ಯಾದಗಿರಿ: ರಂಜಾನ ಹಬ್ಬದ ಪ್ರಯುಕ್ತ ಇನ್ಸ್ಪೆಕ್ಟರ್ ನಾಗರಾಜ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಗಿಯಿತು. ಹಿಂದೂ-ಮುಸ್ಲಿಂ ಸಮುದಾಯದವರು ಪ್ರೀತಿ ಸೌಹರ್ದತೆಯಿಂದ ಸಾಮಾರಸ್ಯವಾಗಿ ನಗರದಲ್ಲಿ ಹಬ್ಬ ಆಚರಿಸಬೇಕೆಂದು ಶಹಾಪುರ ಪೊಲೀಸ್ ಇನ್ಸ್ಪೆಕ್ಟರ್ ನಾಗರಾಜ ಹೇಳಿದರು.
ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಯಾವುದೇ ಗೊಂದಲಗಳಿಗೆ, ಅಹಿತಕರ ಘಟನೆಗಳಿಗೆ ಹಾಗೂ ಕೃತ್ಯಗಳಿಗೆ ಅವಕಾಶ ಎಡೆ ಮಾಡಿಕೊಡದೆ, ಹಿಂದೂ ಮುಸ್ಲಿಂ ಬಾಂಧವರು ಪ್ರೀತಿ, ಶಾಂತಿ ಹಾಗೂ ಭಾವೈಕತ್ಯೆಯಿಂದ ಹಬ್ಬ ಆಚರಿಸಬೇಕು ಎಂದರು. ಇನ್ನು ಯುವಕರು ವಾಟ್ಸಪ್, ಪೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂಗಳಲ್ಲಿ ಯಾವುದೇ ಅವಹೇಳನಕಾರಿ ಪೋಸ್ಟ್ ಹಾಕಬಾರದೆಂದು ಸಲಹೆ ನೀಡಿದರು.
ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಲ್ಲಿ ಸೂಕ್ಷ್ಮವಾಗಿ ಪೊಲೀಸ್ ಇಲಾಖೆಗೆ ಸೂಚಿಸಬೇಕು. ಅಪರಾಧ ಕೃತ್ಯಗಳನ್ನು ಎಸಗಬಾರದು. ಹಬ್ಬದ ದಿನದಲ್ಲಿ ಸಾರ್ವಜನಿಕರು ನಗರದ ಸಂಚಾರ ನಿಯಮಗಳನ್ನು ಪಾಲಿಸಬೇಕೆಂದು ಸಲಹೆ ನೀಡಿದರು. ಪೊಲೀಸ್ ನಡೆಸಿದ ಶಾಂತಿ ಸಭೆಯಲ್ಲಿ ನಗರಸಭೆಯ ಸದಸ್ಯರು, ಪ್ರಮುಖ ನಾಯಕರು, ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.