ETV Bharat / state

ದಿನಕ್ಕೆ 50 ರೂಪಾಯಿ ದುಡಿಮೆಯೂ ಕಷ್ಟವಾಗಿದೆ: ಇದು ಚಮ್ಮಾರರ ಬದುಕಿನ ವೇದನೆ

ನಗರದಲ್ಲಿ ವಾಸವಾಗಿರುವ ಚಮ್ಮಾರಿಕೆ ಕಾಯಕದ ಕುಟುಂಬಗಳಿಗೆ ಲಾಕ್‌ಡೌನ್‌ನಿಂದ ದೈನಂದಿನ ಬದುಕಿಗೆ ತೊಂದರೆಯಾಗಿದೆ.

Lockdown Effect Families Suffer From Time To Dine In Surapur
ಲಾಕ್ ಡೌನ್ ಎಫೆಕ್ಟ್: ಸುರಪುರದಲ್ಲಿ ಹೊತ್ತಿನ ಊಟಕ್ಕೂ ಪರದಾಡುತ್ತಿವೆ ಚಮ್ಮಾರ ಕುಟುಂಬಗಳು..!
author img

By

Published : Apr 29, 2020, 5:57 PM IST

ಸುರಪುರ: ನಗರದಲ್ಲಿ ವಾಸವಾಗಿರುವ ಚಮ್ಮಾರಿಕೆ ಕಾಯಕದ ಕುಟುಂಬಗಳಿಗೆ ಲಾಕ್‌ಡೌನ್‌ನಿಂದ ತೀವ್ರ ಸ್ವರೂಪದ ತೊಂದರೆಗೆ ಸಿಲುಕಿವೆ.

ಪಾದರಕ್ಷೆಗಳನ್ನು ಸರಿಪಡಿಸಿ ಕೈಗೆ ಬಂದ ಆದಾಯದಲ್ಲಿ ಜೀವನ ನಡೆಸುವ ಈ ಕುಟುಂಬಗಳಿಗೆ ಈಗ ಕೆಲಸವಿಲ್ಲದಂತಾಗಿದೆ. ಸಂಘ ಸಂಸ್ಥೆಗಳು ಕೊಡುವ ಆಹಾರ ದಿನಸಿ ಮೇಲೆ ಜೀವನ ಸಾಗಿಸುತ್ತಿದ್ದಾರೆ. ಕೊರೊನಾದಿಂದಾಗಿ ಜನರು ಹೊರಗೆ ಬರದಿರುವುದರಿಂದ ಪಾದರಕ್ಷೆ ದುರಸ್ತಿ ಕೆಲಸ ನಿಂತುಹೋಗಿದೆ. ಇದರಿಂದ ಚಮ್ಮಾರರ ಬದುಕೂ ನಿಂತು ಹೋಗಿದೆ. ದಿನಕ್ಕೆ 50 ರೂಪಾಯಿ ದುಡಿಯಲಾಗದೆ ಕಷ್ಟಪಡುವಂತಾಗಿದೆ ಎಂದು ಚಮ್ಮಾರಿಕೆ ಮಾಡುವ ಅಂಬ್ಲಯ್ಯ ಗೋಳು ತೋಡಿಕೊಂಡರು.

ಹೀಗಾಗಿ ಕುಟುಂಬಗಳಿಗೆ ತಿಂಗಳಿಗೆ ಕನಿಷ್ಠ 10 ಸಾವಿರ ರೂ ಪಿಂಚಣಿ ಹಾಗೂ ಚಮ್ಮಾರಿಕೆ ಕಿಟ್‌ಗಳನ್ನು ಸರ್ಕಾರ ನೀಡಬೇಕೆಂದು ಅನೇಕರು ಆಗ್ರಹಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.