ಯಾದಗಿರಿ: ದೇಶಾದ್ಯಂತ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಭಾರತೀಯ ರೈಲ್ವೆ ಇಲಾಖೆ ನಿಲ್ದಾಣದಲ್ಲಿ ಜನದಟ್ಟಣೆ ಕಡಿಮೆ ಮಾಡಲು ಕ್ರಮ ಕೈಗೊಂಡಿದೆ.
ರೈಲ್ವೆ ಪ್ಲಾಟ್‌ಫಾರಂ ಟಿಕೆಟ್ ದರವನ್ನ ಹೆಚ್ಚಿಸಿದೆ. ಯಾದಗಿರಿ ರೈಲ್ವೆ ನಿಲ್ದಾಣ ಸೇರಿದಂತೆ ದೇಶದ ಎಲ್ಲಾ ರೈಲು ನಿಲ್ದಾಣಗಳಲ್ಲಿ 10 ರೂ. ಇದ್ದ ಪ್ಲಾಟ್‌ಫಾರಂ ಟಿಕೆಟ್ ದರವನ್ನ 50 ರೂ.ಗೆ ಹೆಚ್ಚಿಸಿದೆ. ಮಾರ್ಚ್ 31 ರ ವರೆಗೆ ಟಿಕೆಟ್ ದರ 50 ರೂ. ಇರಲಿದೆ.