ಯಾದಗಿರಿ: ಜಮೀನು ಅಳತೆ ಮಾಡಿಕೊಡಲು ಲಂಚದ ಬೇಡಿಕೆ ಇರಿಸಿದ ಅಧಿಕಾರಿಯೊಬ್ಬರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲಿಗೆ ಬಿದ್ದಿದ್ದಾರೆ.
ಭೂಮಾಪನ ಅಧಿಕಾರಿ ರಘುರಾಮ್ ಎಂಬುವವರು ಲಂಚ ಆಪಾದನೆಯಡಿ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಂಜು ಚವ್ಹಾಣ್ ಎಂಬುವವರ ಜಮೀನು ಅಳತೆ ವಿಚಾರವಾಗಿ ಅಧಿಕಾರಿ ರಘುರಾಮ್ ಐದು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಬಂದಿತ್ತು.
ಇದನ್ನೂ ಓದಿ: ಯುವತಿಗೆ ವಿಷವುಣಿಸಿ ಕೊಲೆಗೆ ಯತ್ನಿಸಿದ ಯುವಕ: ಪೊಲೀಸರಿಗೆ ದೂರು ನೀಡಿದ ಪೋಷಕರು
ಮಂಗಳವಾರ ನಗರದ ಹೊಸಳ್ಳಿ ಕ್ರಾಸ್ ಬಳಿ ಇರುವ ಹೋಟೆಲ್ ಒಂದರಲ್ಲಿ ಸಂಜು ಚವ್ಹಾಣ್ ಅವರಿಂದ ಮುಂಗಡವಾಗಿ 2 ಸಾವಿರ ರೂ. ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಲಬುರಗಿ ಎಸಿಬಿ ಎಸ್ ಪಿ ಮಹೇಶ್ ಮೇಘಣ್ಣವರ್ ನೇತ್ರತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ, ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.