ಕಾರ್ಯಗಳು, ಉದ್ದೇಶಗಳು ಮತ್ತು ಆಲೋಚನೆಗಳ ಬಗ್ಗೆ ವಿಶಿಷ್ಟವಾದ ಅನುಭವವನ್ನು ಅನುಭವಿಸಿದ ಬಗ್ಗೆ ವಿವರಿಸಿರುವುದಾಗಿ ಅಧ್ಯನದಲ್ಲಿ ತಿಳಿದು ಬಂದಿದೆ.

ಸಾವಿನ ಈ ಅನುಭವಗಳು ಭ್ರಮೆಗಳು, ಕನಸುಗಳು ಅಥವಾ ಸಿಪಿಆರ್​ ಪ್ರೇರಿತ ಪ್ರಜ್ಞೆಯಿಂದ ಭಿನ್ನವಾಗಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಮರು ಅಲೋಚಿಸಿದ ಅನುಭವಗಳು ಮತ್ತು ಮೆದುಳಿನ ತರಂಗ ಬದಲಾವಣೆಗಳು ಸಾವಿನ ಸಮೀಪ ಅನುಭವದ ಮೊದಲ ಚಿಹ್ನೆಗಳಾಗಿವೆ ಎಂದು ತಜ್ಞರು ತಿಳಿಕೊಂಡಿದ್ದಾರೆ.

ನಾವು ಮೊದಲ ಬಾರಿಗೆ ಈ ಅಧ್ಯಯನದ ಮೂಲಕ ವಿವರವಾದ ಮಾಹಿತಿಯನ್ನು ಕಲೆಹಾಕಿರುವುದಾಗಿ ಅಧ್ಯಯನದ ತನಿಖಾಧಿಕಾರಿ ಮತ್ತು ಎನ್.ವೈ. ಯು ಲ್ಯಾಂಗೋನ್ ಹೆಲ್ತ್ ನ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಸ್ಯಾಮ್ ಪರ್ನಿಯಾ ಈ ಬಗ್ಗೆ ಮಾಹಿತಿ ನೀಡಿದರು.

ಇದನ್ನೂ ಓದಿ:ದಿನಕ್ಕೊಂದೇ ನೆಲ್ಲಿಕಾಯಿ ಸೇವನೆ: ದೇಹದ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಕಾರಿ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.