ಯಾದಗಿರಿ : ಕೊರೊನಾ ಸಂಕಷ್ಟದಲ್ಲಿ ಯಾದಗಿರಿ ಬಿಜೆಪಿಗರು ಫುಲ್ ಮೋಜು, ಮಸ್ತಿಯಲ್ಲಿ ಮುಳುಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೂ ಕಾರಣವಾಗಿವೆ.
ಬರ್ತ್ ಡೇ ಪಾರ್ಟಿ ಹೆಸರಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಜಿಲ್ಲಾ ಮುಖಂಡರು ಯುವತಿಯೊಂದಿಗೆ ಅಸಭ್ಯವಾಗಿ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದಾರೆ. ಜಿಲ್ಲೆಯ ಸುರಪುರ ತಾಲೂಕಿನ ಬೈರಮಡ್ಡಿ ಗ್ರಾಮದಲ್ಲಿ ನಿನ್ನೆ ರಾತ್ರಿಯಿಡೀ, ಸುರಪುರ ಬಿಜೆಪಿ ಮುಖಂಡ ಮಂಜು ನಾಯಕ ಎಂಬುವರ ಜನ್ಮದಿನ ಆಚರಣೆ ನಡೆದಿತ್ತು. ಈ ಪಾರ್ಟಿಗೆ ಬೇರೆ ಕಡೆಯಿಂದ ಕ್ಲಬ್ ಡ್ಯಾನ್ಸರ್ಗಳನ್ನು ಕರೆಸಲಾಗಿತ್ತು.ಇದನ್ನೂ ಓದಿ:ಎಲ್ಲಾ 32 ಸಚಿವರನ್ನೂ ಕೈ ಬಿಟ್ಟು, ಹೊಸದಾಗಿ ಸಂಪುಟ ರಚಿಸಿ : ಶಾಸಕ ಶಿವನಗೌಡ ನಾಯಕ್