ಯಾದಗಿರಿ: ಯಾವುದೇ ಧರ್ಮದವರು ಇರಲಿ, ಕೊಲೆ ಮಾಡಿದರೆ ಅಂಥವರನ್ನು ಶೂಟೌಟ್ ಮಾಡಬೇಕು. ಪ್ರವೀಣ್ ನೆಟ್ಟಾರು ಹಂತಕರು ಸುಪಾರಿ ಕಿಲ್ಲರ್ ರೀತಿ ಕಾಣುತ್ತಾರೆ. ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದು ಸುರಪುರ ಶಾಸಕ ರಾಜೂಗೌಡ ತಿಳಿಸಿದ್ದಾರೆ.
ನಗರದಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಕುರಿತು ಪ್ರತಿಕ್ರಿಯೆ ನೀಡಿ, ಪೊಲೀಸರು ಶೂಟೌಟ್ ಮಾಡಿದಾಗ ಪ್ರಶ್ನೆ ಮಾಡುವ ಮಾನವ ಹಕ್ಕುಗಳ ಆಯೋಗದವರು ಬಿಜೆಪಿ ಮುಖಂಡನ ಹತ್ಯೆ ನಡೆದಾಗ ಏಕೆ ಮುಂದೆ ಬರುತ್ತಿಲ್ಲ. ಯುವಕರ ಕೊಲೆಗಳಾದಾಗ ಆಯೋಗದವರು ಬರಬೇಕು. ಘಟನೆ ನಡೆದ ನಂತರ ಕಠಿಣ ಕ್ರಮ ತೆಗೆದುಕೊಳ್ಳಲಾರದೇ ಸುಮ್ಮನೆ ಕಾನೂನು ಕ್ರಮ ಕೈಗೊಳ್ಳುತ್ತೇವೆಂದು ತಾತ್ಕಾಲಿಕ ಉತ್ತರ ಕೊಟ್ಟರೆ ಸಮಸ್ಯೆ ಬಗೆ ಹರಿಯುವುದಿಲ್ಲ ಎಂದರು.
ಯಾವ ಸರ್ಕಾರ ಪೊಲೀಸರಿಗೆ ಸುಮ್ಮನೆ ಬಿಟ್ಟಿದೆ? ಪೊಲೀಸರು ಯಾರಿಗಾದರೂ ಶೂಟೌಟ್ ಮಾಡಿದರೆ, ಪೊಲೀಸರಿಗೆ ಎಷ್ಟು ತನಿಖೆ ನಡೆಯುತ್ತದೆ ಗೊತ್ತಾ? ಮಾನವ ಹಕ್ಕುಗಳ ಆಯೋಗದವರು ಪೊಲೀಸರ ಮೇಲೆ ಬಂದು ಕುಳಿತುಕೊಳ್ಳುತ್ತಾರೆ. ಒಂದು ಸರಿ ಶೂಟೌಟ್ ಮಾಡಿದ ಅಧಿಕಾರಿ ಮತ್ತೆ ಬೇಡಪ್ಪಾ ಶೂಟೌಟ್ ಸಹವಾಸ ಎನ್ನುವಂತಹ ಪರಿಸ್ಥಿತಿ ಇದೆ ಎಂದರು.
ಇದನ್ನೂ ಓದಿ: ಆರೋಪಿಗಳು ದೇಶದ ಯಾವುದೇ ಮೂಲೆಯಲ್ಲಿರಲಿ ಅವರನ್ನು ಹಿಡಿಯುತ್ತೇವೆ : ಡಿ ವಿ ಸದಾನಂದ ಗೌಡ
ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಶಹಾಪುರ ತಾಲೂಕಿನ ಬಿಜೆಪಿ ಪದಾಧಿಕಾರಿಯೊಬ್ಬರು ತಮ್ಮ ಹುದ್ದೆ ಮತ್ತೆ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.