ಯಾದಗಿರಿ: ಇಲ್ಲಿನ ಕೌಳೂರು ಗ್ರಾಮದ ಸಾಬರೆಡ್ಡಿ ಅವರ ಕುಟುಂಬಕ್ಕೆ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ 2 ಲಕ್ಷ ರೂ. ವೈಯ್ಯಕ್ತಿಕ ಪರಿಹಾರವಾಗಿ ನೀಡಿದರು.
ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕೌಳೂರ ಗ್ರಾಮದಲ್ಲಿ ಕೊಚ್ಚಿಹೋದ ಸಾಬರೆಡ್ಡಿ ಕುಟಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು.
ನಿಸರ್ಗದ ಮುಂದೆ ಯಾರ ಆಟವೂ ನಡೆಯುವುದಿಲ್ಲ. ವಿಧಿಯಾಟಕ್ಕೆ ನಾವೆಲ್ಲಾ ಹೆಜ್ಜೆ ಹಾಕಬೇಕಾಗುತ್ತೆ. ನೀವು ಚಿಂತಿಸದಿರಿ ನಿಮ್ಮ ಕುಟಂಬಕ್ಕೆ ದೇವರು ಒಳ್ಳೆಯದು ಮಾಡುತ್ತಾನೆ ಎಂದು ನಿಖಿಲ್ ಕುಮಾರಸ್ವಾಮಿ ಪ್ರವಾಹದಲ್ಲಿ ಕೊಚ್ಚಿಹೋದ ಸಂತ್ರಸ್ತ ಕುಟುಂಬವನ್ನು ಸಂತೈಸಿದರು.
ಗುರುಮಿಠಕಲ್ ಶಾಸಕ ನಾಗಣ್ಣಗೌಡ ಕಂದಕೂರ ನೈಸರ್ಗಿಕ ವಿಕೋಪ ಪರಿಹಾರ ನಿಧಿಯಡಿ ಸಾಬರೆಡ್ಡಿ ಕುಟುಂಬಕ್ಕೆ ಸರಕಾರದ ಪರವಾಗಿ 5 ಲಕ್ಷ ರೂ ಪರಿಹಾರ ವಿತರಿಸಿದರು.