ETV Bharat / state

ಅಚ್ಚಪ್ಪಗೌಡ ಸುಬೇದಾರ ಟ್ರಸ್ಟ್ ವಾರ್ಷಿಕೋತ್ಸವ: 5001 ಮುತೈದೆಯರಿಗೆ ಉಡಿ ತುಂಬುವ ಕಾರ್ಯ - ಬೃಹತ್ ಉಚಿತ ಆರೋಗ್ಯ ಶಿಬಿರ

ದಿ.ಅಚ್ಚಪ್ಪಗೌಡ ಸುಬೇದಾರ ಟ್ರಸ್ಟ್ ಐದನೇ ವಾರ್ಷಿಕೋತ್ಸವ ಹಿನ್ನೆಲೆ - ಬೃಹತ್ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ ಉದ್ಘಾಟನೆ.

Late Achappa Gowda Subedara Trust
ದಿ.ಅಚ್ಚಪ್ಪಗೌಡ ಸುಬೇದಾರ ಟ್ರಸ್ಟ್ ಐದನೇ ವಾರ್ಷಿಕೋತ್ಸವ
author img

By

Published : Jan 9, 2023, 2:47 PM IST

Updated : Jan 9, 2023, 7:45 PM IST

ಅಚ್ಚಪ್ಪಗೌಡ ಸುಬೇದಾರ ಟ್ರಸ್ಟ್ ವಾರ್ಷಿಕೋತ್ಸವ

ಯಾದಗಿರಿ: ಸ್ವಾರ್ಥ ಬಿಟ್ಟು ಜನರ ಸೇವೆಯಲ್ಲಿ ತೊಡಗಿರುವ ಡಾ. ಸುಬೇದಾರ ಅವರು ಮೂಲತಃ ವೈದ್ಯರಾಗಿದ್ದರೂ ಸಮಾಜ ಸೇವೆ ಮೈಗೂಡಿಸಿಗೊಂಡಿದ್ದು, ನಿಜಕ್ಕೂ ಅವರ ಕಾರ್ಯ ಪ್ರತಿಯೊಬ್ಬರಿಗೂ ಮಾದರಿ ಎಂದು ಸಂಸದ ರಾಜ ಅಮರೇಶ್ವರ ನಾಯಕ ಹೇಳಿದರು. ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿ.ಅಚ್ಚಪ್ಪಗೌಡ ಸುಬೇದಾರ ಟ್ರಸ್ಟ್ ಐದನೇ ವಾರ್ಷಿಕೋತ್ಸವ ಹಿನ್ನೆಲೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಗೋಮಾತೆ ಪೂಜಿಸುವ ಮೂಲಕ ಬೃಹತ್ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರಿಗೂ ವಿಶೇಷವಾಗಿ ಕೊವೀಡ್ ಸಮಯದಲ್ಲಿ ವೈದ್ಯರ ಮಹತ್ವ ತಿಳಿದಿದೆ. ಸುಭೇದಾರ ಅವರು ವೈದ್ಯರಾಗಿ ಜನಪರ ಸೇವೆಗಳನ್ನು ಮಾಡುತ್ತಿದ್ದಾರೆ. ಅಚ್ಚಪ್ಪಗೌಡರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ದೇಶದ ಜನರ ಹಿತರಕ್ಷಣೆಯಲ್ಲಿ ಸುಬೇದಾರ ಕುಟುಂಬ ಪ್ರಧಾನವಾಗಿದೆ. ದಂಗೆಕೋರರ ವಿರುದ್ಧ ಹೋರಾಟ ಮಾಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜೀವ ಪಣಕ್ಕಿಟ್ಟು ಕಾಪಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಕೋಟಿ ನಮನ ತಿಳಿಸಿದರು. ವೈದ್ಯ ವೃತ್ತಿಯಿಂದ ಜನರ ಸೇವೆಗೆ ಸಮರ್ಥವಾಗಿ ಬಳಸಿಕೊಂಡು ಸೇವಾ ಕೈಂಕರ್ಯಗಳನ್ನು ವಿಸ್ತರಿಸಿ ಬಡವರಿಗೆ ಪಾಲಿಗೆ ಬೆಳಕಾಗಿದ್ದಾರೆ ಎಂದು ಡಾ. ಸುಬೇದಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನು ಓದಿ:ಕಾಂಗ್ರೆಸ್​​ನ ಎಸ್​ಸಿ, ಎಸ್​ಟಿ ಸಮಾವೇಶಕ್ಕೆ ಬೆಲೆ ಎಲ್ಲಿದೆ?: ಬಿಎಸ್​ವೈ

