ETV Bharat / state

ದಿನಸಿ ಮತ್ತು ತರಕಾರಿ ಮಾರಾಟಕ್ಕೂ ಪೊಲೀಸ್ ಇಲಾಖೆ-ನಗರಸಭೆಯಿಂದ ನಿಯಮ ಜಾರಿ - new rules in surapura

ಸುರಪುರದಲ್ಲಿ ಕಿರಾಣಿ ಮತ್ತು ತರಕಾರಿ ಮಾರಾಟಕ್ಕೂ ಪೊಲೀಸ್ ಇಲಾಖೆ ಹಾಗೂ ನಗರಸಭೆಯಿಂದ ನಿಯಮ ರೂಪಿಸಲಾಗಿದೆ.

surpura
ಕಿರಾಣಿ ಅಂಗಡಿ
author img

By

Published : Mar 25, 2020, 6:05 PM IST

ಸುರಪುರ: ಭಾರತ ಲಾಕ್‌ಡೌನ್ ಆದ ಹಿನ್ನೆಲೆ ನಗರದಲ್ಲಿ ಸಂಪೂರ್ಣ ಬಂದ್ ಆಚರಿಸಲಾಗುತ್ತಿದೆ. ಸರ್ಕಾರ ದಿನಸಿ, ಔಷಧಿಗಳು ಮತ್ತು ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು, ಇದರಿಂದ ಜನಸಂದಣಿ ಉಂಟಾಗುತ್ತಿದೆ. ಹಾಗಾಗಿ ಕಿರಾಣಿ ಮತ್ತು ತರಕಾರಿ ಮಾರಾಟಕ್ಕೂ ಪೊಲೀಸ್ ಇಲಾಖೆ ಮತ್ತು ನಗರಸಭೆಯಿಂದ ನಿಯಮ ರೂಪಿಸಲಾಗಿದೆ.

ದಿನಸಿ ಸಾಮಾನು ಮತ್ತು ತರಕಾರಿ, ಹಣ್ಣು ಖರೀದಿಗೆಂದು ನೂರಾರು ಜನ ಸೇರುವುದರಿಂದ ಸಮಸ್ಯೆಯಾಗುತ್ತಿದೆ. ಇದಕ್ಕಾಗಿ ನಿಯಮ ರೂಪಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಜೀವನ ಕುಮಾರ್ ಕಟ್ಟಿಮನಿ ಹೇಳಿದರು. ನಗರದಲ್ಲಿರುವ ಕಿರಾಣಿ ಅಂಗಡಿಗಳ ಮುಂದೆ ಜನ ಸೇರುವುದರಿಂದ ಕೊರೊನಾ ಸೊಂಕು ತಗುಲಬಹುದೆಂದು ನಗರದಾದ್ಯಂತ ಕೆಲವೇ ಕಿರಾಣಿ ಅಂಗಡಿ ಇಂದು, ನಾಳೆ ಮಾತ್ರ ತೆರೆಯಲು ಕ್ರಮ ವಹಿಸಲಾಗಿದೆ.

ದಿನಸಿ - ತರಕಾರಿ ಮಾರಾಟಕ್ಕೆ ಪೊಲೀಸ್ ಮತ್ತು ನಗರಸಭೆಯಿಂದ ನಿಯಮ

ಕಿರಾಣಿ ಅಂಗಡಿಗಳ ಮುಂದೆ ಗ್ರಾಹಕರು ನಿಲ್ಲಲು ಎರಡು ಅಡಿಗೆ ಒಂದರಂತೆ ಗುರುತು ಹಾಕಿ ಅದರೊಳಗೆ ನಿಂತು ಒಬ್ಬೊಬ್ಬರಾಗಿ ಬಂದು ದಿನಸಿ ಪಡೆಯಲು ತಿಳಿಸಲಾಗಿದೆ ಎಂದರು. ಅಲ್ಲದೆ ತರಕಾರಿ ಮಾರಾಟಕ್ಕೂ ನಗರದ ಕೆಲವು ಸ್ಥಳಗಳನ್ನು ಗುರುತು ಮಾಡಿ ಅಲ್ಲಿಯೇ ಹೋಗಿ ತರಕಾರಿ ಪಡೆಯಲು ಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

ಇಂದು ಪೊಲೀಸ್ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳು ತಿಳಿಸಿದಂತೆ ಬೆಳಿಗ್ಗೆ ಹತ್ತರಿಂದ ಸಂಜೆ ಐದು ಗಂಟೆಯವರೆಗೆ ದಿನದ ಪಾಳಿಯಂತೆ ಅಂಗಡಿ ತೆರೆಯಲಾಗುವುದು. ಅಂಗಡಿ ಮುಂದೆ ಹಾಕಿದ ಗುರುತಿನಲ್ಲಿ ನಿಂತು ಗ್ರಾಹಕರು ದಿನಸಿ ಪಡೆಯಬಹುದು. ಒಂದು ವೇಳೆ ನಿಯಮ ಪಾಲಿಸದಿದ್ದರೆ ಅಂಗಡಿ ಬಂದ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.