ETV Bharat / state

ವಿಡಿಯೋ; ಬೈಕ್​ನಲ್ಲಿ ಸೇತುವೆ ದಾಟಲು ಹೋಗಿ ಕೊಚ್ಚಿ ಹೋದ ಸವಾರನನ್ನು ರಕ್ಷಿಸಿದ ಸ್ಥಳೀಯರು - ಗುರಮಿಠಕಲ್ ಸುದ್ದಿ

ಸೇತುವೆ ಮೇಲೆ ಬೈಕ್ ಏರಿ ಸವಾರರಿಬ್ಬರು ತೆರಳುತ್ತಿದ್ದಾಗ, ನೀರಿನ ರಭಸಕ್ಕೆ ಬೈಕ್ ಸಮೇತ ಹಳ್ಳಕ್ಕುರುಳಿ ಮುಂಬದಿ ಸವಾರ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಈ ವೇಳೆ ಬೈಕ್ ಸವಾರನನ್ನು ಸ್ಥಳೀಯರು ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ...

Man saved by villagers
ಬೈಕ್​ ಸವಾರನನ್ನು ರಕ್ಷಿಸಿದ ಸ್ಥಳೀಯರು
author img

By

Published : Sep 26, 2020, 3:22 PM IST

ಯಾದಗಿರಿ: ಭಾರಿ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನೋರ್ವನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಜಿಲ್ಲಾದ್ಯಂತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಹಳ್ಳ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಗುರಮಿಠಕಲ್ ತಾಲೂಕಿನ ಎಲ್ದೇರಿ ಗ್ರಾಮದ ಬಳಿ ಇರುವ ಸೇತುವೆ ಸಂಪೂರ್ಣ ಜಲಾವೃತಗೊಂಡಿತ್ತು. ಈ ಸೇತುವೆ ಮೇಲೆ ಬೈಕ್ ಏರಿ ಸವಾರರಿಬ್ಬರು ತೆರಳುತ್ತಿದ್ದಾಗ, ನೀರಿನ ರಭಸಕ್ಕೆ ಬೈಕ್ ಸಮೇತ ಹಳ್ಳಕ್ಕುರುಳಿ ಮುಂಬದಿ ಸವಾರ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಈ ವೇಳೆ ಎಲ್ದೇರಿ ಗ್ರಾಮದ ನಿವಾಸಿ ಬೈಕ್ ಸವಾರ ನಿಂಗಪ್ಪನನ್ನು ಸ್ಥಳೀಯರು ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ.

ಬೈಕ್​ ಸವಾರನನ್ನು ರಕ್ಷಿಸಿದ ಸ್ಥಳೀಯರು

ಗ್ರಾಮದ ಜನರು ಸಮಯಪ್ರಜ್ಞೆ ಮೆರೆದು ಓರ್ವನ ಪ್ರಾಣ ಉಳಿಸಿ ಮಾನವೀಯತೆ ಮೆರೆದಿದ್ದಾರೆ. ಇವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.