ಇನ್ನು ಸುರಪುರ ಶಾಸಕ ರಾಜೂಗೌಡ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಧಾರಾವಾಹಿ, ಚಲನಚಿತ್ರ, ಪುಸ್ತಕಗಳ ರಚಿಸುವ ಮೂಲಕ ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕಿದೆ. ಸೇವೆ ಕಾರ್ಯ ಮುಂದುವರೆಯಲಿ. ವೃತ್ತಿಯಾಗಿ ಬದುಕುವುದು ಬೇಡ ಸಮಾಜಕ್ಕೆ ಒಳಿತು ಮಾಡುವ ನಿಟ್ಟಿನಲ್ಲಿ ಬದುಕಬೇಕು. ಸುಬೇದಾರ ಕುಟುಂಬ ಹೀಗೆ ನಿರಂತರ ಜನರ ಸೇವೆಯಲ್ಲಿ ತೊಡಗಿಕೊಳ್ಳಲಿ ಎಂದು ಇದೇ ವೇಳೆ ಶುಭ ಹಾರೈಸಿದರು.

ಇದನ್ನು ಓದಿ: ಭಯಾನಕ ಚಳಿ: ಕಾನ್ಪುರದಲ್ಲಿ 98 ಮಂದಿ ಹೃದಯಾಘಾತದಿಂದ ಸಾವು!

ಕಾರ್ಯಕ್ರಮದಲ್ಲಿ ಫಕೀರೇಶ್ವರ ಮಠದ ಪೂಜ್ಯ ಗುರುಪಾದ ಮಹಾಸ್ವಾಮಿಗಳು, ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ಪೂಜ್ಯ ಬಸವಯ್ಯ ಶರಣರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಕೂಡ ಮಾತನಾಡಿದ್ದು, ದಿ.ಅಚ್ಚಪ್ಪಗೌಡ ಸುಬೇದಾರ ಚರಿತ್ರೆಯ ಒಳಗೊಂಡ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ಹಾಗೆ ಕಾರ್ಯಕ್ರಮಕ್ಕೂ ಮುನ್ನ ಗೋಮಾತೆಯ ಪೂಜೆ ನೆರವೇರಿಸಲಾಯಿತು.

ರಿಲಯನ್ಸ್ ಜಿಯೋ ಜೊತೆ Motorola ಪಾಲುದಾರಿಕೆ.. 5G ಸೇವೆ ಪಡೆಯಲು ಈ ನಿರ್ಧಾರ

ನಂತರ 5001 ಮುತೈದೆಯರಿಗೆ ಉಡಿ ತುಂಬಿಸಿ ಬೆಂಗಳೂರು ಸಪ್ತಗಿರಿ ಆಸ್ಪತ್ರೆಯ ಹಾಗೂ ಟ್ರಸ್ಟ್ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ಶಿಬಿರ ನಡೆಯಿತು. 200ಕ್ಕೂ ಹೆಚ್ಚು ರೋಗಿಗಳ ಆರೋಗ್ಯ ತಪಾಸಣೆ ನಡೆದದಲ್ಲದೆ ಆಗಮಿಸಿದ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ಗವಿಮಠ ದಾಸೋಹದಲ್ಲಿ ತರಹೇವಾರಿ ಖಾದ್ಯ: ಭಕ್ತರಿಗಾಗಿ ತಯಾರಾಗ್ತಿದೆ 4 ಲಕ್ಷ ಮಿರ್ಚಿ

Last Updated : Jan 9, 2023, 7:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.