ಸುರಪುರ: ನಗರದ ಗುಡಿಹಾಳ ರೈತ ತನ್ನ ಮೂರು ಎಕರೆ ಜಮೀನಿನಲ್ಲಿ ಬದನೆಕಾಯಿ, ಟೊಮ್ಯಾಟೊ, ಸೌತೆಕಾಯಿ ಬೆಳೆದಿದ್ದು, ಕೊರೊನಾ ಎಫೆಕ್ಟ್‌ನಿಂದ ಅವುಗಳನ್ನು ಕಟಾವು ಮಾಡದೆ ಇರುವುದರಿಂದ ಬೆಳೆ ಗಿಡದಲ್ಲೇ ಕೊಳೆತು ಹಾಳಾಗಿದೆ.
ತಾಲೂಕಿನ ಗುಡಿಹಾಳ (ಜೆ) ಗ್ರಾಮದ ಪ್ರವೀಣ್ ಕುಮಾರ್ ಎಂಬ ರೈತ ಮೂರು ಎಕರೆ ಜಮೀನಿನಲ್ಲಿ ಬದನೆಕಾಯಿ, ಟೊಮ್ಯಾಟೊ, ಸೌತೆಕಾಯಿ, ಮೆಣಸಿನಕಾಯಿ ಬೆಳೆದಿದ್ದು, ಈಗ ಮಾರಾಟವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಬೆಳೆ ಇನ್ನೇನು ಮಾರಾಟಕ್ಕೆ ತರಬೇಕು ಎನ್ನುವ ಸಮಯದಲ್ಲಿ ಕೊರೊನಾ ಪರಿಣಾಮ ಲಾಕ್‌ಡೌನ್ ಘೋಷಣೆಯಾಯಿತು. ಇದರಿಂದ ಎಲ್ಲಾ ತರಕಾರಿ ಗಿಡದಲ್ಲಿಯೇ ಕೊಳೆಯಲಾರಂಭಿಸಿವೆ. ಬ್ಯಾಂಕ್ ಮತ್ತು ಖಾಸಗಿಯವರ ಬಳಿಯಲ್ಲಿ ಸಾಲ ಮಾಡಿ ಖರ್ಚು ಮಾಡಿದ್ದು, ಈಗ ಬೆಳೆ ನಷ್ಟದಿಂದಾಗಿ ಆತ್ಮಹತ್ಯೆಯೊಂದೇ ಪರಿಹಾರ ಎನ್ನುವಂತಾಗಿದೆ. ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೆಕೆಂದು ಪ್ರವೀಣ್ ಕುಮಾರ್ ತಮ್ಮ ಅಳಲು ತೋಡಿಕೊಂಡರು.