ಸುರಪುರ: ಶಾಲೆಗೆ ಹಾಜರಾಗದೆ ಶಿಕ್ಷಕ ಹಾಗೂ ಶಿಕ್ಷಕಿ ಕಳೆದ ಎರಡು ವರ್ಷಗಳಿಂದ ಪ್ರತಿ ತಿಂಗಳ ಸಂಬಳ ಪಡೆದಿರುವ ಆರೋಪ ಶಹಾಪುರ ತಾಲೂಕಿನ ಮದ್ದರಕಿ ಗ್ರಾಮದಲ್ಲಿ ಕೇಳಿ ಬಂದಿದೆ.
ಈ ಬಗ್ಗೆ ಮಾತನಾಡಿರುವ ಡಿಎಸ್ಎಸ್ ಸಂಘಟನೆಯ ಶಿವಪುತ್ರ ಜವಳಿ, ಪ್ರೌಢ ಶಾಲೆಗೆ ಕಳೆದ 2008ರಲ್ಲಿ ನೃತ್ಯ ಶಿಕ್ಷಕಿಯಾಗಿ ಶೈಲಾ ಎನ್.ಕೆ. ಬಂದಿದ್ದರು. ಮದುವೆ ಆದ ನಂತರ ಪದೇ ಪದೆ ರಜೆ ಹಾಕಿದ್ದಾರೆ. ಅಲ್ಲದೆ ಕಳೆದ ಎರಡು ವರ್ಷಗಳಿಂದ ಒಂದೇ ಒಂದು ದಿನ ಶಾಲೆಗೆ ಹಾಜರಾಗದೆ ಪ್ರತಿ ತಿಂಗಳು ಸಂಬಳ ಪಡೆದಿದ್ದಾರೆ ಎಂಬ ಆರೋಪಿಸಿದ್ದಾರೆ.
ಇನ್ನು ಮುಖ್ಯ ಶಿಕ್ಷಕ ವಿಜಯ್ ಆಶ್ರಿತ್ ಶಿಕ್ಷಕಿಗೆ ವೇತನ ನೀಡಿ ಶಿಕ್ಷಣ ಇಲಾಖೆಗೆ ವಂಚಿಸಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ ಬಿಇಒ ರುದ್ರಗೌಡ ಪಾಟೀಲ್ ಮುಖ್ಯ ಶಿಕ್ಷಕರಿಗೆ ಮೂರು ಬಾರಿ ನೋಟಿಸ್ ಕೊಟ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ.