ಯಾದಗಿರಿ: ಹಳೆ ವೈಷಮ್ಯದ ಹಿನ್ನೆಲೆ ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ನಿವಾಸಿ ಯಲ್ಲಪ್ಪ ದರಮುಗರ ಎಂಬುವನನ್ನು ಆರೋಪಿಗಳಾದ ಗಿಡ್ಡಪ್ಪ ತಂದೆ ಲಕ್ಷ್ಮಣ, ಲಕ್ಷಣ ತಂದೆ ದುರಗಪ್ಪ ಮತ್ತು ಕಿರಣ ಎಂಬವರು ಸೇರಿ ನವೆಂಬರ್ 9 ರಂದು ಮಂಗಳೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಬಡಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.
ಅಲ್ಲದೇ, ಪ್ರಕರಣ ಮುಚ್ಚಿ ಹಾಕಲು ಮೃತದೇಹಕ್ಕೆ ಕಲ್ಲು ಕಟ್ಟಿ ಪಕ್ಕದ ಬಾವಿಯಲ್ಲಿ ಎಸೆದು ಹೋಗಿದ್ದರು. ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು, ಯಾದಗಿರಿ ಎಸ್.ಪಿ ರಿಷಿಕೇಶ್ ಭಗವಾನ ಸೋನಾವಣೆ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿ ಕಾರ್ಯಚರಣೆ ನಡೆಸಿ ಒಬ್ಬ ಆರೋಪಿಯನ್ನು ಹುಬ್ಬಳಿಯಲ್ಲಿ, ಇಬ್ಬರನ್ನು ತಿಂತಣಿ ಬ್ರಿಡ್ಜ್, ಹಾಗೂ ಇನ್ನೋರ್ವನನ್ನು ಹುಣಸಿಗಿಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಎರಡು ಬೈಕ್ ಮತ್ತು ಕೊಲೆಗೆ ಬಳಸಿದ ಆಯುಧಗಳನ್ನು ಜಪ್ತಿ ಮಾಡಲಾಗಿದೆ.