ಸುರಪುರ(ಯಾದಗಿರಿ): ಎಂಇಎಸ್ ಕಿಡಿಗೇಡಿಗಳ ದುಂಡಾ ವರ್ತನೆ ಮುಂದುವರೆದಿದೆ. ಮಹಾರಾಷ್ಟ್ರಕ್ಕೆ ತೆರಳಿದ್ದ ಸುರಪುರ ಡಿಪೋದ ಬಸ್ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಡಿ ಅಟ್ಟಹಾಸ ಮೆರೆದಿದ್ದಾರೆ.
ಸುರಪುರ ಡಿಪೋಕ್ಕೆ ಸೇರಿದ ಬಸ್ ಶನಿವಾರ ಪುಣೆಗೆ ಹೋಗಿದ್ದು, ಭಾನುವಾರ ಮುಂಜಾನೆ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ಗಳ ಮೇಲೆ ಖದೀಮರು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಬಸ್ನ ಗಾಜುಗಳು ಪುಡಿ ಪುಡಿಯಾಗಿದ್ದು, ಚಾಲಕ ಹಾಗೂ ನಿರ್ವಾಹಕರಿಗೆ ಜೀವಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿದೆ.
ಈ ಕುರಿತು ಮಹಾರಾಷ್ಟ್ರದ ಪುಣೆಯ ಕಡಿಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಂಇಎಸ್ ಕಾರ್ಯಕರ್ತರು ಜೀವ ಬೆದರಿಕೆಯಿಂದ ಚಾಲಕ ಸುರಪುರಕ್ಕೆ ಬಸ್ ತೆಗೆದುಕೊಂಡು ಬರಲು ಹಿಂದೇಟು ಹಾಕಿದ್ದಾರೆ ಎಂದು ತಿಳಿದುಬಂದಿದೆ.