ETV Bharat / state

ಸುರಪುರ ಬ್ಯಾಂಕ್‌ಗಳ ಮುಂದೆ ಅರ್ಥ ಕಳೆದುಕೊಂಡ ಸಾಮಾಜಿಕ ಅಂತರ ನಿಯಮ

author img

By

Published : Apr 13, 2020, 2:29 PM IST

ಸುರಪುರ ನಗರದಲ್ಲಿ ಬ್ಯಾಂಕ್​​ ಮುಂದೆ ನೂಕುನುಗ್ಗಲಿನಲ್ಲಿ ನಿಂತು ಸಾಮಾಜಿಕ ಅಂತರವನ್ನು ಮರೆತಿದ್ದಾರೆ.

Surapura
ಸಾಮಾಜಿಕ ಅಂತರ ಮರೆತ ಜನ

ಸುರಪುರ: ನಗರದಲ್ಲಿರುವ ಬ್ಯಾಂಕ್‌ಗಳ ಮುಂದೆ ಜನರು ಗುಂಪಾಗಿ ನಿಂತು ಸಾಮಾಜಿಕ ಅಂತರವನ್ನು ಗಾಳಿಗೆ ತೂರಿದ್ದಾರೆ.

ಬ್ಯಾಂಕ್​​ ಮುಂದೆ ನೂಕುನುಗ್ಗಲಿನಲ್ಲಿ ನಿಂತ ಜನ.

ಕೊರೊನಾ ಎಂಬ ಸಾಂಕ್ರಾಮಿಕ ರೋಗ ಬಹು ಬೇಗನೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಡೆಯಲು ಸಾಮಾಜಿಕ ಅಂತರವನ್ನು ಪಾಲಿಸುವಂತೆ ಈಗಾಗಲೇ ಸರ್ಕಾರಗಳು ಪದೇ ಪದೇ ಹೇಳುತ್ತಿವೆ. ಒಬ್ಬ ವ್ಯಕ್ತಿಯಿಂದ ವ್ಯಕ್ತಿಗೆ ಕನಿಷ್ಠ 3 ಅಡಿ ಅಥವಾ ಒಂದು ಮೀಟರ್ ಅಂತರ ಕಾಪಾಡುವಂತೆ ನಿಯಮ ಜಾರಿಗೊಳಿಸಿದೆ.

ಆದರೆ, ನಗರದಲ್ಲಿರುವ ಬ್ಯಾಂಕುಗಳ ಮುಂದೆ ಜನರು ಗುಂಪಾಗಿ ನಿಂತು ಸಾಮಾಜಿಕ ಅಂತರದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಬ್ಯಾಂಕ್ ಆಡಳಿತ ಮಂಡಳಿಯಾಗಲಿ, ತಾಲೂಕು ಆಡಳಿತವಾಗಲಿ ಕೂಡಲೇ ಎಚ್ಚೆತ್ತು ಸಾಮಾಜಿಕ ಅಂತರ ಕಾಯುವಂತೆ ಕ್ರಮ ಕೈಗೊಳ್ಳುವ ಮೂಲಕ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.