ETV Bharat / state

ವಿದ್ಯುತ್ ಕೊರತೆಯಿಂದ ನೀರಿಲ್ಲ, ಸೊರಗುತ್ತಿದೆ ಬಾಳೆ ಬೆಳೆ ಜೊತೆ ರೈತನ ಬದುಕು - ರೈತ

ಸಕಾಲಕ್ಕೆ ವಿದ್ಯುತ್ ಸೌಲಭ್ಯ ನೀಡಿದ್ದರೆ ಬಾಳೆ ಸಸಿಗಳಿಗೆ ನೀರು ಬಿಡುತ್ತಿದ್ದೆ. ಆದ್ರೆ, ಇಲಾಖೆ ಸರಿಯಾಗಿ ವಿದ್ಯುತ್  ಕೊಡದ ಪರಿಣಾಮ ಬಾಳೆ ಸಸಿಗಳು ಒಣಗಿವೆ ಎಂದು ಸರಕಾರದ ಮೇಲೆ ರೈತರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೀರಿಲ್ಲದೆ ಬಾಳೆ ಬೆಳೆ ನಾಶ
author img

By

Published : May 29, 2019, 9:34 AM IST

ಯಾದಗಿರಿ: ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಬೆಳೆದ ಬಾಳೆ ಸಸಿಗಳು ಸಮರ್ಪಕ ವಿದ್ಯುತ್ ಸೌಲಭ್ಯವಿಲ್ಲದೇ ಸೊರಗುತ್ತಿದ್ದು ರೈತ ತಲೆ ಮೇಲೆ ಕೈ ಇಟ್ಟು ಅಸಹಾಯಕನಾಗಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಹಾಪುರ ತಾಲೂಕಿನ ಕೊಳ್ಳೂರ ಎಂ ಗ್ರಾಮದ ರೈತ ವಿರುಪಾಕ್ಷಯ್ಯ ಸ್ವಾಮಿ ತನ್ನ ಎರಡೂವರೆ ಎಕರೆ ಜಮೀನಿನಲ್ಲಿ ನಾಲ್ಕು ಲಕ್ಷ ರೂ. ಖರ್ಚು ಮಾಡಿ ಬಾಳೆ ತೋಟ ಮಾಡಿದ್ದಾರೆ. ಆ ತೋಟದಲ್ಲಿ ಸುಮಾರು ಮೂರುವರೆ ಸಾವಿರಕ್ಕೂ ಹೆಚ್ಚು ಬಾಳೆ ಸಸಿಗಳನ್ನು ನೆಟ್ಟಿದ್ದಾರೆ. ಆದ್ರೆ ವಿದ್ಯುತ್ ಕೊರತೆಯಿಂದ ಸಾವಿರಾರು ಬಾಳೆ ಸಸಿಗಳು ನೀರಿಲ್ಲದೆ ಒಣಗಿದ್ದು, ರೈತನ ಕೃಷಿ ಜೀವನಕ್ಕೆ ಮುಳುವಾಗಿದೆ.

ನೀರಿಲ್ಲದೆ ಬಾಳೆ ಬೆಳೆ ನಾಶ

ದಿನನಿತ್ಯ ಬಾಳೆ ಸಸಿಗಳ ಪಾಲನೆ-ಪೋಷಣೆ ಮಾಡುವ ಅವಶ್ಯಕತೆ ಇದ್ದು, ಸದ್ಯ ನೀರಿಲ್ಲದೇ ವಿರುಪಾಕ್ಷಯ್ಯರಿಗೆ ದಿಕ್ಕೆ ತೋಚದಂತಾಗಿದೆ. ಸಸಿಗಳನ್ನು ನೆಡುವ ಪೂರ್ವದಲ್ಲಿ ಮನದಲ್ಲಿ ಆಸೆಯ ಬೀಜ ಬಿತ್ತಿದ್ದೆ. ಆದ್ರೆ, ಬೆಳೆಯೂ ನಶಿಸುತ್ತಿದ್ದು, ನನ್ನ ನಿರೀಕ್ಷೆಯಾ ಮಾಸಿ ಹೋಗುತ್ತಿದೆ ಎಂದು ರೈತ ವಿರುಪಾಕ್ಷಯ್ಯ ಅಳಲು ತೋಡಿಕೊಂಡಿದ್ದಾರೆ .

