ETV Bharat / state

ಸುರಪುರದ ಪ್ರಭುಲಿಂಗೇಶ್ವರ ದೇವಸ್ಥಾನದಿಂದ ಅಬ್ಬೆ ತುಮಕೂರಿಗೆ ಭಕ್ತರ ಪಾದಯಾತ್ರೆ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಲಕ್ಷ್ಮಿಪುರ ಗ್ರಾಮದ ಭಕ್ತರ 23ನೇ ಪಾದಯಾತ್ರೆಗೆ ಲಕ್ಷ್ಮಿಪುರ ಶ್ರೀಗಿರಿ ಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದ್ರು.

padayatra from lakshmipur villagers
ಲಕ್ಷ್ಮಿಪುರ ಗ್ರಾಮದ ಭಕ್ತರ ಪಾದಯಾತ್ರೆ
author img

By

Published : Aug 18, 2020, 10:25 PM IST

ಸುರಪುರ: ಕಳೆದ 22 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಲಕ್ಷ್ಮಿಪುರ ಗ್ರಾಮದ ಭಕ್ತರ ಪಾದಯಾತ್ರೆ ಈ ವರ್ಷದ ಶ್ರಾವಣ ಮಾಸದ ಅಂಗವಾಗಿ ಇಂದು ಚಾಲನೆ ನೀಡಲಾಯಿತು.

ಲಕ್ಷ್ಮಿಪುರ ಗ್ರಾಮದ ಭಕ್ತರ ಪಾದಯಾತ್ರೆ
ಲಕ್ಷ್ಮಿಪುರ ಶ್ರೀಗಿರಿ ಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ 23ನೇ ವರ್ಷದ ಪಾದಯಾತ್ರೆ ಚಾಲನೆ ನೀಡಿ ಭಕ್ತಾದಿಗಳಿಗೆ ಶುಭ ಹಾರೈಸಿದರು.
ಲಕ್ಷ್ಮಿಪುರ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನ ಆವರಣದಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಜನ ಭಕ್ತಾದಿಗಳು ಭಾಗವಹಿಸಿದರು. ಪಾದಯಾತ್ರೆಯ ನೇತೃತ್ವ ವಹಿಸಿದ್ದ ಆನಂದ್ ವಿಶ್ವಕರ್ಮ ಮಾತನಾಡಿ, ಈ ವರ್ಷದ ಪಾದಯಾತ್ರೆಯ ವಿಶೇಷವಾಗಿ ದೇಶಕ್ಕೆ ಶಾಪವಾಗಿ ಪರಿಣಮಿಸಿರುವ ಕೊರೊನಾ ನಿರ್ಮೂಲನೆಯಾಗಲಿ ಹಾಗೂ ಈ ನಾಡಿಗೆ ಮಳೆ ಬೆಳೆ ಚೆನ್ನಾಗಿ ಬಂದು ಸಮೃದ್ಧಗೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಲು ತೆರಳುತ್ತಿರುವುದಾಗಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.