ಯಾದಗಿರಿ: ಲಾಕ್ಡೌನ್ನಿಂದಾಗಿ ಹೃದ್ರೋಗದಿಂದ ಬಳಲುತ್ತಿದ್ದ ಅಜ್ಜಿಗೆ ಮಾತ್ರೆ ಸಿಗದೆ ಸಂಕಷ್ಟ ಎದುರಾಗಿತ್ತು. ಈ ವೇಳೆ ಅಜ್ಜಿಯ ಮೊಮ್ಮಗ ಮಾಡಿದ ಉಪಾಯದಿಂದ 12 ಗಂಟೆಯೊಳಗೆ ಅಜ್ಜಿಗೆ ಮಾತ್ರೆ ತಲುಪಿದೆ.
ಜಿಲ್ಲೆಯ ಗುರಮಿಠಕಲ್ ತಾಲೂಕಿನ ಕಂದಕುರ ಗ್ರಾಮದ ಸತ್ಯಮ್ಮ ಎಂಬುವ ವೃದ್ದೆ ಲಾಕ್ ಡೌನ್ ಹಿನ್ನೆಲೆ ಮಾತ್ರೆ ಸಿಗದೆ ಬಳಲುತ್ತಿದ್ದಳು. ಮುಂಬೈನಲ್ಲಿ ವಾಸವಿದ್ದ ಸತ್ಯಮ್ಮ ಕಳೆದ ಎರಡು ತಿಂಗಳ ಹಿಂದೆ ಸ್ವಗ್ರಾಮ ಕಂದಕುರಕ್ಕೆ ಆಗಮಿಸಿದ್ದಳು. ಲಾಕ್ ಡೌನ್ ಹಿನ್ನೆಲೆ ಗ್ರಾಮದಲ್ಲೇ ಉಳಿಯುವಂತಾಗಿತ್ತು.
ಇತ್ತ ಅಜ್ಜಿಯ ಮೊಮ್ಮಗ ಮುಂಬೈನಲ್ಲೇ ಇದ್ದರು. ಅಜ್ಜಿಗೆ ಸೂಕ್ತ ಸಮಯಕ್ಕೆ ಮಾತ್ರೆ ದೊರಕದ ಹಿನ್ನಲೆ ಅವರು ಆನ್ಲೈನ್ ಮೂಲಕವೇ ತನ್ನ ಅಜ್ಜಿಗೆ ಮಾತ್ರೆ ಒದಗಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕೇಳಿಕೊಂಡಿದ್ದರು. ಮನವಿ ಮಾಡಿಕೊಂಡ 12 ಗಂಟೆಯೊಳಗೆ ಅಜ್ಜಿಗೆ ಮಾತ್ರೆ ತಲುಪಿಸಲಾಗಿದೆ.
ಯಾದಗಿರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ವೃದ್ದೆ ಸತ್ಯಮ್ಮಗೆ ಮಾತ್ರೆಗಳನ್ನ ನೀಡಿ ಮಾನವಿಯತೆ ಮೆರದಿದ್ದಾರೆ.