ETV Bharat / state

ಶಾಲೆ ತೆರೆದು ದರುಶನ ನೀಡದ ಶಿಕ್ಷಕರು​: ಬಾಗಿಲಲ್ಲೇ ಕಾದು ಸುಸ್ತಾದ ವಿದ್ಯಾರ್ಥಿಗಳು! - ಯಾದಗಿರಿಯಲ್ಲಿ ಆರಂಭಗೊಳ್ಳದ ಶಾಲೆಗಳು

ಯಾದಗಿರಿ ನಗರದ ಸರಕಾರಿ ಕನ್ಯಾ ಪ್ರೌಢ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ 10 ಗಂಟೆಯಾದರೂ ಶಿಕ್ಷಕರು ಹಾಗೂ ಉಪನ್ಯಾಸಕರು ಆಗಮಿಸದೇ ಸರ್ಕಾರದ ಆದೇಶವನ್ನು ದಿಕ್ಕರಿಸಿದ್ದಾರೆ. ಶಾಲೆ ಆರಂಭವಾಗುತ್ತದೆ ಎಂದು ಶಾಲಾ ಕಾಲೇಜುಗಳಿಗೆ ಆಗಮಿಸಿದ ವಿದ್ಯಾರ್ಥಿಗಳು, ಶಾಲೆ ಹೊರಗಡೆ ಕಾದು ಕಾದು ಸುಸ್ತಾಗಿದ್ದಾರೆ. ಇನ್ನು ಕೋವಿಡ್ ಮುಂಜಾಗ್ರತಾ ಕ್ರಮ ಕೂಡ ಕೈಗೊಳ್ಳದೇ ಬಹುತೇಕ ಶಾಲೆಗಳಲ್ಲಿ ಸ್ಯಾನಿಟೈಸ್ ಸಹ ಮಾಡದೇ ನಿಷ್ಕಾಳಜಿ ತೋರಲಾಗಿದೆ ಅಂತ ಕೂಡ ಆರೋಪಿಸಲಾಗಿದೆ.

schools not opened in yadgiri district
ಬಾಗಿಲು ತೆರೆಯದ ಶಾಲೆಗಳು
author img

By

Published : Jan 1, 2021, 2:13 PM IST

ಯಾದಗಿರಿ: ಕೊರೊನಾ ಮಹಾಮಾರಿ ಹಿನ್ನೆಲೆ ಕಳೆದ 9 ತಿಂಗಳಿಂದ ಶಾಲಾ ಕಾಲೇಜುಗಳನ್ನ ಇಂದಿನಿಂದ ತೆರೆಯುವಂತೆ ಸರ್ಕಾರ ಆದೇಶವಿತ್ತಿದ್ದರೂ ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಶಿಕ್ಷಣ ಇಲಾಖೆ ಸರ್ಕಾರದ ಆದೇಶದಂತೆ ಶಾಲೆ ತೆರೆದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಲ್ಲಿ ಇದು ಬೇಸರ ಮೂಡಿಸಿದೆ.

ಬಾಗಿಲು ತೆರೆಯದ ಶಾಲೆಗಳು

ಕೊರೊನಾ ಮುಂಜಾಗ್ರತಾ ಕ್ರಮಗಳ ಜೊತೆಗೆ ಎಸ್​ಎಸ್​ಎಲ್​ಸಿ ಸೇರಿದಂತೆ ಪಿಯು ಕಾಲೇಜುಗಳನ್ನು ಹೊಸ ವರ್ಷದಿಂದ ಪ್ರಾರಂಭಿಸಬೇಕು ಅಂತ ಸರ್ಕಾರ ಆದೇಶ ನೀಡಿದೆ. ಈ ಹಿನ್ನೆಲೆ ಜಿಲ್ಲೆಯಲ್ಲಿನ ವಿದ್ಯಾರ್ಥಿಗಳು ಇಂದು ಬೆಳಗ್ಗೆ 9 ಗಂಟೆಗೆ ಶಾಲಾ ಕಾಲೇಜುಗಳಿಗೆ ಆಗಮಿಸಿದ್ದರು. ಆದರೆ, 10 ಗಂಟೆ ಕಳೆದರೂ ಶಿಕ್ಷಕರು ಶಾಲೆಗೆ ಬಾರದ ಹಿನ್ನೆಲೆ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಯಾದಗಿರಿ ನಗರದ ಸರಕಾರಿ ಕನ್ಯಾ ಪ್ರೌಢ ಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಶಿಕ್ಷಕರು ಹಾಗೂ ಉಪನ್ಯಾಸಕರು ಆಗಮಿಸದೇ ಸರ್ಕಾರದ ಆದೇಶಕ್ಕೆ ನಿರ್ಲಕ್ಷ್ಯ ತೋರಿರುವುದು ಎದ್ದು ಕಾಣುತ್ತಿದೆ. ಶಾಲೆ ಆರಂಭವಾಗುತ್ತದೆ ಎಂದು ಶಾಲಾ ಕಾಲೇಜುಗಳಿಗೆ ಆಗಮಿಸಿದ ವಿದ್ಯಾರ್ಥಿಗಳು,ಶಾಲೆ ಹೊರಗಡೆ ಕಾದು ಕಾದು ಸುಸ್ತಾಗಿದ್ದಾರೆ. ಇನ್ನು ಕೋವಿಡ್ ಮುಂಜಾಗ್ರತಾ ಕ್ರಮ ಕೂಡ ಕೈಗೊಳ್ಳದೇ ಬಹುತೇಕ ಶಾಲೆಗಳಲ್ಲಿ ಸ್ಯಾನಿಟೈಸ್ ಸಹ ಮಾಡದೇ ನಿಷ್ಕಾಳಜಿ ತೋರಲಾಗಿದೆ ಅನ್ನೋ ಆರೋಪಗಳು ಕೂಡ ಕೇಳಿ ಬಂದಿದೆ.

ಮಾಧ್ಯಮದವರು ಈ ಕುರಿತು ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು, ನಂತರ ಜಿಲ್ಲೆಯ ಶಾಲಾ ಕಾಲೇಜುಗಳತ್ತ ಶಿಕ್ಷಕರು ಹಾಗೂ ಉಪನ್ಯಾಸಕರು ಮುಖ ಮಾಡಿದ್ದಾರೆ. ಆದರೆ, ಕೇವಲ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸ್ಯಾನೆಟೈಸರ್ ಸಿಂಪರಣೆ ಮಾಡಿಲ್ಲ ಹಾಗೂ ಕೊರೊನಾ ನಿಯಮ ಪಾಲಿಸಿಲ್ಲ ಅಂತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.