ETV Bharat / state

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಯಾದಗಿರಿ ಬಾಲಕಿ ಹೆಸರು: ಈಕೆಯ ಸಾಧನೆಯೇನು ಗೊತ್ತೇ? - ಗುರುಮಠಕಲ್ ಯಾದಗಿರಿ ಲೇಟೆಸ್ಟ್ ನ್ಯೂಸ್

ಗುರುಮಠಕಲ್ ನಗರದ ಫ್ರೆಂಟ್ ಲೈನ್ ಎಜ್ಯುಕೇಶನ್ ಸೊಸೈಟಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿರುವ ಬಾಲಕಿ ಶುಭಶ್ರೀ, 70 ಹಣ್ಣು, ತರಕಾರಿ, ಪ್ರಾಣಿ-ಪಕ್ಷಿಗಳ ಹೆಸರು ಹಾಗು ಅವುಗಳ ವೈಜ್ಞಾನಿಕ ಹೆಸರನ್ನು 55 ಸೆಕೆಂಡ್​​ನಲ್ಲಿ ಪಟಪಟನೇ ಹೇಳುತ್ತಾಳೆ.

Yadagiri girl's name for India Book of Record
ಇಂಡಿಯಾ ಬುಕ್ ಆಫ್ ರೆಕಾರ್ಡ್​ಗೆ ಯಾದಗಿರಿ ಬಾಲಕಿ ಹೆಸರು
author img

By

Published : Jul 6, 2021, 2:50 PM IST

Updated : Jul 6, 2021, 3:08 PM IST

ಗುರುಮಠಕಲ್(ಯಾದಗಿರಿ): ಹಣ್ಣು, ತರಕಾರಿ, ಪ್ರಾಣಿ-ಪಕ್ಷಿಗಳ ಹೆಸರು, ಅವುಗಳ ವೈಜ್ಞಾನಿಕ ಹೆಸರನ್ನು ಸುಲಲಿತವಾಗಿ ಹೇಳುವ ಮೂಲಕ ಯಾದಗಿರಿ ಜಿಲ್ಲೆಯ ಗುರುಮಠಕಲ್ ಬಾಲಕಿ ಈಗ ದಾಖಲೆ ಮಾಡಿದ್ದಾಳೆ. ಶೈಕ್ಷಣಿಕವಾಗಿ ಹಿಂದುಳಿದಿರುವ ಯಾದಗಿರಿ ಜಿಲ್ಲೆಗೆ ವಿದ್ಯಾರ್ಥಿ ಶುಭಶ್ರೀ ಕೀರ್ತಿ ತರುವ ಕೆಲಸ ಮಾಡಿದ್ದಾಳೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್​ಗೆ ಯಾದಗಿರಿ ಬಾಲಕಿ ಹೆಸರು

ಲಾಕ್​ಡೌನ್ ಅವಧಿಯಲ್ಲಿ ಸಮಯವನ್ನು ಸದುಪಯೋಗ ಮಾಡಿಕೊಂಡು ಪಠ್ಯದ ಜೊತೆಗೆ ಇನ್ನಿತರೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದ್ದಾಳೆ ಗುರುಮಠಕಲ್ ನಗರದ 11 ವರ್ಷದ ಬಾಲಕಿ ಶುಭಶ್ರೀ. ಗುರುಮಠಕಲ್ ನಗರದ ಫ್ರೆಂಟ್ ಲೈನ್ ಎಜ್ಯುಕೇಶನ್ ಸೊಸೈಟಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿರುವ ಈಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಕರ್ನಾಟಕ ಅಚೀವರ್ಸ್ ರೆಕಾರ್ಡ್ ಆಫ್ ಬುಕ್ ನಲ್ಲಿ ಸ್ಥಾನ ಪಡೆದು ಮೆಡಲ್ ಹಾಗೂ ಸರ್ಟಿಫಿಕೇಟ್ ಪಡೆದುಕೊಂಡಿದ್ದಾಳೆ.

ಪ್ರಾಣಿ, ಪಕ್ಷಿಗಳ, ಹಣ್ಣುಗಳ ಹಾಗೂ ತರಕಾರಿಗಳ ಸಾಮಾನ್ಯ ಹೆಸರು ಹಾಗೂ ವೈಜ್ಞಾನಿಕ ಹೆಸರುಗಳನ್ನು ಕೇವಲ 55 ಸೆಕೆಂಡ್​​ಗಳಲ್ಲಿ ಹೇಳಬಲ್ಲಳು. 55 ಸೆಕೆಂಡ್​​ನಲ್ಲಿ 70 ಪ್ರಾಣಿ, ಪಕ್ಷಿ, ಹಣ್ಣು ಹಾಗೂ ತರಕಾರಿಗಳ ವೈಜ್ಞಾನಿಕ ಹೆಸರುಗಳನ್ನು ಶುಭಶ್ರೀ ಹೇಳುತ್ತಾಳೆ.

ಬಾಲಕಿಯ ತಂದೆಯ ಸಹೋದರಿಯಾದ ವಿಜಯಲಕ್ಷ್ಮಿ ಶಿಕ್ಷಕಿಯಾಗಿದ್ದು ಬಾಲಕಿಗೆ ವೈಜ್ಞಾನಿಕ ಹೆಸರುಗಳನ್ನು ಹೇಳಿಕೊಟ್ಟಿದ್ದಾರೆ.

Last Updated : Jul 6, 2021, 3:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.