ETV Bharat / state

ಯಾದಗಿರಿ ಕಮಲ ಪಾಳಯದಲ್ಲಿ ಅಸಮಾಧಾನ : ನಾಲ್ವರಿಗೆ ಜಿಲ್ಲಾಧ್ಯಕ್ಷರಿಂದ ನೋಟಿಸ್ - Yadgir bjp president Dr. Sharanabhupalreddy notice

ಬಿಜೆಪಿಯ ನೂತನ ಜಿಲ್ಲಾಧ್ಯಕ್ಷ ಆಯ್ಕೆಯ ಸಂದರ್ಭದಲ್ಲಿ, ಗದ್ದಲ ಉಂಟಾಗಿರುವ ವಿಚಾರ ತಡವಾಗಿ ಬೆಳಕಿದೆ ಬಂದಿದೆ. ಇದರಿಂದಾಗಿ ಜಿಲ್ಲಾ ಕಮಲ ಪಾಳಯದಲ್ಲಿ ಅಸಮಧಾನ ಭುಗಿಲೆದ್ದಿರುವುದು ಸ್ಪಷ್ಟವಾಗಿದೆ.

ಡಾ. ಶರಣಭೂಪಾಲರೆಡ್ಡಿ
r-sharanabhupalreddy
author img

By

Published : Jan 31, 2020, 9:03 PM IST

ಯಾದಗಿರಿ: ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ, ಗದ್ದಲ ಉಂಟಾಗಿರುವ ವಿಚಾರ ತಡವಾಗಿ ಬೆಳಕಿದೆ ಬಂದಿದೆ. ಇದರಿಂದಾಗಿ ಜಿಲ್ಲಾ ಕಮಲ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿರುವುದು ಸ್ಪಷ್ಟವಾಗಿದೆ.

ಡಾ. ಶರಣ ಭೂಪಾಲರೆಡ್ಡಿ ನಾಯ್ಕಲ್ ಅವರನ್ನು ಪಕ್ಷದ ವರಿಷ್ಠರು ನೂತನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದು, ನೇಮಕ ವೇಳೆಯಲ್ಲಿ ಕೆಲ ಮುಖಂಡರು ಅಸಮಾಧಾನ ಹೊರಹಾಕುವ ಮೂಲಕ ಗದ್ದಲ ಮಾಡಿದ್ದಾರೆ. ಗದ್ದಲ ಮಾಡಿರುವ ಮುಖಂಡರುಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲು ಕಾರಣ ಕೇಳಿ, ನೂತನ ಜಿಲ್ಲಾಧ್ಯಕ್ಷ ಶರಣಭೂಪಾಲರೆಡ್ಡಿ ನೋಟಿಸ್ ನೀಡಿದ್ದಾರೆ.

r-sharanabhupalreddy
ನಾಲ್ವರು ಮುಖಂಡರಿಗೆ ಡಾ. ಶರಣಭೂಪಾಲರೆಡ್ಡಿ ನೋಟಿಸ್

ಜನವರಿ 12 ರಂದು ಕಲಬುರಗಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ಶಾಸಕರಾದ ರಾಜಕುಮಾರ ಪಾಟೀಲ್ ತೆಲ್ಕೂರ್, ವೆಂಕಟರೆಡ್ಡಿ ಮುದ್ನಾಳ, ಎಂಎಲ್​​ಸಿ ಬಿ.ಜಿ. ಪಾಟೀಲ್ ಸೇರಿದಂತೆ ಹಲವು ಮುಖಂಡರು ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ, ಯಾದಗಿರಿ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರನ್ನಾಗಿ ಶರಣಭೂಪಾಲರೆಡ್ಡಿ ಅವರನ್ನ ಆಯ್ಕೆ ಮಾಡಲಾಗಿತ್ತು.

ಇದಕ್ಕೆ ಜಿಲ್ಲೆಯ ಬಿಜೆಪಿ ಮುಖಂಡರಾದ ಸಿದ್ದಣ್ಣಗೌಡ ಕಾಡಮನೋರ, ಖಂಡಪ್ಪ ದಾಸನ್, ಶರಣಗೌಡ ಬಾಡಿಯಾಳ ಹಾಗೂ ಪರಶುರಾಮ ಕುರಕುಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಪಕ್ಷದ ನಿಯಮ ಉಲ್ಲಂಘಿಸಿ ಗಂಭೀರವಾಗಿ ನಡೆದ ಸಭೆಯ ವೇದಿಕೆ ಎದುರುಗಡೆ, ಅಸಭ್ಯವಾಗಿ ವರ್ತಿಸುವ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಪಕ್ಷದ ನಾಯಕರ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಕಚೇರಿಯಲ್ಲಿನ ಕುರ್ಚಿಗಳನ್ನು ಧ್ವಂಸಗೊಳಿಸಿ ಅನುಚಿತವಾಗಿ ವರ್ತಿಸಿದ್ದಾರೆ. ಈ ನಾಲ್ಕು ಜನ ಪಕ್ಷದ ಗೌರವ ಮತ್ತು ಘನತೆಗೆ ಧಕ್ಕೆ ತಂದಿದ್ದಾರೆ ಎಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.

ಯಾದಗಿರಿ ಜಿಲ್ಲಾ ಬಿಜೆಪಿ ಕಚೇರಿ

ಇನ್ನು ಪಕ್ಷದ ವರಿಷ್ಠರ ಸೂಚನೆಯಂತೆ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲ ರೆಡ್ಡಿ, ಈ ನಾಲ್ಕು ಜನರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಕುರಿತು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ‌. ಒಂದು ವಾರದೊಳಗೆ ನೋಟಿಸ್​ಗೆ ಉತ್ತರ ನೀಡುವಂತೆ ಸೂಚಿಸಲಾಗಿದ್ದು, ಕಾರಣ ನೀಡದಿದ್ದರೆ ಪಕ್ಷದ ವರಿಷ್ಠರ ಗಮನಕ್ಕೆ ತಂದು ಕ್ರಮ ಜರಗಿಸಲಾಗುವದು ಅಂತ ನೋಟಿಸ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಯಾದಗಿರಿ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ನೇಮಕ ವಿಚಾರದಲ್ಲಿ, ಜಿಲ್ಲೆಯ ಕಮಲ ಪಾಳೆಯದಲ್ಲಿ ಅಸಮಧಾನ ಹೊಗೆಯಾಡುತ್ತಿರುವದು ಸ್ಪಷ್ಟವಾಗಿ ಕಾಣುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.