ಯಾದಗಿರಿ: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಗೆ ಕೊರೊನಾ ಭೀತಿ ಎದುರಾಗಿದ್ದು, ಇಂದು ಕೆಬಿಜೆಎನ್ಎಲ್ (ಕೃಷ್ಣ ಭಾಗ್ಯ ಜಲ ನಿಗಮ ) ಅಧಿಕಾರಿಗಳೊಂದಿಗೆ ನಡೆಯಬೇಕಿದ್ದ ಸಭೆ ರದ್ದು ಮಾಡಿದ್ದಾರೆ.
ಜಿಲ್ಲೆಯ ಶಹಾಪುರ ಪಟ್ಟಣದ ಹೊರಭಾಗದಲ್ಲಿನ ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯದಲ್ಲಿಂದು ಕೆಬಿಜೆಎನ್ಎಲ್ ಅಧಿಕಾರಿಗಳೊಂದಿಗೆ ಸಚಿವ ರಮೇಶ್ ಜಾರಕಿಹೋಳಿ ಮಧ್ಯಾಹ್ನ ಸಭೆ ನಡೆಸಬೇಕಾಗಿತ್ತು. ಕೆಬಿಜೆಎನ್ಎಲ್ ಅಧಿಕಾರಿ ಒಬ್ಬರಲ್ಲಿ ಕೊರೊನಾ ಸೋಂಕು ಪತ್ತೆ ಹಿನ್ನೆಲೆ, ಸಚಿವರ ಸಭೆ ನಡೆಸುವ ಕಾರ್ಯಕ್ರಮ ರದ್ದು ಮಾಡಲಾಗಿದೆ.
ಸೋಂಕಿತ ಅಧಿಕಾರಿ ಜೂನ್ 29ರಂದು ಭೀಮರಾಯನಗುಡಿಯ ಕೆಬಿಜೆಎನ್ಎಲ್ ಕಚೇರಿಯಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಭಾಗಿಯಾಗಿದ್ದರು. ಹೀಗಾಗಿ ಸಭೆಯಲ್ಲಿ ಭಾಗವಹಿಸಿದ್ದ 15 ಅಧಿಕಾರಿಗಳನ್ನ ಹೋಂ ಕ್ವಾರಂಟೈನ್ ಮಾಡಲಾಗಿದೆ.