ETV Bharat / state

ಪ್ರಿಯಾಂಕ್ ಖರ್ಗೆ ಹಿಟ್‌ ಅಂಡ್ ರನ್ ರೀತಿ ನಡೆದುಕೊಳ್ತಿದ್ದಾರೆ: ಸಚಿವ ಹಾಲಪ್ಪ - ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ ಸಚಿವ ಹಾಲಪ್ಪ ಆಚಾರ್​

ಅವರು ಏನ್ ಮಾತನಾಡುತ್ತಿದ್ದಾರೆ ಅನ್ನೋದು ಅವರಿಗೇ ಗೊತ್ತಿದೆಯೋ ಇಲ್ಲ ಗೊತ್ತಿಲ್ಲ. ಮಾಧ್ಯಮಗಳ ಮುಂದೆ ನನ್ನ ಬಳಿ ಇನ್ನೂ ಸಾಕ್ಷಿಗಳಿವೆ, ಬಿಡುಗಡೆ ಮಾಡ್ತೀನಿ ಅಂತಿದ್ದಾರೆ. ಸಿಐಡಿ ಅವರು ಸಾಕ್ಷಿ ಇದ್ದರೆ ತಂದು ಕೊಡಿ ಅಂತ ನೋಟಿಸ್ ಕೊಟ್ಟಿದ್ದಾರೆ. ಆದರೆ, ಸಾಕ್ಷಿಗಳನ್ನು ತಂದು ಕೊಡದೆ‌ ಯಾವ ಜವಾಬ್ದಾರಿಯಿಂದ ಮಾತಾಡುತ್ತಿದ್ದಾರೆ ಎಂದು ಸಚಿವ ಹಾಲಪ್ಪ ಆಚಾರ್​​ ಅವರು ಹರಿಹಾಯ್ದರು.

Minister Halappa Achar spark against former minister Priyank Kharge

author img

By

Published : Apr 28, 2022, 8:37 PM IST

ಯಾದಗಿರಿ: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹಿಟ್‌ ಅಂಡ್ ರನ್ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಅವರು ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದರು. ನಗರದ ಜಿಲ್ಲಾಡಳಿತ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಏನ್ ಮಾತನಾಡುತ್ತಿದ್ದಾರೆ ಎನ್ನೋದು ಅವರಿಗೆ ಗೊತ್ತಿದೆಯೋ ಇಲ್ಲ ಗೊತ್ತಿಲ್ಲ. ಮಾಧ್ಯಮಗಳ ಮುಂದೆ ನನ್ನ ಬಳಿ ಇನ್ನೂ ಸಾಕ್ಷಿಗಳಿವೆ, ಬಿಡುಗಡೆ ಮಾಡ್ತೀನಿ ಅಂತ‌ ಹೇಳಿದ್ದಾರೆ. ಸಿಐಡಿ ಅವರು ಸಾಕ್ಷಿ ಇದ್ದರೆ ತಂದು ಕೊಡಿ ಅಂತ ನೋಟಿಸ್ ಕೊಟ್ಟಿದ್ದಾರೆ. ಆದರೆ, ಸಾಕ್ಷಿಗಳನ್ನು ತಂದು ಕೊಡದೆ‌ ಯಾವ ಜವಾಬ್ದಾರಿಯಿಂದ ಮಾತಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಇದನ್ನೂ ಓದಿ: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ: ಸಿಐಡಿಯಿಂದ ಆರೋಪಿ ಯುವತಿಯ ಬಂಧನ

ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಇಂತಹ ಪ್ರಕರಣಗಳನ್ನ ಸಮಾಜದಲ್ಲಿ ಒಪ್ಪೋಕೆ ಆಗಲ್ಲ. ಇದನ್ನ ಖಂಡಿಸಬೇಕಾಗುತ್ತೆ. ಮಾನವೀಯತೆ ಇಲ್ಲದಂತ ಇಂತವರಿಗೆ ನಾವು ಮೃಗಗಳು ಅಂತ ಕರೆಯಬೇಕು. ಇಂತಹವರ ಬಗ್ಗೆ ಯಾವತ್ತೂ ಯಾರು ಅನುಕಂಪ ತೋರಿಸುವ ಅವಶ್ಯಕತೆ ಇಲ್ಲ. ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮಕೈಕೊಂಡು ಕಠಿಣ ಶಿಕ್ಷೆ ನೀಡಬೇಕು ಎಂದು ಹೇಳಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.