ETV Bharat / state

ಗಂಡನ ಹತ್ಯೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುವ ಯತ್ನ: ಪತ್ನಿಯ ಕಳ್ಳಾಟ ಬಯಲಿಗೆಳೆದ ಪೊಲೀಸರು! - etv bharat kannada

ಪ್ರಿಯಕರನ ಜೊತೆ ಸೇರೆ ಪತಿಯನ್ನು ಕೊಲೆ ಮಾಡಿದ್ದ ಪತ್ನಿಯನ್ನು ಮತ್ತು ಆಕೆಯ ಪ್ರಿಯಕರನನ್ನು ಯಾದಗಿರಿ ಪೊಲೀಸರು ಬಂಧಿಸಿದ್ದಾರೆ.

yadgir-police-arrested-wife-and-her-paramour-for-man-murder
ಗಂಡನ ಹತ್ಯೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುವ ಯತ್ನ: ಪತ್ನಿಯ ಕಳ್ಳಾಟ ಬಯಲಿಗೆಳೆದ ಪೊಲೀಸರು
author img

By

Published : Jul 25, 2023, 11:02 PM IST

Updated : Jul 26, 2023, 12:28 PM IST

ಕೊಲೆ ಪ್ರಕರಣದ ಬಗ್ಗೆ ಎಸ್​ಪಿ ಡಾ. ಸಿ. ಬಿ. ವೇದಮೂರ್ತಿ ಮಾಹಿತಿ

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ಪತಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಕಥೆ ಸೃಷ್ಟಿಸಿ ಕಣ್ಣೀರು ಹಾಕಿದ್ದ ಹಂತಕಿ ಪತ್ನಿ ಜೈಲು ಪಾಲಾಗಿರುವ ಘಟನೆ ನಡೆದಿದೆ. ಕಳೆದ ಜೂ. 15 ರಂದು ಕಾಶೆಪ್ಪ ಎಂಬ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಕೊಂಕಲ್ ಗ್ರಾಮದ ಜಮೀನಿನ ಮರವೊಂದಕ್ಕೆ ನೇಣು ಬೀಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.

ಈ ಘಟನೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಕಾಶೆಪ್ಪ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಅಲ್ಲ. ಹೀಗಾಗಿ, ಸಾವಿನ ಬಗ್ಗೆ ಸಂಶಯವಿದೆ ಎಂದು ಗುರುಮಠಕಲ್ ಠಾಣೆಯಲ್ಲಿ ಮೃತ ಕಾಶೆಪ್ಪನ ಸಹೋದರಿ ಕಾಶೆಮ್ಮ ದೂರು ನೀಡಿದ್ದರು. ಈ ಬಗ್ಗೆ ಗುರುಮಠಕಲ್ ಸಿಪಿಐ ದೌಲತ್ .ಎನ್.​ ಕುರಿ ಅವರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಅನೈತಿಕ ಸಂಬಂಧವೇ ಕೊಲೆಗೆ ಕಾರಣ: ತಾಲೂಕಿನ ಕೊಂಕಲ್ ಗ್ರಾಮದ ಕಾಶೆಪ್ಪ ಹಾಗೂ ಅನಿತಾ ದಂಪತಿಗಳು ಕೃಷಿ ಮಾಡಿಕೊಂಡು ನೆಮ್ಮದಿ ಬದುಕು ಕಟ್ಟಿಕೊಂಡಿದ್ದರು. ದಂಪತಿಗೆ 15 ವರ್ಷದ ಹಿಂದೆ ಮದುವೆಯಾಗಿತ್ತು. ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ. ಆದರೆ, ಕಾಶೆಪ್ಪನ ಪತ್ನಿಯು ಮನೆ ಹಿಂಭಾಗದ ನಾಗೇಶ್​ ಎಂಬುವವರ ಜಮೀನನಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಜಮೀನು ಕೆಲಸಕ್ಕೆ ಹೋದಾಗ ಅನಿತಾ ಹಾಗೂ ನಾಗೇಶನ ನಡುವೆ ಪ್ರೇಮಾಂಕುರವಾಗಿದೆ. ಕಳೆದ ಮೂರು ವರ್ಷದಿಂದ ಇವರು ವಿವಾಹೇತರ ಸಂಬಂಧ ಹೊಂದಿದ್ದರು.