ಸರಕಾರ ಸರಿಯಾದ ಸಮಯಕ್ಕೆ ವಿದ್ಯುತ್ ನೀಡಿದ್ದರೆ ಬಾಳೆ ಸಸಿಗಳಿಗೆ ನೀರು ಬಿಡುತ್ತಿದ್ದೆ.ಆದ್ರೆ, ಇಲಾಖೆ ಸರಿಯಾಗಿ ವಿದ್ಯುತ್ ಕೊಡದ ಪರಿಣಾಮ ಸಸಿಗಳು ಒಣಗಿವೆ ಎಂದು ಸರಕಾರದ ಮೇಲೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದ್ಯ ನಾನು ಮಾಡಿದ ಸಾಲವನ್ನು ಹೇಗೆ ತೀರಿಸಲಿ ಎನ್ನವುದು ಚಿಂತೆಯಾಗಿದೆ. ಕೈ ಸಾಲ ಮಾಡಿಕೊಂಡು ಜಮೀನಿಗೆ ದುಡ್ಡು ಹಾಕಿದ್ದೇನೆ. ಆದ್ರೆ,ಜಮೀನಿನಲ್ಲಿ ಸಸಿಗಳು ಒಣಗಿದ್ದು, ಬೆಳೆ ಸಿಗುವ ನಂಬಿಕೆ ಇಲ್ಲ.ಹೀಗಾಗಿ ಸಾಲ ತೀರಿಸುವುದು ಹೇಗೆ ಎಂದು ಚಿಂತಾಕ್ರಾಂತರಾಗಿರುವುದಾಗಿ ರೈತ ವಿರುಪಾಕ್ಷಯ್ಯ ತಿಳಿಸಿದ್ದಾರೆ.

ಪ್ರಾಕೃತಿಕ ವಿಕೋಪ ಯೋಜನೆಯಡಿಯಲ್ಲಿ ನಷ್ಟವಾದ ರೈತನಿಗೆ ಯೋಜನೆಯ ಲಾಭವನ್ನು ನೀಡುವಲ್ಲಿ ಜಿಲ್ಲಾಡಳಿತ ಮುಂದಾಗಬೇಕಾಗಿದೆ.

Intro:(ಸ್ಕ್ರಿಪ್ಟಗೆ ಸಂಬಂಧಿಸಿದ ವಿಜ್ಯುವಲ್ಸ ಎಪಟಿಪಿಗೆ ಹಾಕಲಾಗಿದೆ)

ಸ್ಥಳ : ಯಾದಗಿರಿ
ಫಾರ್ಮೆಟ : ಎ ವಿ
ಸ್ಲಗ್ : ರೈತನ ಬಾಳು ಬೀರುಗಾಳಿ.

ನಿರೂಪಕ : ಇತ್ತೀಚಿನ ದಿನಗಳಲ್ಲಿ ಬದುಕಿನ ಬಂಡಿ ಸಾಗಿಸವುದೆ ಕ್ಲೀಷ್ಟಕರ. ಸಾವಿರಾರು ವ್ಯಕ್ತಿಗಳ ನಡುವೆ ಬದುಕು ಸಾಗಿಸಬೇಕು ಎನ್ನುವುದರಲ್ಲಿ ಬೀರಗಾಳಿಗೆ ಸೀಲುಕಿ ಕೊಚ್ಚಿ ದಿಶೆಯಿಲ್ಲದಾಗುತ್ತೆ. ಅಂತಹ ಪರಿಸ್ಥಿತಿಯಲ್ಲಿ ಚೇತರಿಸಿಕೊಳ್ಳುವುದು ದೊಡ್ಡ ಸವಾಲು ಆದ್ರೂ ಕೂಡ ಚೇತರಿಸಿಕೊಂಡು ಬದುಕಿನ ಜಟಾಕ ಬಂಡಿ ಸಾಗಿಸುವುದರಲ್ಲಿ ದೊಡ್ಡ ದುರಂತವೆ ನಡೆಯುತ್ತೆ.

ಯೆಸ್ ಓದುಗೆರೆ ಇಂತದೊಂದು ಸಾಕ್ಷಿಯಾಗಿರುವುದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರ ಎಂ ಗ್ರಾಮವು . ಈ ಗ್ರಾಮದ ವ್ಯಕ್ತಿಯು ಬಡತಿನ ಬೇಗೆಗೆ ಬೆಂದು ಬೆಯಿದಿದ್ದಾನೆ. ಎಷ್ಟೋ ವರ್ಷಗಳ ನಡುವೆ ತನ್ನು ಕನಸನ್ನು ಕಮರಿಹೋಗದಂತೆ ನೋಡಿಕೊಂಡು ಬೆಳಿಸಿದ್ದಾನೆ. ಆ ಕನಸು ನನ್ನಸು ಮಾಡಲು ಹೋದಾಗ ನಡೆದಿರುವುದೆ ದೊಡ್ಡ ದುರಂತ.

ನಾವು ರೈತನ ದೇಶದ ಬೆನ್ನೆಲುಬು ಅಂತ ಹೇಳ್ತಿವಿ. ಆದ್ರೆ ರೈತ ಪಡುವ ಕಷ್ಟವ ನಾವು ನೋಡಲಾರೆವು. ಆದ್ರೆ ಅವನ ಅಲಸ್ಯದಿಂದ ನಾ ನೋಡುವುದು ಬೀಡಲಾರೆವು. ಯೆಸ್ ವೀಕ್ಷಕರೆ ನಾನು ಹೇಳುತ್ತಿರುವುದ ರೈತನ ಯಶೋಗಾಥೆ ಕಥೆಯಿದು.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರೈತನೊಬ್ಬ ತನ್ನ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚ ಮಾಡಿ ಬಾಳೆ ತೋಟ ಮಾಡಿದ್ದಾನೆ. ಆದ್ರೆ ಕೈಗೆ ಬಂದ ಲಾಭವು ಬಾಯಿಗೆ ಬಾರಂದತೆ ಮಾಡಿದೆ.

