ETV Bharat / state

ಕೋವಿಶೀಲ್ಡ್ ಸರಬರಾಜಿಗೆ ಯಾದಗಿರಿ ಜಿಲ್ಲಾಡಳಿತದಿಂದ ಸಿದ್ಧತೆ

ನಾಳೆಯಿಂದ ಕೋವಿಶೀಲ್ಡ್​ ಲಸಿಕೆ ನೀಡಲಾಗುತ್ತಿದ್ದು, ಯಾದಗಿರಿ ಜಿಲ್ಲಾಡಳಿತ ವಿತರಣಾ ಕೇಂದ್ರಗಳಿಗೆ ಲಸಿಕೆಗಳನ್ನು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಂಡಿದೆ.

ಕೋವಿಶೀಲ್ಡ್ ಸರಬರಾಜಿಗೆ ಯಾಗಿರಿ ಜಿಲ್ಲಾಡಳಿತದಿಂದ ಸಿದ್ಧತೆ
Yedgiri District administration preparing for supply of Covishield
author img

By

Published : Jan 15, 2021, 5:33 PM IST

ಯಾದಗಿರಿ: ನಾಳೆ ರಾಜ್ಯಾದ್ಯಂತ ಕೊರೊನಾ ಲಸಿಕೆ ನೀಡುವ ಕಾರ್ಯ ನಡೆಯಲಿದ್ದು, ಕೋವಿಶೀಲ್ಡ್​​ ಅನ್ನು ಸರಬರಾಜು ಮಾಡಲು ಜಿಲ್ಲಾಡಳಿತ ಭರದ ಸಿದ್ಧತೆ ಮಾಡಿಕೊಂಡಿದೆ.

ಕೋವಿಶೀಲ್ಡ್ ಸರಬರಾಜಿಗೆ ಯಾಗಿರಿ ಜಿಲ್ಲಾಡಳಿತದಿಂದ ಸಿದ್ಧತೆ

ಜಿಲ್ಲೆಗೆ ಈಗಾಗಲೇ ಸರ್ಕಾರ 3 ಸಾವಿರ ಡೋಸ್ ವಿತರಣೆ ಮಾಡಲಾಗಿದ್ದು, ಲಸಿಕೆಗಳನ್ನು ನಗರದ ಡಿಎಚ್​ಒ ಕಚೇರಿಯ ಕೋಲ್ಡ್​​ಸ್ಟೋರ್ ರೂಂನಲ್ಲಿ ಸಂಗ್ರಹ ಮಾಡಿ ಇಡಲಾಗಿದೆ. ಇಂದು ಜಿಲ್ಲೆಯ 5 ವಿತರಣೆ ಕೇಂದ್ರಗಳಿಗೆ ಲಸಿಕೆ ಪೂರೈಕೆ ಮಾಡಲಾಗುತ್ತಿದ್ದು, ಖುದ್ದು ಕೋಲ್ಡ್ ಸ್ಟೋರ್ ರೂಂಗೆ ಡಿಎಚ್ಒ ಇಂದುಮತಿ ಕಾಮಶೆಟ್ಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಓದಿ: ನಾನು ಮುಂಬೈಗೆ ಹೋಗಿರಲಿಲ್ಲ, ಆ ಗುಂಪಿನಲ್ಲೂ ನಾನಿಲ್ಲ : ಶ್ರೀಮಂತ್​​ ಪಾಟೀಲ್​​

ಲಸಿಕೆ ವಿತರಣೆ ಅಭಿಯಾನದ ಅಂಗವಾಗಿ ನಾಳೆ 500 ಕೊರೊನಾ ವಾರಿಯರ್ಸ್​ಗಳಿಗೆ ಲಸಿಕೆ ವಿತರಣೆ ಮಾಡಲಾಗುತ್ತಿದ್ದು, ಜಿಲ್ಲೆಯ 5 ಲಸಿಕೆ ವಿತರಣೆ ಮಾಡುವ ಕೇಂದ್ರಗಳಿಗೆ ಲಸಿಕೆ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಲಸಿಕೆ ಪೂರೈಕೆಗೆ ಸಿದ್ಧತೆ ಮಾಡಿಕೊಂಡಿದೆ. ಪ್ರತಿ ಲಸಿಕೆ ಕೇಂದ್ರಗಳಿಗೆ 100 ಲಸಿಕೆಗಳನ್ನು ಇಂದು ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಇಂದುಮತಿ ಕಾಮಶೆಟ್ಟಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.