ETV Bharat / state

ಶಹಾಪುರ ಬಳಿ ಬಸ್- ಕಾರ್​ ನಡುವೆ ಮಖಾಮುಖಿ ಡಿಕ್ಕಿ; ಮೂವರು ಸಾವು

ಬಸ್- ಕಾರ್​ ನಡುವೆ ಮಖಾಮುಖಿ ಡಿಕ್ಕಿ- ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವು- ಭೀಮರಾಯನಗುಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು.

author img

By

Published : May 4, 2023, 10:51 PM IST

road accident
ಬಸ್- ಕಾರ್​ ನಡುವೆ ಮಖಾಮುಖಿ ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಯ ಹೆದ್ದಾರಿಯ ಮುಡಬೂಳ ಗ್ರಾಮದ ಕ್ರಾಸ್ ಬಳಿ ಬಸ್ ಹಾಗೂ ಕಾರಿನ ನಡುವೆ ಮಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವುನ್ನಪ್ಪಿದ್ದು, ಇನ್ನೋರ್ವ ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ.

ಇದನ್ನೂ ಓದಿ: ಕಾರಿನ ಮೇಲೆ ಟ್ಯಾಂಕರ್ ಪಲ್ಟಿ.. ಮೂವರು ಮಕ್ಕಳು ಸೇರಿ 9 ಮಂದಿ ಸಾವು

ಸುರಪುರ ತಾಲೂಕಿನ ರಂಗಂಪೇಟ ಗ್ರಾಮದ ನಾಗರಾಜ ಸಿದ್ದಣ್ಣ ಸಜ್ಜನ (60), ಮಹಾದೇವಿ ನಾಗರಾಜ ಸಜ್ಜನ (55), ರೇಣುಕಾ ನಾರಾಯಣರಾವ್ ಪಾಡಮುಖಿ(62) ಮೃತರು. ಕಲಬುರಗಿಯಲ್ಲಿ ಸ್ನೇಹಿತನ ಮಗನ ಮದುವೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಕಾರ್​ ಚಲಾಯಿಸಿಕೊಂಡು ನಾಗರಾಜ ಬರುತ್ತಿದ್ದರು.

ಇದನ್ನೂ ಓದಿ: ಹನಿಟ್ರ್ಯಾಪ್​ ಬಲೆಗೆ ಬಿದ್ದು ಪಾಕ್​ಗೆ ಮಾಹಿತಿ ಸೋರಿಕೆ ಶಂಕೆ : ಡಿಆರ್​ಡಿಒ ನಿರ್ದೇಶಕನ ಬಂಧಿಸಿದ ಎಟಿಎಸ್​

ತಾಲೂಕಿನ ಮುಡಬೂಳ ಕ್ರಾಸ್ ಬಳಿ ಶಹಾಪುರದಿಂದ ಕಲಬುರಗಿಗೆ ತೆರಳುತ್ತಿದ್ದ ಸಾರಿಗೆ ಬಸ್ಸಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಕುರಿತು ಭೀಮರಾಯನಗುಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೊಲೆರೊ-ಟ್ರಕ್‌ ಭೀಕರ ರಸ್ತೆ ಅಪಘಾತ: ಮದುವೆಗೆ ತೆರಳುತ್ತಿದ್ದ ಒಂದೇ ಕುಟುಂಬದ 11 ಜನ ಸಾವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.