ETV Bharat / state

ಕಂದಕೂರ ಗ್ರಾಮದಲ್ಲಿ ಸಂಭ್ರಮದ ಚೇಳಿನ ಜಾತ್ರೆ: ಕೈಯಲ್ಲಿ ಚೇಳನ್ನು ಹಿಡಿದು ಸಂಭ್ರಮಿಸಿದ ಮಕ್ಕಳು, ಭಕ್ತರು

ಯಾದಗಿರಿ ಜಿಲ್ಲೆಯಲ್ಲಿ ವಿಶಿಷ್ಟ ಜಾತ್ರೆ- ಕಂದಕೂರ ಗ್ರಾಮದಲ್ಲಿ ಕೊಂಡಮೇಶ್ವರಿ ದೇವಿ ಹಾಗೂ ಚೇಳಿನ ಜಾತ್ರೆ ಅದ್ಧೂರಿ ಆಚರಣೆ- ಕೈಯಲ್ಲಿ ವೃಶ್ಚಿಕ ಹಿಡಿದು ಸಂಭ್ರಮಿಸಿದ ಮಕ್ಕಳು

Scorpion Fair in Kandakura village at Yadagiri
ಕೈಯಲ್ಲಿ ಚೇಳನ್ನು ಹಿಡಿದು ಸಂಭ್ರಮಿಸಿದ ಮಕ್ಕಳು, ಭಕ್ತರು
author img

By

Published : Aug 3, 2022, 1:21 PM IST

ಗುರುಮಠಕಲ್(ಯಾದಗಿರಿ): ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿರುವ ಕೊಂಡಮೇಶ್ವರಿ ದೇವಸ್ಥಾನದ ಸುತ್ತಮುತ್ತಲಿನ ಬೆಟ್ಟದ ಪ್ರದೇಶದಲ್ಲಿ ಶ್ರಾವಣ ಮಾಸದ ಪಂಚಮಿ ದಿನ ಮಕ್ಕಳು ಹಾಗೂ ಭಕ್ತರು ಚೇಳುಗಳನ್ನು ಕೈಯಲ್ಲಿ ಹಿಡಿದು ಆಟವಾಡುತ್ತಾರೆ.

ಕಂದಕೂರು ಗ್ರಾಮದ ಸುತ್ತಲೂ ಹಚ್ಚ ಹಸುರಿನ ಬೆಟ್ಟ-ಗುಡ್ಡ. ಆ ಬೆಟ್ಟದ ಮಧ್ಯೆದಲ್ಲಿರುವುದೇ ಕೊಂಡಮಾಯಿ ದೇವಸ್ಥಾನ. ಇಲ್ಲಿ ಅಪರೂಪದ ಚೇಳಿನ ಮೂರ್ತಿ ಇಲ್ಲಿದೆ. ಈ ದೇವಿಯ ಕೃಪೆಯಿಂದ ನಾಗರ ಪಂಚಮಿ ದಿನ ಇಲ್ಲಿ ಹೇರಳವಾಗಿ ಚೇಳುಗಳು ಕಾಣಿಸುತ್ತವೆ. ಅವುಗಳನ್ನು ಹಿಡಿದು ಜನರು ಸಂಭ್ರಮ ಪಡುತ್ತಾರೆ. ವಿಶೇಷವೆಂದರೆ ಬೇರೆ ದಿನಗಳಲ್ಲಿ ಇಲ್ಲಿ ಚೇಳುಗಳು ಇರುವುದಿಲ್ಲವಂತೆ. ಗುಡಿಯಲ್ಲಿ ಚೇಳಿನ ಮೂರ್ತಿಗೆ ಪೂಜೆ ಸಲ್ಲಿಸುವುದರಿಂದ ಯಾರಿಗೂ ಕುಟುಕುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ವಿಶೇಷ ಪೂಜೆ: ಶ್ರಾವಣ ಮಾಸ ಶುಕ್ಲಪಕ್ಷದ ಪಂಚಮಿಯಂದು ನಾಗರ ಮೂರ್ತಿಗೆ ಹಾಲನೆರೆಯುವುದು ಸಾಮಾನ್ಯ. ಆದರೆ ಕಂದಕೂರು ಗ್ರಾಮಕ್ಕೆ ಹೊಂದಿಕೊಂಡಿರುವ ಕೊಂಡಮ್ಮ ಬೆಟ್ಟದ ಕೊಂಡಮೇಶ್ವರಿ ದೇವಸ್ಥಾನದಲ್ಲಿ ಚೇಳಿನ ಜೊತೆ ಮಕ್ಕಳು, ಭಕ್ತರು ಆಟವಾಡುವ ಮೂಲಕ ಚೇಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಕಂದಕೂರ ಗ್ರಾಮದಲ್ಲಿ ಸಂಭ್ರಮದ ಚೇಳಿನ ಜಾತ್ರೆ

