ETV Bharat / state

ಯಾದಗಿರಿ: ಹಿಮ್ಮುಖವಾಗಿ 24 ಕಿ.ಮೀ ಟ್ರ್ಯಾಕ್ಟರ್ ಚಲಾಯಿಸಿ ₹1.45 ಲಕ್ಷ ಬಹುಮಾನ ಗೆದ್ದ ಯುವಕ

ಯಾದಗಿರಿಯಲ್ಲಿ ಹಿಮ್ಮುಖ ಟ್ರ್ಯಾಕ್ಟರ್​ ಚಾಲನೆ ಸ್ಪರ್ಧೆ ಏರ್ಪಡಿಸಲಾಗಿತ್ತು.

ಹಿಮ್ಮುಖ ಟ್ರ್ಯಾಕ್ಟರ್​ ಚಾಲನೆ ಸ್ಪರ್ಧೆ
ಹಿಮ್ಮುಖ ಟ್ರ್ಯಾಕ್ಟರ್​ ಚಾಲನೆ ಸ್ಪರ್ಧೆ
author img

By

Published : Aug 21, 2023, 3:51 PM IST

Updated : Aug 21, 2023, 8:18 PM IST

ಹಿಮ್ಮುಖ ಟ್ರ್ಯಾಕ್ಟರ್​ ಚಾಲನೆ ಸ್ಪರ್ಧೆ

ಯಾದಗಿರಿ: ಇಂದು ನಾಡಿನಾದ್ಯಂತ ಸಡಗರ ಸಂಬ್ರಮದಿಂದ ನಾಗರ ಪಂಚಮಿ ಹಬ್ಬವನ್ನ ಆಚರಣೆ ಮಾಡಲಾಯಿತು. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ದಿನವನ್ನ ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಪ್ರತಿವರ್ಷ ನಾಗರ ಪಂಚಮಿಯಂದು ವಿವಿಧ ಗ್ರಾಮಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಎತ್ತಿನ ಬಂಡಿ ಓಟದ ಸ್ಪರ್ಧೆ, ಭಾರದ ಕಲ್ಲುಗಳ ಎತ್ತುವ ಮತ್ತು ಎತ್ತಿಗಳಿಗೆ ಕಟ್ಟಿ ಓಡಿಸುವ ಸ್ಪರ್ಧೆಗಳು ಸೇರಿದಂತೆ ವಿವಿಧ ಸ್ಪರ್ಧೆಗಳ ಏರ್ಪಡಿಸಲಾಗುತ್ತದೆ. ಅದರಂತೆ ಜಿಲ್ಲೆಯಲ್ಲೂ ಈ ಬಾರಿ ವಿಶೇಷವಾಗಿ ಪುರುಷರಿಗಾಗಿ ವಿಭಿನ್ನ ಟ್ರ್ಯಾಕ್ಟರ್ ಅನ್ನು ಹಿಮ್ಮುಖವಾಗಿ ಚಲಾಯಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ದೋರನಹಳ್ಳಿ ಗ್ರಾಮದ ಬಸಲಿಂಗಪ್ಪ ಹುರಸಗುಂಡಗಿ ಎಂಬವರು ಗೆದ್ದು ಸಂಭ್ರಮಿಸಿದರು.

ಸ್ಪರ್ಧೆ ಗೆದ್ದ ಸಾಹಸಿ ಬಸಲಿಂಗಪ್ಪ ಅವರಿಗೆ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ.ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು, ಬಸಲಿಂಗಪ್ಪ ವಿಜಯಪುರ-ಹೈದರಾಬಾದ್ ಹೆದ್ದಾರಿಯಲ್ಲಿ ಬರುವ ದೋರನಹಳ್ಳಿ ಗ್ರಾಮದಿಂದ ಯಾದಗಿರಿ ಹೊರವಲಯದ ವಡಗೇರಿ ಕ್ರಾಸ್‌ವರೆಗೆ ಟ್ರ್ಯಾಕ್ಟರ್ ಅನ್ನು ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು ಒಂದು ತಾಸು 43 ನಿಮಿಷದಲ್ಲಿ ಗುರಿ ತಲುಪಿದ್ದಾನೆ. ಇನ್ನೋರ್ವ ಸ್ಪರ್ಧಿ ಪರಶುರಾಮ ಟೋಕಾಪುರ ಎಂಬವರು 1 ತಾಸು 45 ನಿಮಿಷದಲ್ಲಿ ಇದೇ ದೂರವನ್ನು ಕ್ರಮಿಸಿದರು. ಅಂತಿಮವಾಗಿ 2 ನಿಮಿಷ ಮೊದಲು ತಲುಪಿದ ಬಸಲಿಂಗಪ್ಪ ಹುರಸಗುಂಡಿಗಿ ಅವರನ್ನು ವಿಜೇತರನ್ನಾಗಿ ಘೋಷಿಸಲಾಯಿತು ಎಂದು ತಿಳಿಸಿದರು.

ಸುಮಾರು 24 ಕಿ.ಮೀ ದೂರವನ್ನು ಬಸಲಿಂಗಪ್ಪ ಹುರಸಗುಂಡಗಿ ಅವರು ಅತ್ಯಂತ ತ್ವರಿತವಾಗಿ ತಲುಪಿ ಗೆಲುವಿನ ಕೇಕೆ ಹಾಕಿದರು. ಬೆಂಬಲಿಗರು ಶಿಳ್ಳೆ ಹಾಕಿ, ಶಾಲುಗಳಿಂದ ಸನ್ಮಾನಿಸಿ ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು.

ಬಸಲಿಂಗಪ್ಪ ಹುರುಸಗುಂಡಗಿ ಪ್ರತಿಕ್ರಿಯಿಸಿ, ನಾಗರಪಂಚಮಿ ಹಬ್ಬದಂದು ಪ್ರತಿ ವರ್ಷ ಈ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಸ್ಪರ್ಧೆಯಲ್ಲಿ ವಿಜೇತನಾಗಿದ್ದೇನೆ. ಒಟ್ಟು 1 ಲಕ್ಷ 45 ಸಾವಿರ ರೂ. ಸಿಕ್ಕಿದೆ. ತುಂಬಾ ಖುಷಿಯಾಗಿದೆ ಎಂದು ಹೇಳಿದರು.

ಸಾರ್ವಜನಿಕ ಸಂಚಾರಿ ರಸ್ತೆಗಳ ಮೇಲೆ ಇಂಥ ಸ್ಪರ್ಧೆಗಳನ್ನು ಏರ್ಪಡಿಸುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಸಾರಿಗೆ ಬಸ್​ ಮತ್ತು ಲಾರಿ ಸೇರಿದಂತೆ ಇತರೆ ವಾಹನಗಳು ಓಡಾಡುವ ಮಾರ್ಗದಲ್ಲಿ ಈ ರೀತಿಯ ಸಾಹಸ ನಡೆಸಿರುವುದು ಅಪಾಯಕಾರಿ. ಇಂತಹ ಸ್ಫರ್ಧೆಗಳನ್ನು ಏರ್ಪಡಿಸುವಾಗ ಸೂಕ್ತ ಪ್ರದೇಶಗಳನ್ನು ಆಯ್ದುಕೊಳ್ಳುವುದು ಒಳಿತು ಎಂದು ವಾಹನ ಸವಾರರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಧಾರವಾಡ: ಶಾಲಾ ಮಕ್ಕಳಿಂದ ನಾಗರ ಪಂಚಮಿ ಆಚರಣೆ.. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು

Last Updated : Aug 21, 2023, 8:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.