ETV Bharat / state

ಸುರಪುರ: ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ರೈತ ಹುತಾತ್ಮ ದಿನಾಚರಣೆ

ಸುರಪುರದ ಎಪಿಎಂಸಿ ಗಂಜ್‌ನ ರೈತ ಭವನದಲ್ಲಿ ರೈತ ಹುತಾತ್ಮ ದಿನವನ್ನು ಆಚರಿಸಲಾಯಿತು. ಸುರಪುರ ತಾಲೂಕು ಮಾತ್ರವಲ್ಲದೆ ಜಿಲ್ಲೆಯ ಇತರೆ ತಾಲೂಕುಗಳಿಂದಲೂ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Farmer's Martyr's Day  celebration
ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ರೈತ ಹುತಾತ್ಮ ದಿನಾಚರಣೆ..
author img

By

Published : Jul 22, 2020, 12:30 PM IST

ಸುರಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಎಪಿಎಂಸಿ ಗಂಜ್‌ನ ರೈತ ಭವನದಲ್ಲಿ ರೈತ ಹುತಾತ್ಮ ದಿನವನ್ನು ಆಚರಿಸಲಾಯಿತು.

ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ರೈತ ಹುತಾತ್ಮ ದಿನಾಚರಣೆ..

ಸುರಪುರ ತಾಲೂಕು ಮಾತ್ರವಲ್ಲದೆ, ಜಿಲ್ಲೆಯ ಇತರೆ ತಾಲೂಕುಗಳಿಂದಲೂ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ರೈತ ಹೋರಾಟಗಾರ ಪ್ರೋ ನಂಜುಂಡಸ್ವಾಮಿ, ಪ್ರೋ ಸುಂದರೇಶ್ ಹಾಗೂ ಹುತಾತ್ಮ ರೈತರ ಭಾವ ಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.

ನಂತರ ರೈತ ಮುಖಂಡರು ಮಾತನಾಡಿ, ರಾಜ್ಯದಲ್ಲಿನ ರೈತರ ಸಮಸ್ಯೆಗಳ ಕುರಿತು ಸರ್ಕಾರ ಗಮನ ಹರಿಸುತ್ತಿಲ್ಲ. ರಾಜ್ಯದಲ್ಲಿ ಗೊಬ್ಬರದ ಸಮಸ್ಯೆ ಎದುರಾಗುತ್ತಿದೆ. ಅಲ್ಲದೇ ಅವೈಜ್ಞಾನಿಕ ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳ ಮೂಲಕ ದೇಶದಲ್ಲಿನ ರೈತರ ಸರ್ವನಾಶ ಮಾಡಲು ಸರ್ಕಾರಗಳು ಮುಂದಾಗಿವೆ. ಇದನ್ನು ಎಲ್ಲಾ ರೈತರು ಒಕ್ಕೋರಲಿನಿಂದ ವಿರೋಧಿಸಲು ದೊಡ್ಡ ಮಟ್ಟದ ಹೋರಾಟ ರೂಪಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಮಹಾದೇವಮ್ಮ ಬೇವಿನಾಳ ಮಠ, ಮಹೇಶಗೌಡ ಸಗರ, ಶೇಖರಪ್ಪ ಅರಕೇರಿ, ಹನಮಂತ್ರಾಯ ಮಡಿವಾಳ, ರುದ್ಲಪ್ಪಗೌಡ ಮೇಟಿ, ಶಿವಶರಣಪ್ಪ ಸಾಹುಕಾರ, ವಿಶ್ವಾರಾಧ್ಯ ಜೇವರ್ಗಿ ಹಾಗೂ ದೇವಿಂದ್ರಪ್ಪ ಪತ್ತಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.