ಸುರಪುರ : ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ತಾಲೂಕಿನ ಮಾಚಗುಂಡಾಳ ಗ್ರಾಮದ ಬಾಲದಂಡಪ್ಪ ಡಿ.ಬಾಕಲಿ ಎಂಬವರ ಜಮೀನಿನಲ್ಲಿ ಬೆಳೆಯಲಾಗಿದ್ದ 18 ಕೆ.ಜಿ. 500 ಗ್ರಾಂ. ಗಾಂಜಾ ಗಿಡವನ್ನು ಜಪ್ತಿ ಮಾಡಿದ್ದಾರೆ.
ಯಾದಗಿರಿ ಎಸ್ಪಿ ಋಷಿಕೇಶ ಭಗವಾನ್ ಸೋನೆವಾನೆ ಮತ್ತು ಸುರಪುರ ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿಯವರ ಮಾರ್ಗದರ್ಶನದಲ್ಲಿ ಸುರಪುರ ಠಾಣೆಯ ಇನ್ಸ್ಪೆಕ್ಟರ್ ಎಸ್.ಎಮ್.ಪಾಟೀಲರ ನೇತೃತ್ವದಲ್ಲಿ ಮುಖ್ಯ ಪೇದೆಗಳಾದ ಮನೋಹರ, ಚಂದ್ರಶೇಖರ, ಮಂಜುನಾಥ ಮತ್ತು ಪೇದೆಗಳಾದ ಬಸವರಾಜ ಸುಭಾಸ ಪರಮೇಶಿ ಮಹಾಂತೇಶ ಇವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಗಾಂಜಾ ಗಿಡಗಳನ್ನು ಜಪ್ತಿ ಮಾಡಿದೆ.
ವಶಪಡಿಸಿಕೊಂಡ ಗಾಂಜಾದ ಮೌಲ್ಯ 55 ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಂಜಾ ಬೆಳೆದಿರುವ ಜಮೀನಿನ ಮಾಲೀಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.