ಈ ವಿಷಯವಾಗಿ ಕಾಶೆಪ್ಪ ಹಾಗೂ ಅನಿತಾ ನಡುವೆ ಸಾಕಷ್ಟು ಬಾರಿ ಜಗಳವಾಗಿತ್ತು. ಈ ಬಗ್ಗೆ ಕುಟುಂಬದವರು ತಿಳಿ ಹೇಳಿದ್ದರು ನಾಗೇಶ್ ಮತ್ತು ಅನಿತಾರ ವಿವಾಹೇತರ ಸಂಬಂಧ ಮುಂದುವರೆದಿತ್ತು. ಎರಡು ತಿಂಗಳ ಹಿಂದೆ ನಾಗೇಶ ಬೆಂಗಳೂರಿಗೆ ತೆರಳಿದ್ದ, ಆದರೂ ಇಬ್ಬರು ಫೋನಿನಲ್ಲಿ ಮಾತನಾಡುತ್ತಿದ್ದರು. ಈ ವೇಳೆ, ಇಬ್ಬರು ಕಾಶೆಪ್ಪನನ್ನು ಕೊಲೆ ಮಾಡಲು ಸ್ಕೇಚ್ ಹಾಕಿದ್ದರು. ನಂತರ ಬೆಂಗಳೂರಿನಿಂದ ವಾಪಾಸ್​ ಬಂದಿದ್ದ ನಾಗೇಶ ತಾನು ಬೆಂಗಳೂರಿನಲ್ಲಿ ಇದ್ದೆನೆಂದು ಸೃಷ್ಟಿಸಲು ಹಗಲು ಹೊತ್ತಿನಲ್ಲಿ ಊರಿನಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.

ಬಳಿಕ ಜೂನ್.15 ರಂದು ನಾಗೇಶ ಮತ್ತು ಅನಿತಾ ಸೇರಿ ಮನೆಯಲ್ಲಿ ಮಲಗಿದ್ದ ಕಾಶೆಪ್ಪನನ್ನು ಹಗ್ಗದಿಂದ ಉಸಿರು ಗಟ್ಟಿಸಿ ಕೊಲೆ ಮಾಡಿ. ಮೃತದೇಹವನ್ನು ಬೈಕ್ ಮೇಲೆ ಇಟ್ಟುಕೊಂಡು ಜಮೀನಿನ ಮರಕ್ಕೆ ನೇಣು ಹಾಕಿ ಆತ್ಮಹತ್ಯೆ ಎಂಬಂತೆ ಬಿಂಬಿಸಿದ್ದರು. ನಾಗೇಶ ಊರಲ್ಲಿ ಕಾಣಿಸಿಕೊಳ್ಳದೇ ತಲೆಮರಿಸಿಕೊಂಡಿದ್ದ. ಅನಿತಾ ತನ್ನ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಥೆ ಕಟ್ಟಿದ್ದಳು.

ಬೈಕ್‌ಗೆ ಅಂಟಿದ್ದ ರಕ್ತದ ಕಲೆ, ಒಡೆದ ಬಳೆಗಳು ಹಾಗೂ ಹಲವು ಸಾಕ್ಷಿಗಳನ್ನು ಆಧರಿಸಿ, ಗುರುಮಠಕಲ್ ಪೊಲೀಸರು ತನಿಖೆ ನಡೆಸಿದಾಗ ಪತ್ನಿ ಅನಿತಾ ಹಾಗೂ ನಾಗೇಶ ಹಂತಕರೆಂದು ಗೊತ್ತಾಗುತ್ತದೆ. ನಂತರ ಹಂತಕರಾದ ಅನಿತಾ ಹಾಗೂ ನಾಗೇಶ ಅವರನ್ನು ಗುರುಮಠಕಲ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಈ ಕುರಿತು ಎಸ್​ಪಿ ಡಾ. ಸಿ. ಬಿ. ವೇದಮೂರ್ತಿ ಮಾತನಾಡಿ, ಕಳೆದ ತಿಂಗಳು 15 ರಂದು ಕಾಶೆಪ್ಪ ಎಂಬ ವ್ಯಕ್ತಿ ಸಾವನ್ನಪ್ಪಿದ್ದರು. ಕೊಂಕಲ್ ಗ್ರಾಮದ ಜಮೀನಿನ ಮರವೊಂದಕ್ಕೆ 35 ವರ್ಷದ ಕಾಶೆಪ್ಪನ ಮೃತದೇಹ ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

ಇದನ್ನೂ ಓದಿ: ಚಾಮರಾಜನಗರ: ಕುಡಿದ ಮತ್ತಿನಲ್ಲಿ ಆ್ಯಸಿಡ್ ಕುಡಿದು ವ್ಯಕ್ತಿ ಸಾವು

Last Updated : Jul 26, 2023, 12:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.