ETV Bharat / state

ತೀವ್ರ ಹೃದಯಘಾತ: ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ವೀರಮಹಾಂತ ಶಿವಾಚಾರ್ಯ ಲಿಂಗೈಕ್ಯ - ದೋರನಹಳ್ಳಿ ಗ್ರಾಮದ ಹಿರೇಮಠ

ದೋರನಹಳ್ಳಿಯ ಮಠದ ಶ್ರೀಗಳೊಬ್ಬರು ಹೃದಯಘಾತದಿಂದ ಲಿಂಗೈಕ್ಯರಾಗಿದ್ದು ಅವರ ಅಂತ್ಯಕ್ರಿಯೆಯನ್ನು ವಿಧಿವಿಧಾನದಂತೆ ನೆರವೇರಿಸಲಾಯಿತು. ಇದಕ್ಕೂ ಮುನ್ನ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಶ್ರೀಮಠದ ಆವರಣದಲ್ಲಿ ಭಕ್ತರು, ಕಣ್ಣೀರು ಹಾಕಿದರು.

Veermahant Shivacharya Swamiji
Veermahant Shivacharya Swamiji
author img

By

Published : Jan 12, 2023, 6:50 PM IST

Updated : Jan 13, 2023, 1:39 PM IST

ವೀರಮಹಾಂತ ಶಿವಾಚಾರ್ಯ ಲಿಂಗೈಕ್ಯ

ಯಾದಗಿರಿ : ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಹಿರೇಮಠದ 11ನೇ ಪೀಠಾಧಿಪತಿ ವೀರಮಹಾಂತ ಶಿವಾಚಾರ್ಯರು (48) ಬುಧವಾರ ತೀವ್ರ ಹೃದಯಘಾತದಿಂದ ಲಿಂಗೈಕ್ಯರಾದರು. ಬೆಂಗಳೂರಿನಿಂದ ಯಾದಗಿರಿಗೆ ತೆರಳಲು ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ಹೃದಯಾಘಾತಕ್ಕೀಡಾಗಿ ಏಕಾಏಕಿ ಕುಸಿದು ಬಿದ್ದಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಶ್ರೀಗಳು ಸ್ಥಳದಲ್ಲೇ ಮೃತಪಟ್ಟರು.

ಇದನ್ನೂ ಓದಿ: ಆಂಬ್ಯುಲೆನ್ಸ್​ ಸಿಗದೇ ಕೈಗಾಡಿಯಲ್ಲೇ ಅನಾರೋಗ್ಯಪೀಡಿತ ಪತ್ನಿಯ ಆಸ್ಪತ್ರೆಗೆ ಕರೆದೊಯ್ದ ಪತಿ

ಮುಂದಿನ ತಿಂಗಳು ಅವರ 25ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರ ಅಂಗವಾಗಿ ಗಣ್ಯರಿಗೆ ಆಹ್ವಾನ ನೀಡಲು ಶ್ರೀಗಳು ಬೆಂಗಳೂರಿಗೆ ತೆರಳಿದ್ದರು. ವಾಪಸ್​ ಆಗುವ ಸಂದರ್ಭ ರೈಲು ನಿಲ್ದಾಣದಲ್ಲೇ ಅವರಿಗೆ ತೀವ್ರ ಹೃದಯಘಾತ ಆಗಿದೆ. ಬೆಂಗಳೂರಿನಲ್ಲಿ ಗಣ್ಯರಿಗೆ ಕಾರ್ಯಕ್ರಮದ ಆಹ್ವಾನ ನೀಡಿ, ರೈಲು ಮೂಲಕ ಯಾದಗಿರಿಗೆ ವಾಪಸ್ ಆಗುವವರಿದ್ದರು. ಆದರೆ, ದಾರಿ ಮಧ್ಯೆ ಸ್ವಾಮೀಜಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ಪೊಲೀಸ್ ವಿಚಾರಣೆಗೆ ಹಾಜರಾದ ಬಿಎಂಆರ್​ಸಿಎಲ್ ಅಧಿಕಾರಿಗಳು

