ಸುರಪುರ: ತಾಲೂಕಿನ ಕಕ್ಕೇರಾ ಬಳಿಯ ಪರಸನಹಳ್ಳಿ ದೊಡ್ಡಿಯ ರೈತನೊಬ್ಬ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸೌತೆಕಾಯಿ ಬೆಳೆದಿದ್ದು, ಈಗ ವ್ಯಾಪಾರ ಇಲ್ಲದೇ ಕಂಗಾಲಾಗಿದ್ದಾರೆ.
ಪರಸನಹಳ್ಳಿ ದೊಡ್ಡಿಯ ರೈತ ಬಸಪ್ಪ ಎಂಬುವವರು ಒಂದು ಎಕರೆಯಲ್ಲಿ ಸೌತೆಕಾಯಿ ಬೆಳೆದಿದ್ದರು. ಆದರೆ, ಕೊರೊನಾ ಲಾಕ್ಡೌನ್ನಿಂದಾಗಿ ಈ ಬಾರಿ ಯಾವುದೇ ಅದ್ಧೂರಿ ಮದುವೆಗಳು ನಡೆಯದೇ ರೈತರ ಯಾವುದೇ ತರಕಾರಿ ದೊಡ್ಡ ಮಟ್ಟದಲ್ಲಿ ಮಾರಾಟವಾಗದೇ ಉಳಿದಿವೆ. ಒಂದೆಡೆ, ಮದುವೆ ಕಾರ್ಯಕ್ರಮಗಳು ಸರಳವಾಗಿ ನಡೆಯುತ್ತಿದ್ದು, ಜೊತೆಗೆ ಸಂತೆಗಳು ರದ್ದಾಗಿದೆ. ಹೀಗಾಗಿ ರೈತ ತಾನು ಬೆಳೆದ ಸೌತೆಕಾಯಿ ಬೆಳೆ ಬಳ್ಳಿಯಲ್ಲಿಯೆ ಕೊಳೆಯುತ್ತಿದೆ. ಸಾಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸೌತೆಕಾಯಿ ಬೆಳೆದಿದ್ದು, ಈಗ ಎಲ್ಲವೂ ಹಾಳಾಗುತ್ತಿದೆ. ಇದರಿಂದ ಸಾಲಗಾರರಿಗೆ ಏನು ಹೇಳುವುದೆಂದು ದಿಕ್ಕು ತೋಚದಂತಾಗಿದೆ ಎಂದು ತಮ್ಮ ಅಳಲು ತೋಡಿ ಕೊಂಡಿದ್ದಾರೆ.
ಇನ್ನು ಸರ್ಕಾರ ಬೇರೆ ಬೇರೆ ವಲಯದ ಜನರ ನೆರವಿಗೆ ಬಂದಂತೆ ನನಗೂ ಸಹಾಯ ಧನ ನೀಡಿ ಎಂದು ರೈತ ಬಸಪ್ಪ ಪರಸನಹಳ್ಳಿ ದೊಡ್ಡಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.