ಸುರಪುರ: ಟ್ರ್ಯಾಕ್ಟರ್ ಚಾಲನೆ ವೇಳೆ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸುರಪುರ ತಾಲೂಕಿನ ಕಕ್ಕೇರಾ ಬಳಿ ನಡೆದಿದೆ.
ಪರಶುರಾಮ ತಂದೆ ನಂದಪ್ಪ ಮಲಮತ್ತಿನೋರ ದೊಡ್ಡಿ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಟ್ರ್ಯಾಕ್ಟರ್ ಮೂಲಕ ಉಳಿಮೆ ಮಾಡುತ್ತಿರುವಾಗ ಪಕ್ಕದ ಜಮೀನಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿಯು ಟ್ರ್ಯಾಕ್ಟರ್ ಮೇಲ್ಭಾಗಕ್ಕೆ ತಗುಲಿದೆ. ತಂತಿಯ ವಿದ್ಯುತ್ ಶಾಕ್‌ಗೆ ಪರಶುರಾಮ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಸುರಪುರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಶವವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.