ಶ್ರೀಮಠದ ಭಕ್ತರಾದ ರಾಯಪ್ಪಗೌಡ ದರ್ಶನಾಪುರ ಮತ್ತು ಷಣ್ಮಖಪ್ಪ ಕಕ್ಕೇರಿ ಎನ್ನುವವರು ಶ್ರೀಗಳ ಜೊತೆಯಲ್ಲಿಯೇ ಇದ್ದರು. ರೈಲು ನಿಲ್ದಾಣದಲ್ಲಿ ಕುಸಿದು ಬಿದ್ದ ಶ್ರೀಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಹೃದಯಘಾತ ಎಂದು ಗೊತ್ತಾಗುತ್ತಿದ್ದಂತೆ ವೀರಮಹಾಂತ ಶಿವಾಚಾರ್ಯರು ಸ್ವಾಮೀಜಿಯನ್ನ ಬೆಂಗಳೂರು ಪೂರ್ವ ಕಂಟೋನ್ಮೆಂಟ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಶ್ರೀಗಳು ಇಹಲೋಕ ತ್ಯಜಿಸಿದ್ದರು.

ಇದನ್ನೂ ಓದಿ: ಹನಿಟ್ರ್ಯಾಪ್​ಗೆ ನಲುಗಿ, ಹೆಂಡ್ತಿಯ ಒಡವೆ ಮಾರಿ ಹಣ ಕೊಟ್ಟಿದ್ದ ವ್ಯಕ್ತಿ.. ಪೊಲೀಸರ ಸಹಾಯದಿಂದ ನಿಟ್ಟುಸಿರು ಬಿಟ್ಟ ವಿವಾಹಿತ

ಈ ಸುದ್ದಿ ತಿಳಿಯುತ್ತಿದ್ದಂತೆಯೇ ದೋರನಹಳ್ಳಿಯ ಮಠದ ಆವರಣದಲ್ಲಿ ರಾತ್ರಿಯೇ ಜಮಾವಣೆಗೊಂಡ ಭಕ್ತರು ಕಣ್ಣೀರು ಸುರಿಸತೊಡಗಿದರು. ಈ ವೇಳೆ, ಆಕಂದ್ರನ ಮುಗಿಲು ಮುಟ್ಟಿತ್ತು. ಹಿರೇಮಠವು ರಂಭಾಪುರಿ ಪೀಠದ ಶಾಖಾ ಮಠವಾಗಿದ್ದು, ಅಪಾರ ಭಕ್ತ ಸಮೂಹವನ್ನು ಒಳಗೊಂಡಿದೆ. ವೀರಮಹಾಂತ ಶಿವಾಚಾರ್ಯರ ನಿಧನದಿಂದ ಭಕ್ತರೆಲ್ಲ ನೋವಿನಲ್ಲಿ ಮುಳುಗಿದ್ದಾರೆ. ಸದ್ಯ ವಿಧಿವಿಧಾನದಂತೆ ಶ್ರೀಗಳ ಅಂತ್ಯಕ್ರಿಯೆಯನ್ನು ಭಕ್ತರ ಸಮ್ಮುಖದಲ್ಲಿ ನಡೆಸಲಾಯಿತು.

ಇದನ್ನೂ ಓದಿ: ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್​​ ಹೆಸರು ಇಡುವಂತೆ ಫಿಲ್ಮ್ ಚೇಂಬರ್​ನಿಂದ ಬಿಬಿಎಂಪಿಗೆ ಮನವಿ

ಶಹಾಪುರ ತಾಲೂಕಿನ ಈ ದೋರನಹಳ್ಳಿ ಹಿರೇಮಠವು ರಂಭಾಪುರಿ ಪೀಠದ ಶಾಖಾ ಮಠವಾಗಿದ್ದು, ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದೆ. ಕಳೆದ ಹಲವು ವರ್ಷಗಳಿಂದ ಮಠವು ಧಾರ್ಮಿಕ ಕಾರ್ಯಗಳ ಜತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಾಡಿನಲ್ಲಿ ಗುರುತಿಸಿಕೊಂಡಿದೆ. ಸದ್ಯ ಶ್ರೀಗಳ ದಿಢೀರ್​ ಅಗಲಿಕೆಯಿಂದ ಮಠ ಹಾಗೂ ಭಕ್ತ ಸಮೂಹ ಶೋಕಸಾಗರದಲ್ಲಿ ಮುಳುಗಿದೆ. ಭಕ್ತರು ಅವರ ಅಗಲಿಕೆಗೆ ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: ಉತ್ತಮ ಆರೋಗ್ಯಕ್ಕಾಗಿ ನಿತ್ಯ ಕನಿಷ್ಠ ಒಂದು ಗಂಟೆ ವಾಕಿಂಗ್ ಮಾಡಿ: ಡಾ ಸಿ ಎನ್ ಮಂಜುನಾಥ್ ಸಲಹೆ

