ETV Bharat / state

ಅಲ್ಪಸಂಖ್ಯಾತ ವಸತಿ ನಿಲಯದಲ್ಲಿ ಸಚಿವ ಪ್ರಭು ಚವ್ಹಾಣ್ ವಾಸ್ತವ್ಯ: ಅವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ಧ ಗರಂ - ಸಚಿವ ಪ್ರಭು ಚವ್ಹಾಣ್ ಲೆಟೆಸ್ಟ್ ನ್ಯೂಸ್​

ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಜಿಲ್ಲೆಯ ಬಂದಳ್ಳಿ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿದ್ದು, ಅವ್ಯವಸ್ಥೆ ಕಂಡು ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ.

ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿದ ಸಚಿವ ಪ್ರಭು ಚವ್ಹಾಣ್
Minister Prabhu Chavan suddenly visited Residential School
author img

By

Published : Jan 3, 2020, 7:48 AM IST

ಯಾದಗಿರಿ: ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವಸತಿ ಶಾಲೆಗೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅವ್ಯವಸ್ಥೆ ಕಂಡ ಸಚಿವರು ಸಿಬ್ಬಂದಿಗೆ ಬಿಸಿ ಮುಟ್ಟಿಸಿದರು.

ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿದ ಸಚಿವ ಪ್ರಭು ಚವ್ಹಾಣ್

ರಾತ್ರಿ ಸುಮಾರು 8 ಗಂಟೆಗೆ ವಸತಿ ಶಾಲೆಗೆ ಸಚಿವರು ಭೇಟಿ ನೀಡಿದ್ದಾರೆ. ಈ ವೇಳೆ ಶಾಲೆಯ ದುಸ್ಥಿತಿ, ಸ್ವಚ್ಚತೆ ಕಂಡು ಸಿಡಿಮಿಡಿಗೊಂಡರು. ವಸತಿ ನಿಯಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ತಕ್ಷಣವೇ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ರು. ಜೊತೆಗೆ ರಾತ್ರಿ ವಸತಿ ಶಾಲೆಯಲ್ಲೇ ಸಚಿವರು ವಾಸ್ತವ್ಯ ಹೂಡಿದರು.

ರಾತ್ರಿ ಶಾಲಾ ಮಕ್ಕಳ ಜೊತೆ ಭೋಜನ ಮಾಡಿದ ಸಚಿವರು, ಉತ್ತಮ ಮಟ್ಟದ ಆಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಸಿಬ್ಬಂದಿ ಹಾಗು ವಿದ್ಯಾರ್ಥಿಗಳ ಹಾಜರಾತಿ ಪುಸ್ತಕ ಪರಿಶೀಲಿಸಿದ್ರು.

ಸಚಿವರ ದಿಢೀರ್‌ ಭೇಟಿ ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿಸಿದ್ದು, ಬಹುದಿನಗಳಿಂದ ಎದುರಿಸುತ್ತಿದ್ದ ವಸತಿನಿಲಯದ ಸಮಸ್ಯೆ ಇನ್ನಾದ್ರೂ ಬಗೆಹರಿಯಲಿ ಅನ್ನೋದು ವಿದ್ಯಾರ್ಥಿಗಳ ಆಶಾವಾದ.

Intro:ಶಿರಸಿ : ಗೋವಿನ ಜೋಳದ ಬೆಳೆಯನ್ನು ಕಾಯಲು ಹೊಲದಲ್ಲಿ ಮಲಗಿದ ರೈತನ ಮೇಲೆ ಆನೆ ದಾಳಿ ಮಾಡಿದ ಘಟನೆ ಮುಂಡಗೋಡು ತಾಲೂಕಿನ ಬಸನಾಳ ಗ್ರಾಮದ ಹೊಲವೊಂದರಲ್ಲಿ ನಡೆದಿದೆ.

ದೊಂಡು ವಿಟ್ಟು ಏಡಗೆ (65) ಈತನೆ ಆನೆದಾಳಿಗೆ ಸಿಲುಕಿ ಪ್ರಾಣಾಪಾಯದಿಂದ ಪಾರಾದ ರೈತನಾಗಿದ್ದಾನೆ. ಈತ ತನ್ನ ಹೊಲದಲ್ಲಿ ಗೋವಿನ ಜೋಳವನ್ನು ಬಿತ್ತಿದ್ದು, ಬೆಳೆಗಳು ಕಾಡು ಪ್ರಾಣಿಗಳಿಂದ ರಕ್ಷಿಸುವ ಸಲುವಾಗಿ ರಾತ್ರಿ ತನ್ನ ಹೊಲದಲ್ಲಿರುವ ಒಣ ಹುಲ್ಲಿನ ಬಣವಿಯ ಪಕ್ಕದಲ್ಲಿ ಮಲಗಿದ್ದಾನೆ. ಅರಣ್ಯ ಪಕ್ಕದಲ್ಲಿರುವುದರಿಂದ ಆಕಸ್ಮಿಕವಾಗಿ ರಾತ್ರಿ ಸಮಯದಲ್ಲಿಒಂಟೆಸಲಗ ಬತ್ತದ ಕಾಳಿನ ಬಣವಿಯೆಂದು ಬಾವಿಸಿ ಬಣವಿಯತ್ತ ಬಂದಿದೆ.

ಹುಲ್ಲಿನ ಬಣವಿ ಆಗಿದ್ದರಿಂದ ಹುಲ್ಲನ್ನುತನ್ನ ಸೊಂಡಿಲಿನಿಂದ ತಿವಿದು ಹಾಳು ಮಾಡಿದೆ. ಅಲ್ಲೆ ಪಕ್ಕದಲ್ಲಿ ಮಲಗಿದ್ದ ದೊಂಡುಗೆ ತನ್ನ ಸೊಂಡಿಲಿನಿಂದ ದೂಡಿ ಮತ್ತೆ ಆತನ ಮೇಲೆ ದಾಳಿ ಮಾಡವಸ್ಟರಲ್ಲಿ ಈತ ತಪ್ಪಿಸಿಕೊಂಡಿದ್ದು, ಈ ವೇಳೆ ಅಲ್ಪ ಗಾಯವಾಗಿದೆ.

Body:ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಗ್ರಾಮಸ್ಥರಿಗೆ ಆನೆ ಬಂದ ಬಗೆ ಮಾಹಿತಿ ನೀಡಿ ಎಚ್ಚರಿಕೆಯಿಂದ ಇರುವಂತೆ ತಿಳಿಸಿ ಆನೆ ದಾಳಿಯಿಂದ ಗಾಯವಾದ ರೈತನನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಕೊಡಿಸಲಾಗಿ ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ಕಳುಹಿಸಿದ್ದರು.
.........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.