ETV Bharat / state

ಸುರಪುರ: ಗುಡಿಸಲು, ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ

ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು, ಹುಲ್ಲಿನ ಬಣವೆ ಭಸ್ಮವಾಗಿ, ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ಸುರಪುರ ತಾಲ್ಲೂಕಿನ ದೇವತ್ಕಲ್ ಗ್ರಾಮದಲ್ಲಿ ನಡೆದಿದೆ.

Surapur grass fire Hut loss of lakh rupee
ಸುರಪುರ: ಗುಡಿಸಲು, ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ, ಲಕ್ಷಾಂತರ ರೂಪಾಯಿ ನಷ್ಟ
author img

By

Published : May 22, 2020, 11:16 PM IST

ಸುರಪುರ: ತಾಲೂಕಿನ ದೇವತ್ಕಲ್ ಗ್ರಾಮದ ಬಳಿಯ ಜಮೀನಿನಲ್ಲಿ ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು ಹಾಗೂ ಹುಲ್ಲಿನ ಬಣವೆ ಭಸ್ಮವಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಜಮೀನಿಗೆ ಹೊಂದಿಕೊಂಡು ಹಳ್ಳದಲ್ಲಿರುವ ಒಣ ಹುಲ್ಲಿಗೆ ಬೆಂಕಿ ಹಚ್ಚಲಾಗಿತ್ತು. ಅದು ಆಕಸ್ಮಿಕವಾಗಿ ಗುಡಿಸಲಿಗೆ ತಗುಲಿದ್ದು, ಗುಡಿಸಲು ಸುಟ್ಟುಭಸ್ಮವಾದೆ.

ದೇವತ್ಕಲ್ ಗ್ರಾಮದ ಗಾಣಿಕೇರಿ ದೊಡ್ಡಿಯಸಿದ್ದಪ್ಪ ನವದಗಿ ಎಂಬುವವರಿಗೆ ಸೇರಿದ ಗುಡಿಸಲಾಗಿದ್ದು, ದಿನ ಬಳಕೆ ಅಗತ್ಯ ವಸ್ತುಗಳು ಮತ್ತು ಜಮೀನಿನ ಕಾಗದಪತ್ರ, ಪಡಿತರ ಚೀಟಿ, ಆಧಾರ್​ ಕಾರ್ಡ್ ಸೇರಿ ಇತರೆ ವಸ್ತುಗಳ ಸುಟ್ಟಿವೆ.

ಗುಡಿಸಲಲ್ಲಿದ್ದ 10 ಗ್ರಾಂ. ಬಂಗಾರ, ನಲವತ್ತು ಸಾವಿರ ನಗದು, 5 ಚೀಲ ಜೋಳ ಮತ್ತು 7 ಚೀಲ ಭತ್ತ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ಬೆಂಕಿಗೆ ಆಹುತಿಯಾಗಿವೆ. ಪಕ್ಕದ ಜಮೀನಿನ ಕೃಷ್ಣಪ್ಪ ಎಂಬುವರಿಗೆ ಸೇರಿದ ಭತ್ತದ ಹುಲ್ಲಿನ ಗೂಡು ಸಹ ಸುಟ್ಟಿದೆ. ಇದುವರೆಗೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.