ETV Bharat / state

ಯಾದಗಿರಿ: ಬಸ್‌ ಸೌಕರ್ಯವಿಲ್ಲದೇ ವಿದ್ಯಾರ್ಥಿಗಳ ಪರದಾಟ

ಯಾದಗಿರಿ ಜಿಲ್ಲೆಯ ಲಿಂಗೇರಿ ಸ್ಟೇಷನ್ ಸರ್ಕಾರಿ ಶಾಲೆಗೆ ಬರುವ ಮಕ್ಕಳು ಸಮರ್ಪಕ ಬಸ್ ಸೌಕರ್ಯವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿತ್ಯ ನಾಲ್ಕೈದು ಕಿಲೋಮೀಟರ್​ ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದಾರೆ. ಹಾಗಾಗಿ, ಕೂಡಲೇ ಬಸ್ ಸೌಕರ್ಯ ಒದಗಿಸಿ, ಸಮಸ್ಯೆ ಪರಿಹರಿಸುವಂತೆ ಸರ್ಕಾರಕ್ಕೆ ಹಾಗೂ ಸಾರಿಗೆ ಅಧಿಕಾರಿಗಳಿಗೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಬಸ್‌ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳ ಪರದಾಟ
ಬಸ್‌ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳ ಪರದಾಟ
author img

By

Published : Mar 28, 2022, 9:41 AM IST

Updated : Mar 28, 2022, 9:47 AM IST

ಯಾದಗಿರಿ: ಸೂಕ್ತ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಲಿಂಗೇರಿ ಸ್ಟೇಷನ್ ಸರ್ಕಾರಿ ಶಾಲೆಗೆ ತೆರಳಲು ಶೆಟ್ಟಿಗೇರಾ, ಕೋಳೂರು, ಮುಷ್ಟೂರು, ನಾಗರಬಂಡೆ, ಮಾಲಾರ ತಾಂಡಾ, ಜಿಂಕೇರಾ, ಎಂ. ಹೊಸಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ. ಈ ಕುರಿತು ಸಾರಿಗೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ಶಾಲಾ ಮಕ್ಕಳು ನಿತ್ಯ ಹೊಲ, ಗದ್ದೆಗಳ ಮಧ್ಯದಿಂದ ಕಾಲುದಾರಿಯಲ್ಲಿ ನಾಲ್ಕೈದು ಕಿಲೋಮೀಟರ್​ ನಡೆದುಕೊಂಡು ಶಾಲೆಗೆ ಹೋಗುತ್ತಾರೆ. ಈ ಭಾಗದಲ್ಲಿ ಸರ್ಕಾರಿ ಬಸ್‌ಗಳು ಬರೋದೇ ಕಡಿಮೆ. ಯಾವಾಗಲಾದರೂ ಒಂದು ಸಲ ಬಸ್ ಬಂದು ಹೋಗುತ್ತದೆ. ಅದು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಹಾಗಾಗಿ ಇಲ್ಲಿನ ಜನ ಸಂಚಾರಕ್ಕಾಗಿ ಅಟೋಗಳನ್ನೇ ಅವಲಂಬಿಸಿದ್ದಾರೆ.

ಬಸ್‌ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳ ಪರದಾಟ

ಸದ್ಯಕ್ಕೆ ಶಾಲೆಯಲ್ಲಿ ಪೂರ್ವಭಾವಿ ಪರೀಕ್ಷೆಗಳು ಆರಂಭವಾಗಿವೆ. ಹಣ ಇರೋರು ಅಟೋಗಳಲ್ಲಿ ದುಡ್ಡು ಕೊಟ್ಟು ಬರುತ್ತಾರೆ, ಹಣ ಇಲ್ಲದಿರುವ ಬಡವರ ಮಕ್ಕಳು ನಿತ್ಯ ನಡೆದುಕೊಂಡು ಹೋಗುತ್ತಾರೆ. ಕೂಡಲೇ ಬಸ್ ಸೌಕರ್ಯ ಒದಗಿಸಿ, ಸಮಸ್ಯೆ ಪರಿಹರಿಸುವಂತೆ ಸರ್ಕಾರಕ್ಕೆ ಹಾಗೂ ಸಾರಿಗೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: SSLC ಪರೀಕ್ಷೆಗೆ ಕ್ಷಣಗಣನೆ: ಎಕ್ಸಾಂ ಬರೆಯಲಿದ್ದಾರೆ 8,73,846 ವಿದ್ಯಾರ್ಥಿಗಳು, ಹಿಜಾಬ್​ಗೆ ನೋ ಎಂಟ್ರಿ!

Last Updated : Mar 28, 2022, 9:47 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.