ETV Bharat / state

ಯಾದಗಿರಿ: ವಾಂತಿ, ಭೇದಿ ಪ್ರಕರಣಗಳು ಉಲ್ಬಣ.. 40ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲು - ಯಾದಗಿರಿ ಜಿಪಂ ಉಪ ಕಾರ್ಯದರ್ಶಿ ಅಮರೇಶ್ ನಾಯ್ಕ್

ಯಾದಗಿರಿ ಜಿಲ್ಲೆಯ ಹಿಮ್ಲಪುರ ಗ್ರಾಮದಲ್ಲಿ ವಾಂತಿ, ಭೇದಿ ಪ್ರಕರಣಗಳು ಹೆಚ್ಚಳವಾಗಿವೆ. ಮೂರು ದಿನಗಳಿಂದ 40ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ.

Etv Bharat
ವಾಂತಿ, ಭೇದಿ ಪ್ರಕರಣ
author img

By

Published : Jun 27, 2023, 10:06 PM IST

Updated : Jun 27, 2023, 10:43 PM IST

ವಾಂತಿ, ಭೇದಿ ಪ್ರಕರಣಗಳು ಉಲ್ಬಣ, 40ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ.. ಡಿಸಿ ಮಾಹಿತಿ

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಹಿಮ್ಲಪುರ ಗ್ರಾಮದಲ್ಲಿ ವಾಂತಿ, ಭೇದಿ ಪ್ರಕರಣಗಳು ಉಲ್ಬಣಗೊಂಡಿದ್ದು, ಕಳೆದ ಮೂರು ದಿನಗಳಿಂದ 40ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಶನಿವಾರ 4, ಭಾನುವಾರ 2, ಸೋಮವಾರ 8 ಹಾಗೂ ಮಂಗಳವಾರ 14ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ. ಆದ್ರೆ ಗ್ರಾಮದಲ್ಲಿ ವಾಂತಿ, ಭೇದಿ ಪ್ರಕರಣಗಳು ಕಂಡುಬರುವುದಕ್ಕೆ ಮೂಲ ಕಾರಣ ತಿಳಿದುಬಂದಿಲ್ಲ.

ಹಿಮ್ಲಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಚಿಕಿತ್ಸೆ ಕೇಂದ್ರ ತೆರೆಯಲಾಗಿದ್ದು, 15 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗುರುಮಠಕಲ್‌ನ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ 12 ಜನರು ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 5 ಜನ ಮತ್ತು ರಾಯಚೂರು ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಾವಾಗ ಬಂದರೂ ವೈದ್ಯಾಧಿಕಾರಿ ಇರುವುದೇ ಇಲ್ಲ. ಆಸ್ಪತ್ರೆಯಲ್ಲಿ ಔಷಧಗಳು ಸಹ ಸರಿಯಾಗಿ ಸಿಗುವುದಿಲ್ಲ ಎಂದು ಗಾಜರಕೋಟ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ರಾಹೀಲ್‌ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲೇ ಇದ್ದ ಟಿಹೆಚ್‌ಒ ಡಾ. ಹಣಮಂತರೆಡ್ಡಿ ವೈದ್ಯರ ಅವ್ಯವಸ್ಥೆ ಕುರಿತು ಮೇಲಾಧಿಖಾರಿಗಳಿಗೆ ವರದಿ ನೀಡುತ್ತೇನೆ. ನೀವು ಲಿಖಿತ ದೂರು ಕೊಡಿ, ಅವರ ಮೇಲೆ ಖಂಡಿತವಾಗಿಯೂ ಕ್ರಮ ವಹಿಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

ಇದನ್ನೂ ಓದಿ: Women safety: ಮಹಿಳಾ ಸುರಕ್ಷತೆ ಕುರಿತು ಪಾರ್ಕ್​ಗಳಲ್ಲಿ ಅರಿವು ಮೂಡಿಸಿದ ಬೆಂಗಳೂರು ಸಿಟಿ ಪೊಲೀಸರು.. ಸೇಫ್ಟಿ ಐಲ್ಯಾಂಡ್​ ಕುರಿತು ಮಾಹಿತಿ