ಅಂತಿಮ ನಮನ: ಆದರ್ಶದ ಬದುಕಿಗೆ ನಿದರ್ಶನ, ಸರಳತೆ, ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡಿದ್ದ ವೀರಮಹಾಂತ ಶಿವಾಚಾರ್ಯರು ಲಿಂಗೈಕ್ಯಯಾಗಿದ್ದು ಪೂಜ್ಯರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ವಿವಿಧ ಮಠಾಧೀಶರು, ಗಣ್ಯರು, ಭಕ್ತಿ-ಭಾವದಿಂದ ನಮಿಸಿ ಪುಷ್ಪಾಂಜಲಿ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು.

ಶ್ರೀಗಳ ಸಮಾಜಮುಖಿ ಕಾರ್ಯಗಳು: ಶ್ರೀಗಳು ಜಿಲ್ಲೆಯ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಪ್ರತಿ ವರ್ಷ ಸಾಮೂಹಿಕ ವಿಹಾಹ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಯಾವುದೇ ಪಕ್ಷ ಬೇದ ಇಲ್ಲದೇ ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದರು. ಈ ಕಾರಣಕ್ಕೆ ಶ್ರೀಗಳನ್ನು ಎಲ್ಲ ರಾಜಕೀಯ ನಾಯಕರು ಭಕ್ತಿಯಿಂದ ನಮಿಸುತ್ತಿದ್ದರು. ಸಾಕಷ್ಟು ರಾಜಕಾರಣಿಗಳ ಜೊತೆಗೆ ಉತ್ತಮ ಒಡನಾಟ ಸಹ ಹೊಂದಿದ್ದರು.

ಅದ್ಧೂರಿ ಮೆರವಣಿಗೆ: ಸ್ವಾಮಿಜಿಗಳ ನೇತೃದಲ್ಲಿ ವಿಧಿಪೂರ್ವಕವಾಗಿ ವೀರಶೈವ ಲಿಂಗಾಯತ ಪರಂಪರೆಯ ಪ್ರಕಾರ ಪಂಚಾಮೃತಗಳಿಂದ ಮಂಗಳ ಸ್ನಾನ ಮಾಡಿಸಲಾಯಿತು. ನಂತರ ಸಂಜೆ 4 ಗಂಟೆಗೆ ಮಹಾಂತೇಶ್ವರ ಬೆಟ್ಟದಿಂದ ಗ್ರಾಮದಲ್ಲಿರುವ ಹಿರೇಮಠಕ್ಕೆ ಭಾಜಾ ಭಜಂತ್ರಿ, ಕುಂಭ, ಭಜನ ಮೇಳಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಈ ಮುಂಚೆ ಶ್ರೀಗಳೇ ನಿಗದಿಪಡಿಸಿದ್ದ ಸ್ಥಳದಲ್ಲಿ ಸಂಜೆ 6 ಗಂಟೆ ಸುಮಾರಿಗೆ ಅವರ ಅಂತ್ಯಕ್ರಿಯೆ ನಡೆಸಯಿತು.

