ETV Bharat / state

ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ...

ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿನ ಹೆದ್ದಾರಿ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಅನಾವರಣಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಕೆಂಭಾವಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

author img

By

Published : Aug 17, 2020, 5:23 PM IST

Surapur
ಮನವಿ ಸಲ್ಲಿಕೆ

ಸುರಪುರ: ಬೆಳಗಾವಿಯ ಪೀರನವಾಡಿ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಲು ಅನುಮತಿ ನಿರಾಕರಿಸುತ್ತಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಬೆಳಗಾವಿ ಜಿಲ್ಲಾಡಳಿತದ ನಡೆಯನ್ನು ಖಂಡಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಸುರಪುರ ತಾಲೂಕಿನ ಕೆಂಭಾವಿಯಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸೇನೆಯ ಅಧ್ಯಕ್ಷ ಚಾಂದಪಾಶ ಮುಲ್ಲಾ ಮಾತನಾಡಿ, ರಾಯಣ್ಣನ ಜನ್ಮ ಭೂಮಿಯಲ್ಲಿಯೇ ರಾಯಣ್ಣನ ಪ್ರತಿಮೆಗೆ ಅಧಿಕಾರಿಗಳು ಇಲ್ಲ ಸಲ್ಲದ ನೆಪ ಹೇಳಿ ಅನುಮತಿ ನಿರಾಕರಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡು. ರಾಜಕಾರಣಿಗಳ ಮರಾಠಿ ವ್ಯಾಮೋಹಕ್ಕೆ ಕನ್ನಡಿಗ ತನ್ನ ಸಂಪ್ರದಾಯ, ಸಂಸ್ಕೃತಿ, ಅಭಿಮಾನವನ್ನು ಭಯದಿಂದ ಬಲಿ ನೀಡುವ ಪರಿಸ್ಥಿತಿಗೆ ಬಂದು ನಿಂತಿದ್ದಾನೆ. ಇದು ಕನ್ನಡದ ನೆಲ. ಇಲ್ಲಿ ಕನ್ನಡವೇ ಸಾರ್ವಭೌಮ ಎನ್ನುವಂಥ ಗಂಡೆದೆಯ ರಾಜಕಾರಣದ ಗಂಡಿನ ಅವಶ್ಯಕತೆ ಬೆಳಗಾವಿ ಜಿಲ್ಲೆಗಿದೆ ಎಂದರು.

ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ

ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರ ಮುದನೂರ ಮಾತನಾಡಿ, ಪೀರನವಾಡಿ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಬೆಳಗಾವಿ ಜಿಲ್ಲಾಡಳಿತವೇ ಯಾವುದೇ ಸಬೂಬು ನೀಡದೆ ಸ್ಥಾಪಿಸಬೇಕು ಎಂದರು. ನಂತರ ಕಂದಾಯ ನಿರೀಕ್ಷಕರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಘವೇಂದ್ರ ತಳವಾರ, ಸಚಿನ್ ಶಿವು ಸಾಸನೂರ್, ಶರಣು ತಳವಾರ್ ಪ್ರಶಾಂತ ಬೊಮ್ಮನಹಳ್ಳಿ, ದೊಡ್ಡಪ್ಪ ಮುದನೂರ, ರಮೇಶ್ ಜೈನಾಪುರ, ಧನರಾಜ್ ಜೈನಾಪುರ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.