ಯಾದಗಿರಿ: ಮಹಾರಾಷ್ಟ್ರದಲ್ಲಿ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾನದಿಯ ತಟದಲ್ಲಿರುವ ಛಾಯ ಭಗವತಿ ದೇವಾಸ್ಥಾನವು ಮುಳುಗುವ ಹಂತಕ್ಕೆ ತಲುಪಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾನದಿಗೆ ನೀರು ಬಿಡಲಾಗಿದೆ. ಆದ್ದರಿಂದ ನದಿಯ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ಕಾರಣ ದೇವಸ್ಥಾನದ 18 ತೀರ್ಥ ಕುಂಡಗಳು ಮತ್ತು ಮೆಟ್ಟಿಲುಗಳು ಜಲಾವೃತ್ತಗೊಂಡಿದ್ದು, ದೇವಸ್ಥಾನದ ಗರ್ಭಗುಡಿಯೊಳಗೂ ನೀರು ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ.
ಆಲಮಟ್ಟಿ ಜಲಾಶಯವು ತುಂಬುತ್ತಿದ್ದಂತೆ ಕೆಬಿಜೆಎನ್ಎಲ್ ಅಧಿಕಾರಿಗಳು ನಾರಾಯಣಪುರ ಬಸವ ಸಾಗರ ಜಲಾಶಯಕ್ಕೆ ನೀರು ಹರಿಸುತ್ತಿದ್ದಾರೆ. ಬಸವ ಸಾಗರ ಜಲಾಶಯದಿಂದ ಕೃಷ್ಣಾನದಿಗೆ 2,36,400 ಕ್ಯೂಸೆಕ್ ನೀರನ್ನು 24 ಗೇಟುಗಳ ಪೈಕಿ 21 ಗೇಟುಗಳಲ್ಲಿ ನೀರನ್ನು ಬಿಟ್ಟಿದ್ದಾರೆ. ನದಿಯ ತಟದಲ್ಲಿರುವ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜಿಲ್ಲಾಡಳಿತ ಸೂಚಿಸಿದೆ.