ಯಾದಗಿರಿ: ನೂತನವಾಗಿ ಆಯ್ಕೆಯಾಗಿರುವ ಯಾದಗಿರಿ ಜಿಲ್ಲಾ ಪಂಚಾಯತ್‌ನ ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರೆಡ್ಡಿಗೌಡ ಕೂಡ್ಲೂರು ಅವರಿಗೆ ಇಂದು ಸನ್ಮಾನಿಸಲಾಯಿತು.
ನಗರದ ಬಿಜೆಪಿ ಜಿಲ್ಲಾ ಕಚೇರಿ ಎದುರುಗಡೆ ಬಳಿಚಕ್ರ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಭೀಮರೆಡ್ಡಿಗೌಡ ಕೂಡ್ಲೂರು ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹಿನ್ನೆಲೆ ಅಭಿಮಾನಿಗಳು ಹಾಗೂ ಬಳಿಚಕ್ರ ಗ್ರಾಮಸ್ಥರು ಕಡ್ಲೂರ ಅವರಿಗೆ ಮಾಲಾರ್ಪಣೆ ಮಾಡಿ, ಸಿಹಿ ತಿನ್ನಿಸಿ ಅಭಿನಂದಿಸಿದರು. ಇದೇ ವೇಳೆ ಉಪಸ್ಥಿತರಿದ್ದ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರ ಪುತ್ರ ಮಹೇಶರೆಡ್ಡಿಗೌಡ ಅವರಿಗೂ ಕೂಡ ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಭೀಮರೆಡ್ಡಿಗೌಡ ಕೂಡ್ಲೂರು ಅವರು, ನನಗೆ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ರೈತ ಪರ ಕಾಳಜಿಯಿಂದ ಕೆಲಸ ಮಾಡತ್ತೇನೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.