''ಹಿಮ್ಲಪುರ ಗ್ರಾಮದಲ್ಲಿ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ನೀರು ಪೂರೈಕೆ ಮಾಡುವ ಕೊಳವೆ ಬಾವಿ, ನೀರಿನ ಟ್ಯಾಂಕ್‌ಗಳನ್ನು ಪರಿಶೀಲನೆ ನಡೆಸಲಾಯಿತು. ಗ್ರಾಮದ ಜನರಿಗೆ ಪ್ರಸ್ತುತ ಟ್ಯಾಂಕರ್ ಮೂಲಕ ಕುಡಿಯಲು ನೀರಿನ ಸರಬರಾಜು ಮಾಡಲಾಗುವುದು. ಗ್ರಾಮಸ್ಥರು ನೀರನ್ನು ಕಾಯಿಸಿ ನಂತರ, ಆರಿಸಿ ಕುಡಿಯಬೇಕು'' ಎಂದು ಯಾದಗಿರಿ ಜಿಪಂ ಉಪ ಕಾರ್ಯದರ್ಶಿ ಅಮರೇಶ್ ನಾಯ್ಕ್ ಸಲಹೆ ನೀಡಿದರು.

''ಗ್ರಾಮದಲ್ಲಿನ ಎರಡೂ ಟ್ಯಾಂಕ್‌ಗಳಿಗೆ ಬರುವ ನೀರಿನ ಮಾದರಿ ಹಾಗೂ ಇತರೆ ಜಲ ಮೂಲಗಳ ಮಾದರಿ ಸಂಗ್ರಹಿಸಿ ಪರಿಶೀಲನೆಗೆ ಕಳುಹಿಸಲಾಗಿದೆ. ಸೋಮವಾರ ಕಳುಹಿಸಿದ್ದ ನೀರಿನ ಮಾದರಿಗಳ ಪರೀಕ್ಷೆಯಲ್ಲಿ ಕುಡಿಯಲು ಯೋಗ್ಯ ಎಂದು ವರದಿ ಬಂದಿದೆ. ಈಗ ಮತ್ತೊಮ್ಮೆ ಗ್ರಾಮೀಣ ನೀರು ಸರಬರಾಜು ವಿಭಾಗದ ಪರೀಕ್ಷಾ ಕೇಂದ್ರಕ್ಕೆ ಮಾದರಿಗಳನ್ನು ಕಳುಹಿಸಲಾಗುತ್ತದೆ'' ಎಂದು ಅವರು ಹೇಳಿದರು.

ಇದನ್ನೂ ಓದಿ: ತರೀಕೆರೆ ಆಸ್ಪತ್ರೆ ಮುಂದೆ 'ಬಿ ನೆಗೆಟಿವ್' ರಕ್ತ ಸಿಗದೆ ಗರ್ಭಿಣಿ ಪರದಾಟ; ಹೆರಿಗೆ ಮಾಡಿಸಿದ ವೈದ್ಯರು ಹೇಳಿದ್ದೇನು?

ಜಿಲ್ಲಾಧಿಕಾರಿ ಹೇಳಿದ್ದೇನು?: ''ಹಿಮ್ಲಪುರ ಗ್ರಾಮದಲ್ಲಿ ವಾಂತಿ, ಭೇದಿ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿ, ರೋಗಿಗಳಿಗೆ ಆರೋಗ್ಯ ವಿಚಾರಿಸಿದ್ದೇನೆ. ವೈದ್ಯರೊಂದಿಗೆ ಆರೋಗ್ಯದ ಮಾಹಿತಿ ಪಡೆದು, ತ್ವರಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡಲು ಮುಂದಾಗಬೇಕು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ನೀರಿನ ಮಾದರಿಯನ್ನು ಪ್ರಯೋಗಾಯಲಕ್ಕೆ ಕಳುಹಿಸಿದ್ದು, ವರದಿ ಬಂದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು'' ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ ತಿಳಿಸಿದರು.

ಇದನ್ನೂ ಓದಿ: New Text book: ಹೊಸ ಪಠ್ಯ ಪುಸ್ತಕ ಮುದ್ರಣವಾಗಿವೆ, ಅದಷ್ಟು ಬೇಗ ಮಕ್ಕಳಿಗೆ ನೀಡುತ್ತೇವೆ : ಶಿಕ್ಷಣ ಸಚಿವ ಮಧು ಬಂಗಾರಪ್ಪ

Last Updated : Jun 27, 2023, 10:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.