ಸುರಪುರ: ಗ್ರಾಮದ 70ಕ್ಕೂ ಹೆಚ್ಚಿನ ಯುವಕರು ಸಮೀಪದ ಕೃಷ್ಣಾ ನದಿಗೆ ಹೋಗಿ ಸ್ನಾನ ಮಾಡಿ ನದಿಯಿಂದ ನೀರು ತಂದು ಗ್ರಾಮದಲ್ಲಿನ ಎಲ್ಲಾ ದೇವರಿಗೆ ಗಂಗಾ ಸ್ನಾನ ಮಾಡಿಸಿ ಕೊರೊನಾ ವೈರಸ್ ನಿರ್ಮೂಲನೆಯಾಗಲೆಂದು ಪ್ರಾರ್ಥಿಸಿದರು.

ಭಾರತ ದೇಶ ವಿವಿಧ ಸಂಸ್ಕೃತಿ ಮತ್ತು ಆಚರಣೆಯುಳ್ಳ ದೇಶವಾಗಿದ್ದು, ಕೊರೊನಾ ನಿರ್ಮೂಲನೆಗೆ ಒಂದೆಡೆ ವೈದ್ಯಕೀಯ ಲೋಕ ಔಷಧಿ ಕಂಡು ಹಿಡಿಯುವಲ್ಲಿ ನಿರತವಾಗಿದೆ. ಮತ್ತೊಂದೆಡೆ ಜನರು ದೇವರ ಮೊರೆ ಹೋಗಿ ಹರಕೆ ಸಲ್ಲಿಸುವುದು, ಹೋಮ ಹವನ ಪೂಜೆಗಳ ಮೂಲಕ ಪ್ರಾರ್ಥಿಸುತ್ತಿದ್ದಾರೆ.