ಶ್ರೀಗಳ ಜೀವನ ಚರಿತ್ರೆ: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚಿಂಚೋಳಿ ಗ್ರಾಮದ ಸುಸಂಕೃತ ಮನೆತನದ ಗಂಗಯ್ಯಸ್ವಾಮಿ ಧರ್ಮಪತ್ನಿ ಬಸಮ್ಮ ಶರಣ ದಂಪತಿಗಳ ಕರ ಸಂಜಾತರು. ಗ್ರಾಮದಲ್ಲಿಯೇ 5ನೇ ತರಗತಿಯವರೆಗೆ ವಿದ್ಯಾಭ್ಯಾಸ ಮುಗಿಸಿದ್ದರು. ಶ್ರೀಗಳಲ್ಲಿ ಆಧ್ಯಾತ್ಮ ತುಡಿತವಿರುವುದನ್ನು ಅರಿತ ಪಾಲಕರು, ತಮ್ಮ ಮಗನಲ್ಲಿ ಸ್ವಾಮೀಜಿಯಾಗುವ ಗುಣಲಕ್ಷಣಗಳ ಕಂಡು ಮುಂದಿನ ವಿದ್ಯಾಭ್ಯಾಸವನ್ನು ಶಿವಯೋಗ ಮಂದಿರದಲ್ಲಿ ಮುಂದುವರಿಸಲು ನಿರ್ಧರಿಸದ್ದರು. ತಂದೆ-ತಾಯಿಯವರ ಇಚ್ಛೆಯೋ ಅಥವಾ ಆ ಶಿವನ ಆಜ್ಞೆಯೋ ಅರಿಯದ ವೀರ ಮಹಾಂತರು ಶಿವಯೋಗಮಂದಿರದಲ್ಲಿ ಕಲಿಸುವ ಎಲ್ಲ ಆಧ್ಯಾತ್ಮದ ವಿದ್ಯಾರ್ಜನೆಯನ್ನು ಪೂರೈಸಿದರು. ಇಷ್ಟಕ್ಕೆ ಅವರಲ್ಲಿಯ ಆಧ್ಯಾತ್ಮದ ತುಡಿತ ನಿಲ್ಲದೇ ಮುಂದಿನ ಉನ್ನತ ವಿದ್ಯಾಭ್ಯಾಸ ವೇದ, ಆಗಮ, ಉಪನಿಷತ್‌ಗಳ ಅಧ್ಯಯನಕ್ಕಾಗಿ ಪಡಸಾವಳಗಿ ಪೂಜ್ಯ ಶಂಭುಲಿಂಗ ಶಿವಾಚಾರ್ಯರ ಅಪ್ಪಣೆಯ ಮೇರೆಗೆ ವಾರಣಾಸಿಗೆ ತೆರಳಿದರು. ಕಾಶಿಯಲ್ಲಿ ಸುಮಾರು 5 ವರ್ಷಗಳವರೆಗೆ ಆಧ್ಯಾತ್ಮ ಸಾಧನೆಯ ಎಲ್ಲ ಒಳ ಹೊರ ಹೋಗುಗಳು, ಸಂಗೀತ, ಸಾಹಿತ್ಯವನ್ನು ಅಭ್ಯಸಿಸಿದರು.

ಆಚಾರ ಪದವೀಧರರಾದ ವೀರಮಹಾಂತರರ ಸಾಧನೆ, ತುಡಿತಗಳನ್ನು ಅರಿತ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪೀಠದ ಜಗದ್ಗುರು, ಶ್ರೀಶ್ರೀಶ್ರೀ 1008 ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದಂಗಳು ಶಹಾಪುರ ತಾಲೂಕಿನ ಸುಕ್ಷೇತ್ರ ದೋರನಹಳ್ಳಿ ಗ್ರಾಮದ ತಮ್ಮದೇ ಶಾಖಾಮಠವಾದ ಹಿರೇಮಠಕ್ಕೆ 1998ರಲ್ಲಿ ಅಧಿಕಾರ ವಹಿಸುವಂತೆ ಆಜ್ಞಾಪಿಸಿದರು. ಗುರು ತೋರಿಸಿದ ಮಾರ್ಗಕ್ಕೆ ಮತ್ತು ಕ್ಷೇತ್ರದ ಭಕ್ತಾಧಿಗಳ ಸದಿಚ್ಛೆಯಂತೆ ಅಧಿಕಾರ ವಹಿಸಿಕೊಂಡ ಇವರು, ಶ್ರೀಮಠ ಜೀರ್ಣೋದ್ಧಾರದ ಜೊತೆ ಜೊತೆಗೆ ಭಕ್ತ ಕುಲಕೋಟಿಯ ಮನೆ ಮಾನಸಕ್ಕೆ ತಕ್ಕುದಾದಂತೆ ಕಾರ್ಯೋನ್ಮುಖರಾಗಿದ್ದರು. ಭಕ್ತರಿಗೆ ಸಂಸ್ಕಾರ ಕೊಡುವಂಥ ಕಾರ್ಯ ಮಾಡಿದ್ದು ಶ್ರೀಗಳ ನಡೆಗೆ ಸಾಕ್ಷಿ.

Last Updated : Jan 13, 2023, 1:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.