ETV Bharat / state

ಸ್ವತಂತ್ರ ಬಂದು ಏಳು ದಶಕ ಕಳೆದ್ರೂ ಈ ಗ್ರಾಮಕ್ಕಿಲ್ಲ ಶುದ್ಧ ನೀರು.. - water problem news

ಅಂತರ್ಜಲ ಮಟ್ಟ ಕಡಿಮೆ ಇರುವುದರಿಂದ ಕನಗಂಡಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೀರಿಗಾಗಿ ಪರದಾಟ ನಡೆಸುತ್ತಾರೆ. ನೀರಿನ ಸಮಸ್ಯೆ ಸರಿಪಡಿಸುವಂತೆ ಗ್ರಾಮಸ್ಥರು ಹಾಲಿ ಶಾಸಕರಾದ ರಾಜುಗೌಡ ಮತ್ತು ಈ ಹಿಂದೆ ಇದ್ದ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದಾರೆ.

water-problem
ಸ್ವತಂತ್ರ ಬಂದು ಏಳು ದಶಕ ಕಳೆದ್ರೂ ಈ ಗ್ರಾಮಕ್ಕಿಲ್ಲ ಶುದ್ದ ನೀರು
author img

By

Published : Jul 4, 2020, 8:49 PM IST

ಯಾದಗಿರಿ : ಜಿಲ್ಲೆಯ ಹುಣಸಗಿ ತಾಲೂಕಿನ ಕನಗಂಡನಹಳ್ಳಿ ಗ್ರಾಮದಲ್ಲಿ ಹತ್ತಾರು ವರ್ಷಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ನಿತ್ಯ ಸುಮಾರು 3 ಕಿ.ಮೀ ದೂರು ಕ್ರಮಿಸಿ ನೀರು ತರುವಂತಾಗಿದೆ.

ಗ್ರಾಮದ ಹೊರಭಾಗದಲ್ಲಿನ ಹ್ಯಾಂಡ್ ಪಂಪ್ ಬಳಿ ಗಂಟೆಗಟ್ಟೆಲೆ ಕಾದು ತಮ್ಮ ಸರದಿ ಬಂದ ನಂತರ ನಾಲ್ಕರಿಂದ ಐದು ಬಿಂದಿಗೆ ನೀರು ತುಂಬಿಸಿ ತರುವಂತಾಗಿದೆ. ಬೇಸಿಗೆ ಸಂದರ್ಭದಲ್ಲಿ ಈ ಬೋರ್‌ವೆಲ್​ ಬತ್ತುವುದರಿಂದ, ಬೇರೆಯವರ ಹೊಲದಲ್ಲಿನ ಬಾವಿಗಳಿಂದ ನೀರು ತರುವ ಸ್ಥಿತಿ ಇದೆ. ತಮ್ಮ ಗ್ರಾಮದಲ್ಲಿನ ನೀರಿನ ಸಮಸ್ಯೆ ಕುರಿತು ಸ್ಥಳೀಯ ಜನಪ್ರತಿನಿಧಿಗಳು ಸೇರಿ ಪಂಚಾಯತ್‌ ಅಧಿಕಾರಿಗಳ ಬಳಿ ಅದೆಷ್ಟೋ ಬಾರಿ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿನ ಜನರು.

ಸ್ವತಂತ್ರ ಬಂದು ಏಳು ದಶಕ ಕಳೆದ್ರೂ ಈ ಗ್ರಾಮಕ್ಕಿಲ್ಲ ಶುದ್ಧ ನೀರು..

ಅಂತರ್ಜಲ ಮಟ್ಟ ಕಡಿಮೆ ಇರುವುದರಿಂದ ಕನಗಂಡಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೀರಿಗಾಗಿ ಪರದಾಟ ನಡೆಸುತ್ತಾರೆ. ನೀರಿನ ಸಮಸ್ಯೆ ಸರಿಪಡಿಸುವಂತೆ ಗ್ರಾಮಸ್ಥರು ಹಾಲಿ ಶಾಸಕರಾದ ರಾಜುಗೌಡ ಮತ್ತು ಈ ಹಿಂದೆ ಇದ್ದ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದಾರೆ. ಆದ್ರೂ ಕೂಡ ಈ ಗ್ರಾಮಗಳಿಗೆ ಶಾಶ್ವತ ನೀರಿನ ಸಮಸ್ಯೆಗೆ ಮಾತ್ರ ಪರಿಹಾರ ಸಿಗದಂತಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ ಅತೀ ಶೀಘ್ರದಲ್ಲಿ ಆ ಗ್ರಾಮಗಳಿಗೆ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.