ETV Bharat / state

ಅಶೋಕ್​ ಗಸ್ತಿಗೆ ರಾಜ್ಯಸಭಾ ಸದಸ್ಯ ಸ್ಥಾನ.. ಹುಣಸಗಿಯಲ್ಲಿ ಸವಿತಾ ಸಮಾಜದಿಂದ ಸಂಭ್ರಮ..

ಎಲ್ಲಾ ರಂಗಗಳಲ್ಲೂ ತೀವ್ರ ಹಿಂದುಳಿದಿರುವ ಸವಿತಾ ಸಮಾಜವನ್ನು ಬಿಜೆಪಿ ಪಕ್ಷ ಗುರುತಿಸಿದೆ. ಅಶೋಕ್​ ಗಸ್ತಿಯನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸುವ ಮೂಲಕ ಸವಿತಾ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಲಾಗಿದೆ ಎಂದು ಹುಣಸಗಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಸಂಗಣ್ಣ ತಿಳಿಸಿದರು.

Rajya Sabha seat for Ashoka Gasthi, celebration by Savita society
ಹುಣಸಗಿಯಲ್ಲಿ ಸವಿತಾ ಸಮಾಜದಿಂದ ಸಂಭ್ರಮ.
author img

By

Published : Jun 16, 2020, 7:35 PM IST

ಸುರಪುರ : ರಾಯಚೂರಿಗ ಅಶೋಕ್​ ಗಸ್ತಿಗೆ ಬಿಜೆಪಿ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ನೇಮಿಸಿದ್ದಕ್ಕೆ ಹುಣಸಗಿಯಲ್ಲಿ ಸಂಭ್ರಮಾಚರಣೆ ಮಾಡಲಾಯಿತು.

ಹುಣಸಗಿ ಪಟ್ಟಣದಲ್ಲಿನ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಸೇರಿದ ನೂರಾರು ಸಂಖ್ಯೆಯ ಸವಿತಾ ಸಮಾಜದ ಯುವಕರು ಅಶೋಕ್ ಗಸ್ತಿ ನೇಮಕಕ್ಕೆ ಹರ್ಷ ವ್ಯಕ್ತಪಡಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಹುಣಸಗಿಯಲ್ಲಿ ಸವಿತಾ ಸಮಾಜದಿಂದ ಸಂಭ್ರಮ
ಈ ಸಂದರ್ಭದಲ್ಲಿ ಹುಣಸಗಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಸಂಗಣ್ಣ ಮಾತನಾಡಿ, ಎಲ್ಲಾ ರಂಗಗಳಲ್ಲೂ ತೀವ್ರ ಹಿಂದುಳಿದಿರುವ ಸವಿತಾ ಸಮಾಜವನ್ನು ಬಿಜೆಪಿ ಪಕ್ಷ ಗುರುತಿಸಿದೆ. ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸುವ ಮೂಲಕ ಸವಿತಾ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಲಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಅಶೋಕ್​ ಗಸ್ತಿಯವರು ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹಾಗೂ ಸವಿತಾ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.