ಯಾದಗಿರಿ: ಶಾಲಾ ವಾಹನದ ಚಕ್ರದಡಿಗೆ ಸಿಲುಕಿ ಬಾಲಕಿಯೋರ್ವಳು ಸಾವನ್ನಪ್ಪಿದ ಮನಕಲುಕುವ ಘಟನೆ ಗುರುಮಠಕಲ್ ಪಟ್ಟಣದ ಲಕ್ಷ್ಮೀನಗರ ಬಡಾವಣೆಯಲ್ಲಿ ಗುರುವಾರ ನಡೆದಿದೆ.

ಮನಸ್ವಿನಿ (3) ಮೃತ ಬಾಲಕಿ. ಖಾಸಗಿ ಶಾಲೆಗೆ ಸೇರಿದ ಶಾಲಾ ವಾಹನವು ಮನೆ ಮುಂದೆ ಶಾಲಾ ಮಕ್ಕಳನ್ನು ಇಳಿಸಲು ಬಂದಾಗ ಈ ದುರ್ಘಟನೆ ಸಂಭವಿಸಿದೆ. ಕಣ್ಣ ಮುಂದೆಯೇ ನಡೆದ ದುರ್ಘಟನೆ ಕಂಡು ತಂದೆ-ತಾಯಿ, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಓದಿ:ವಿಡಿಯೋ: ಮಗುವಿನ ಮೈಮೇಲೆ ಹರಿಯಿತು ಕಾರು: ಚಾಲಕನ ನಿರ್ಲಕ್ಷ್ಯಕ್ಕೆ ಪುಟ್ಟ ಬಾಲಕಿ ಸಾವು )