ETV Bharat / state

ಸಚಿವ ಈಶ್ವರಪ್ಪ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯುತ್​ ಶಾರ್ಟ್​​ ಸರ್ಕ್ಯೂಟ್​! - ಕೆ.ಎಸ್​ ಈಶ್ವರಪ್ಪ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಕೆ.ಎಸ್​ ಈಶ್ವರಪ್ಪ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಏಕಾಏಕಿ ಶಾರ್ಟ್​​ ಸರ್ಕ್ಯೂಟ್​ ಉಂಟಾಗಿರುವ ಘಟನೆ ನಡೆದಿದೆ.

KS Eswarappa program
KS Eswarappa program
author img

By

Published : Jun 5, 2020, 3:05 AM IST

Updated : Jun 5, 2020, 5:59 AM IST

ಯಾದಗಿರಿ: ಸಚಿವ ಕೆಎಸ್ ಈಶ್ವರಪ್ಪ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಏಕಾಏಕಿಯಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಕೆಲ ಕಾಲ ಕರೆಂಟ್ ಇಲ್ಲದೆ ಕತ್ತಲಲ್ಲಿ ಕಾರ್ಯಕ್ರಮ ನಡೆಸುವಂತಾಯಿತು.

ಶಾರ್ಟ್​ ಸರ್ಕ್ಯೂಟ್​​

ಜಿಲ್ಲೆಯ ನರೇಗಾ ಯೋಜನೆಯಡಿಯಲ್ಲಿನ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಯಾದಗಿರಿಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಆಗಮಿಸಿದ್ದರು. ಈ ಸಂದರ್ಭದಲ್ಲಿ ಯಾದಗಿರಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್​ನಲ್ಲಿ ನಡೆದ ನರೇಗಾ ಯೋಜನೆಯ ಅಂತರ್ಜಾಲ ಚೇತನ ಕಾರ್ಯಕ್ರಮದಲ್ಲಿ ಸಚಿವ ಈಶ್ವರಪ್ಪ ಪಾಲ್ಗೊಂಡಿದ್ದರು. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ಸ್ವಲ್ಪ ಸಮಯ ಕರೆಂಟ್​ ಇಲ್ಲದೇ ಕಾರ್ಯಕ್ರಮ ನಡೆಸಬೇಕಾಯಿತು.

ಕತ್ತಲಲ್ಲೇ ಸಚಿವ ಈಶ್ವರಪ್ಪ ಕಾರ್ಯಕ್ರಮದ ಭಾಷಣ ಪ್ರಾರಂಭಿಸುವ ಮೂಲಕ ಶಾರ್ಟ್ ಸರ್ಕ್ಯೂಟ್ ಸ್ಥಳದಲ್ಲಿ ಕುಳಿತವರನ್ನ ಅಲ್ಲಿಂದ ಬೇರೆಡೆ ಸ್ಥಳಾಂತರ ಆಗುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಅವರು ಜೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್​​ ಸರಿಪಡಿಸುವಂತೆ ಆದೇಶ ಕೂಡ ಮಾಡಿದರು.

Last Updated : Jun 5, 2020, 5:59 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.