ETV Bharat / state

ಕಷ್ಟಪಟ್ಟು ಬೆಳೆದ ಭತ್ತ ನಾಶ: ದಿಕ್ಕು ತೋಚದಾದ ವಿಶೇಷ ಚೇತನ ರೈತ

author img

By

Published : Oct 28, 2020, 12:29 PM IST

ಯಾದಗಿರಿಯ ಬಡ ವಿಶೇಷಚೇತನ ರೈತನೋರ್ವ ಕಷ್ಟಪಟ್ಟು ಬೆಳೆದಿದ್ದ ಭತ್ತದ ಬೆಳೆ ಭೀಮಾ ನದಿ ಪ್ರವಾಹದಿಂದ ಹಾನಿಗೊಳಗಾಗಿದ್ದು, ಸೂಕ್ತ ಪರಿಹಾರಕ್ಕಾಗಿ ಮನವಿ ಮಾಡಿದ್ದಾನೆ.

Paddy crop damaged due to flood in Yadgiri
ಭೀಮಾ ನದಿಯ ಪ್ರವಾಹಕ್ಕೆ ಬಡ ರೈತನ ಬೆಳೆ ನಾಶ

ಯಾದಗಿರಿ: ಆತ ಓರ್ವ ವಿಶೇಷಚೇತನ ರೈತ. ಜೀವನದಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕು, ನಾಲ್ಕು ಕಾಸು ಸಂಪಾದನೆ ಮಾಡಬೇಕು, ತನ್ನ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಹಂಬಲ ಆತನಲ್ಲಿತ್ತು. ಹೀಗಾಗಿ ತನ್ನ ಬರಡು ಭೂಮಿಯನ್ನು ಹದಗೊಳಿಸಿ ಭತ್ತ ಬೆಳೆದಿದ್ದ. ಇನ್ನೇನು ಫಸಲು ಕೈಗೆ ಬಂತು ಅನ್ನುವಷ್ಟರಲ್ಲಿ ಫಸಲು ಭೀಮಾ ನದಿ ಪ್ರವಾಹಕ್ಕೆ ತುತ್ತಾಗಿದೆ. ಇದರಿಂದ ಬಡ ರೈತ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ನಾವು ಹೇಳುತ್ತಿರುವುದು ಯಾದಗಿರಿ ಪಟ್ಟಣದ ಲಾಡಸ್ ಗಲ್ಲಿಯ ರೈತ ಮಲ್ಲಯ್ಯ ಪೂಜಾರ್ ಕಥೆ. ಒಂದು ಕಾಲಿನ ಸ್ವಾಧೀನ ಕಳೆದುಕೊಂಡು ಕೋಲಿನ ಸಹಾಯದಿಂದಲೇ ನಡೆದಾಡುವ ಈತ, ಕಷ್ಟಪಟ್ಟು ದುಡಿದು ತಿನ್ನುವ ಸ್ವಾವಲಂಬಿ. ಈ ವರ್ಷ ಉತ್ತಮ ಬೆಳೆ ಬರುತ್ತೆ ಎಂದು ತನ್ನ ಐದು ಎಕರೆ ಜಮೀನಿನಲ್ಲಿ ಸಾಲ ಮಾಡಿ ಭತ್ತ ನಾಟಿ ಮಾಡಿದ್ದ. ಅದರಂತೆ, ಉತ್ತಮ ಫಸಲು ಕೂಡಾ ಬಂದಿತ್ತು. ಇನ್ನೇನು ಹದಿನೈದು ದಿನ ಕಳೆದ್ರೆ ಕಷ್ಟಪಟ್ಟಿದ್ದಕ್ಕೆ ಪ್ರತಿಫಲ ಸಿಗುತ್ತೆ ಎಂದು ಮಲ್ಲಯ್ಯ ಖುಷಿಯಲ್ಲಿದ್ದ. ಆದರೆ, ರಾತ್ರೋರಾತ್ರಿ ಉಕ್ಕಿ ಬಂದ ಭೀಮಾ ನದಿಯ ಪ್ರವಾಹ ಬಡ ರೈತನ ಕನಸು ನುಚ್ಚು ನೂರು ಮಾಡಿದೆ.

ಭೀಮಾ ನದಿಯ ಪ್ರವಾಹಕ್ಕೆ ಬಡ ರೈತನ ಬೆಳೆ ನಾಶ

ಮಹಾರಾಷ್ಟ್ರದ ಜಲಾಶಯಗಳಿಂದ ಭೀಮಾ ನದಿಗೆ ನೀರು ಹರಿಸಿದ್ದರಿಂದ, ಪ್ರವಾಹ ಉಂಟಾಗಿ ಮಲ್ಲಯ್ಯ ಪೂಜಾರ್​ ಜಮೀನಿನಲ್ಲಿ ನೀರು ನಿಂತು ಭತ್ತದ ಬೆಳೆ ಸಂಪೂರ್ಣ ಹಾಳಾಗಿದೆ. ಇತ್ತ ಹಾಕಿದ ದುಡ್ಡೂ ಇಲ್ಲದೆ, ಬೆಳೆದ ಬೆಳೆ ಕೈಗೆ ಸಿಗದೆ ತನ್ನ ಕುಟುಂಬ ನಿರ್ವಹಣೆ ಹೇಗೆ ಮಾಡುವುದು? ಪಡೆದ ಸಾಲ ಹೇಗೆ ತೀರಿಸುವುದು ಎಂಬ ಚಿಂತೆಯಿಂದ ಮಲ್ಲಯ್ಯ ಕಂಗಾಲಾಗಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.