ಚೇಳುಗಳ ಹುಡುಕಾಟ: ಜಾತ್ರೆಗೆ ಬಂದಿದ್ದ ಭಕ್ತರು ಬೆಟ್ಟದಲ್ಲಿ ಚೇಳುಗಳ ಹುಡುಕಾಟದಲ್ಲಿ ತೊಡಗಿದ್ದರು. ಕಲ್ಲುಗಳ ಸಂದಿನಲ್ಲಿ ಅಡಗಿಕೊಂಡಿದ್ದ ಚೇಳುಗಳನ್ನು ಹಿಡಿದು ಸಂಭ್ರಮಿಸಿದರು. ಮಹಿಳೆಯರು, ಮಕ್ಕಳು ತಮ್ಮ ಕೈಯಲ್ಲಿಡಿದು ಆಶ್ಚರ್ಯಚಕಿತಗೊಂಡರು. ಸುಮಾರು ಐದಾರು ದಶಕಗಳಿಂದ ಕಂದಕೂರ ಕೊಂಡಮಾಯಿ ಜಾತ್ರೆ ಜರುಗುತ್ತಿದೆ. ಗ್ರಾಮಕ್ಕೆ ಮಾತ್ರ ಸೀಮಿತವಾಗಿದ್ದ ಈ ಜಾತ್ರೆಗೆ ಏಳೆಂಟು ವರ್ಷಗಳಿಂದ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ.

ಚೇಳುಗಳನ್ನು ಮೈ ಮೇಲೆ ಹಾಕಿಕೊಂಡು ಸಂಭ್ರಮ: ಕಂದಕೂರು ಸೇರಿದಂತೆ ಸುತ್ತಲಿನ ಭಕ್ತರು ಚೇಳುಗಳನ್ನು ಆರಾಧಿಸುತ್ತಾರೆ. ನಾಗರ ಪಂಚಮಿ ದಿನ ಮಾತ್ರ ಬೆಟ್ಟದಲ್ಲಿ ಹೇರಳವಾಗಿ ಚೇಳುಗಳು ಕಾಣಿಸಿಕೊಳ್ಳುತ್ತವೆ. ಕಲ್ಲಿನ ಕೆಳಭಾಗದಲ್ಲಿರುವ ಚೇಳುಗಳನ್ನು ಜನರು ಹುಡುಕಿ ನಂತರ ಚೇಳುಗಳನ್ನು ತೆಗೆದುಕೊಂಡು ಮೈ ಮೇಲೆ ಹಾಕಿಕೊಂಡು ಸಂಭ್ರಮಿಸುತ್ತಾರೆ. ಈ ದಿನ ಚೇಳುಗಳನ್ನು ಹಿಡಿದುಕೊಂಡರೇ ದೇವರ ಶಕ್ತಿಯಿಂದ ಯಾವುದೇ ತೊಂದರೆಯಾಗುವದಿಲ್ಲವೆಂಬುದು ಭಕ್ತರ ನಂಬಿಕೆ.

ಕೊಂಡಮಾಯಿ ದೇವಿ ಕೃಪೆ: ಚೇಳು ಕಚ್ಚಿದರೂ ವಿಷ ಏರುವುದಿಲ್ಲ. ಒಂದು ವೇಳೆ ವಿಷ ಏರಿದರೆ ಕೊಂಡಮಾಯಿ ದೇವಿಯ ಭಂಡಾರ (ಹಳದಿ ಬಣ್ಣ) ಹಚ್ಚಿಕೊಂಡರೆ ಕ್ಷಣಮಾತ್ರದಲ್ಲಿ ವಾಸಿಯಾಗುತ್ತದೆಯಂತೆ. ಜನರು ಇದು ಕೊಂಡಮಾಯಿ ದೇವಿಯ ಪವಾಡ ಎಂದು ನಂಬಿದ್ದಾರೆ. ಬೇರೆ ಸಮಯದಲ್ಲಿ ಗ್ರಾಮಸ್ಥರಿಗೆ ಕಚ್ಚಬಾರದು ಎನ್ನುವ ದೃಷ್ಟಿಯಿಂದ ಪ್ರತಿ ವರ್ಷ ಚೇಳುಗಳನ್ನು ಆರಾಧಿಸಲಾಗುತ್ತದೆ.

ಕಂದಕೂರು ಗ್ರಾಮದಲ್ಲಿ ಚೇಳುಗಳ ಜಾತ್ರೆ ಮಾಡಲಾಗುತ್ತದೆ. ನಾಗರ ಪಂಚಮಿ ಹಬ್ಬದ ದಿನ ಇಲ್ಲಿ ಚೇಳುಗಳನ್ನೆ ದೇವರೆಂದು ತಿಳಿದು ಪೂಜಿಸಿ ಮೈಮೇಲೆ ಹಾಕಿಕೊಂಡು ಸಂಭ್ರಮ ಪಡುತ್ತೇವೆ. ರಾಜ್ಯದಲ್ಲಿ ಎಲ್ಲಿಯೂ ಇಲ್ಲದಂತಹ ಒಂದು ವಿಶೇಷ ಆಚರಣೆ ನಮ್ಮ ಗ್ರಾಮದಲ್ಲಿ ನಡೆಯುವುದು ವಿಶೇಷ ಎನ್ನುತ್ತಾರೆ ಭಕ್ತರು.

ಇದನ್ನೂ ಓದಿ: ಶ್ರವಣ ಬೆಳಗೊಳದ ವಿಂಧ್ಯಗಿರಿ ಬೆಟ್ಟದಲ್ಲಿ ಕಲ್ಲು ಕುಸಿತ: ತಪ್ಪಿದ ಅನಾಹುತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.