ಯಾದಗಿರಿ: ಕೊರೊನಾ ಸೋಂಕಿಗೆ ತುತ್ತಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಸಕ ವೆಂಕಟರೆಡ್ಡಿ ಮುದ್ನಾಳ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕೊರೊನಾ ಗೆದ್ದ ಶಾಸಕರನ್ನು ಜಿಲ್ಲೆಯ ಬಿಜೆಪಿ ಮುಖಂಡರುಗಳಾದ ಮಹಾದೇವಪ್ಪ ಯಲಸತ್ತಿ, ಶರಣಗೌಡ ಬಾಡಿಯಾಳ, ನಗರಸಭಾ ಸದಸ್ಯ ವಿಲಾಸ್ ಪಾಟೀಲ ಶಾಸಕರ ಭವನದಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಆದಷ್ಟು ಬೇಗ ಕ್ಷೇತ್ರಕ್ಕೆ ಆಗಮಿಸಿ ಜನರ ಸೇವೆಯಲ್ಲಿ ತೊಡಗುವುದಾಗಿ ಈ ವೇಳೆ ಶಾಸಕರು ತಿಳಿಸಿದರು.