ಶಹಾಪುರ ತಾಲೂಕಿನ ಕೊಳ್ಳೂರ ಎಂ ಗ್ರಾಮದ ರೈತ ವಿರುಪಾಕ್ಷಯ್ಯ ಸ್ವಾಮಿ ತನ್ನ ಎರಡೂವರಿ ಎಕ್ರೆ ಜಮೀನಿನಲ್ಲಿ ನಾಲ್ಕು ಲಕ್ಷ ರೂಪಾಯಿ ಖರ್ಚು ಮಾಡಿ ಬಾಳೆ ತೋಟ ಮಾಡಿದ್ದಾನೆ. ಆ ತೋಟದಲ್ಲಿ ಸುಮಾರು ಮೂರಿವರಿ ಸಾವಿರಕ್ಕೂ ಹೆಚ್ಚು ಬಾಳೆ ಸಸಿಗಳನ್ನು ನೆಟ್ಟಿದ್ದಾನೆ. ಆದ್ರೆ ಅಸಮರ್ಪಕ ವಿದ್ಯುತ್ ಕೊರತೆಯಿಂದ ಸಾವಿರಾರು ಬಾಳೆ ಸಸಿಗಳು ಒಣಗಿದ್ದು ರೈತನ ಜೀವಕ್ಕೆ ಮುಳುವಾಗಿದೆ.

ದಿನನಿತ್ಯ ಬಾಳೆ ಸಸಿಗಳಗೆ ಪಾಲನೆ ಪೋಷಣೆ ಮಾಡುತ್ತಿದ್ದ ವಿರುಪಾಕ್ಷಯ್ಯನಿಗೆ ದಿಕ್ಕೆ ತೋರದಂತೆ ಅಗಿದೆ. ಸಸಿಗಳನ್ನು ನೆಡುವ ಪೂರ್ವದಲ್ಲಿ ಆಶೆಯ ಬೀಜ ಬಿತ್ತಿದೆ ಆದ್ರೆ ಬೀಜಗಳು ನಶಿಸುವೆ ಹೋಗಿವೆ ಎಂದು ಹೇಳುತ್ತಾರೆ ರೈತ ವಿರುಪಾಕ್ಷಯ್ಯ.

Body:ಸರಕಾರ ಸರಿಯಾದ ಸಮಯಕ್ಕೆ ವಿದ್ಯುತ್ ನೀಡುತ್ತಿದ್ದರೆ, ಬಾಳೆ ಸಸಿಗಳಿಗೆ ನೀರು ಬಿಡುತ್ತಿದೆ. ಆದ್ರೆ ವಿದ್ಯುತ್ ಇಲಾಖೆ ಸರಿಯಾಗಿ ಕರೆಂಟ ಕೊಡದೆ ಪರಿಣಾಮ ಸಸಿಗಳು ಒಣಗಿವೆ ಎಂದು ಪರೋಷವಾಗಿ ಸರಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಾನೆ.

Conclusion:ನಾನು ಮಾಡಿದ ಸಾಲವಾದ್ರೂ ಹೇಗೆ ತೀರಿಸಲೆ ಎನ್ನದೂ ಚಿಂತೆಯಾಗಿದೆ. ಕೈ ಸಾಲ ಮಾಡಿಕೊಂಡು ಜಮೀನಿಗೆ ಹಾಕಿದ್ದೆನೆ. ಅದ್ರೆ ಜಮೀನಿನಲ್ಲಿ ಸಿಸಗಳು ಒಣಗಿದ್ದೂ ನನ್ನಗೆ ಸಾಲ ತೀರಿಸುವುದು ಚಿಂತಾಕ್ರಾಂತಿಯಾಗಿದೆ. ಬದುಕೆ ಬೇಸರವೆನಿಸಿದೆ ಎಂದು ಅಳಲು ತೋಡಿಕೊಳ್ಳುತ್ತಾನೆ ರೈತ ವಿರುಪಾಕ್ಷಯ್ಯ.

ಇತ್ತ ಜಿಲ್ಲಾಡಳಿತ ಪ್ರಾಕೃತಿಕ ವಿಕೋಪದ ಯೋಜನೆಡಿಯಲ್ಲಿ ನಷ್ಟವಾದ ರೈತನಿಗೆ ಯೋಜನೆಯ ಲಾಭವನ್ನು ನೀಡುವಲ್ಲಿ ಜಿಲ್ಲಾಡಳಿತ ಮುಂದಾಗಬೇಕಾಗಿದೆ. ಆದ್ರೆ ಜಿಲ್ಲಾಡಳಿತ ಎಷ್ಟರಮಟ್ಟಿಗೆ ಕೆಲಸ ಮಾಡುತ್ತೆ ಅನ್ನುವುದು ಕಾದು ನೋಡಬೇಕಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.