ಯಾದಗಿರಿ: ನೀರು ಕುಡಿಯಲು ಹೋಗಿ ಜಮೀನಿನಲ್ಲಿರುವ ನೀರಿನ ಹೊಂಡಕ್ಕೆ ಬಿದ್ದು ಸಹೋದರರಿಬ್ಬರು ಸಾವನ್ನಪ್ಪಿರುವ ಘಟನೆ ಯಾದಗಿರಿ ತಾಲೂಕಿನ ಬೆಳಗುಂದಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
10 ವರ್ಷದ ಜೋಸೆಫ್ ಮತ್ತು 11 ವರ್ಷದ ಅಭಿಷೇಕ್ ನೀರುಪಾಲಾದ ಸಹೋದರರು ಎಂದು ತಿಳಿದು ಬಂದಿದೆ. ಅಜ್ಜಿ ಸಂತೋಷಮ್ಮನ ಜೊತೆ ಸಹೋದರರಿಬ್ಬರು ಜಮೀನಿಗೆ ಹೋಗಿದ್ದರು. ಬಾಯಾರಿಕೆಯಿಂದ ಬಳಲಿ ಪಕ್ಕದಲ್ಲಿರುವ ನೀರಿನ ಹೊಂಡಕ್ಕೆ ನೀರು ಕುಡಿಯಲು ಹೋದಾಗ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಮೃತ ಬಾಲಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಕುರಿತು ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ.