ETV Bharat / state

ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ - ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ'

ಯಾದಗಿರಿ ನಗರದ ಜಿಲ್ಲಾಡಳಿತ ಭವನದ ಅಡಿಟೋರಿಯಂನಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ.

Yadgiri: Birth anniversary celebration of Ambigara Chowdayya
ಯಾದಗಿರಿ: ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ
author img

By

Published : Jan 22, 2020, 8:50 AM IST

ಯಾದಗಿರಿ: ನಿಜ ಶರಣ ಅಂಬಿಗರ ಚೌಡಯ್ಯನವರು ನೇರ ನುಡಿಯವರಾಗಿದ್ದರು. ಹೀಗಾಗಿಯೇ ಅವರಿಗೆ ನಿಜ ಶರಣ ಅಂತಾ ಬಿರುದು ಬಂದಿದೆ ಎಂದು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಹೇಳಿದರು.

ಯಾದಗಿರಿ: ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ

ನಗರದ ಜಿಲ್ಲಾಡಳಿತ ಭವನದ ಅಡಿಟೋರಿಯಂನಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಹಿಂದುಳಿದ ವರ್ಗಗಳ ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಂಯುಕ್ತಾಶ್ರಯದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಬಳಿಕ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ಅಂಬಿಗರ ಚೌಡಯ್ಯ ಬಸವಣ್ಣನವರ ಬೆನ್ನುಲುಬಾಗಿದ್ದರು. ಇಂತಹ ಮಹಾನೀಯ ನಿಜ ಶರಣರ ವಚನಗಳು, ತತ್ವಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ. ರಜಪೂತ ಮಾತನಾಡಿ, 12ನೇ ಶತಮಾನದ ಅನೇಕ ಶರಣರು ತಮ್ಮ ವಚನಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ. ಈ ಎಲ್ಲಾ ಶರಣರ ವಚನಗಳಲ್ಲಿ ಹಲವನ್ನು ನೇರವಾಗಿ, ದಿಟ್ಟವಾಗಿ ವಚನಗಳ ಮೂಲಕವೇ ಉತ್ತರಿಸುವ ಸರಳರಲ್ಲಿ ಅತಿ ಸರಳರು ನಿಜ ಶರಣ ಅಂಬಿಗರ ಚೌಡಯ್ಯ ಎಂದು ಹೇಳಿದರು.

Intro:ಯಾದಗಿರಿ: ನಿಜ ಶರಣ ಅಂಬಿಗರ ಚೌಡಯ್ಯನವರು ನೇರನೂಡಿಯವರಾಗಿದ್ದರು. ಹೀಗಾಗಿ ಅವರಿಗೆ ನಿಜ ಶರಣ ಅಂತಾ ಬಿರುದು ಬಂದಿದೆ ಅಂತಾ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ನುಡಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಹಿಂದುಳಿದ ವರ್ಗಗಳ ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಂಯುಕ್ತಾಶ್ರಯದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದರು..

Body:ನಗರದ ಜಿಲ್ಲಾಡಳಿತ ಭವನದ ಅಡಿಟೋರಿಯಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಸವಣ್ಣನವರ ಬೆನ್ನುಲುಬಾಗಿ ಅಂಬಿಗರ ಚೌಡಯ್ಯ ಇದ್ದರು. ಇಂಥ ಮಹಾನೀಯ ನಿಜ ಶರಣರಣ ವಚನಗಳು, ತತ್ವಗಳನ್ನು ಅಳವಡಿಸಿಕೊಳ್ಳಬೆಕು ಅಂತ ತಿಳಿಸಿದರು ಇನ್ನು ಇದೇ ವೇಳೆ ಮಾತನಾಡಿದರು. ನಂತರ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ. ರಜಪೂತ ಅವರು ೧೨ನೇ ಶತಮಾನದ ಅನೇಕ ಶರಣರು ತಮ್ಮ ವಚನಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದ್ದು, ಎಲ್ಲಾ ಶರಣರಲ್ಲಿ ನೇರ, ದಿಟ್ಟವಾಗಿ ಯಾರಿಗೂ ಹೆದರದೇ ಅನೇಕ ವಚನಗಳ ಮೂಲಕ ಉತ್ತರಿಸುವ ಸರಳರಲ್ಲಿ ಸರಳರು ನಿಜ ಶರಣ ಅಂಬಿಗರ ಚೌಡಯ್ಯ ಅಂತಾ ಹೇಳಿದರು.

Conclusion:ಕಾರ್ಯಕ್ರಮದಲ್ಲಿ ನೂರಾರು ಸಾರ್ವಜನಿಕರು ಪಾಲ್ಗೊಂಡು ನಿಜಶರಣ ಅಂಬಿಗರ ಚೌಡಯ್ಯ ಸಮಾಜಕ್ಕೆ ನೀಡಿದ ಕೊಡುಗೆ ಸ್ಮರಿಸಿದರು....

ಬೈಟ್: ೦೧ ವೆಂಕಟರೆಡ್ಡಿಗೌಡ ಮುದ್ನಾಳ, ಶಾಸಕರು ಯಾದಗಿರಿ...

ಬೈಟ್: ೦೨ ಪ್ರಕಾಶ ಜಿ ರಜಪೂತ_ಅಪರ ಜಿಲ್ಲಾಧಿಕಾರಿ ಯಾದಗಿರಿ...
ETV Bharat Logo

Copyright © 2025 Ushodaya Enterprises Pvt. Ltd., All Rights Reserved.